ಫಿಲ್ಮ್ ‘ಪಂಚ್’ May 31, 2008
Posted by magiccaarpet in dailogue.1 comment so far
ಇಳಯರಾಜಾ ಎಂಬ ‘ದ ಮೇಸ್ಟ್ರೊ’ May 31, 2008
Posted by magiccaarpet in cine'master'.add a comment
-ಶ್ರೀನಿವಾಸರಾಜು
ಶ್ರೀನಿವಾಸರಾಜು ಕನ್ನಡದ ಚಿತ್ರ ಪತ್ರಿಕೋದ್ಯಮದಲ್ಲಿನ ಹೊಸ ಹೆಸರು. ಸೂಕ್ಷ್ಮ ನೋಟದ ಇವರು ‘ಕನ್ನಡ ಟೈಮ್ಸ್’ನಲ್ಲಿ ಬರೆಯುತ್ತಿರುವ ಬರಹಗಳು ಈಗಾಗಲೇ ಗಮನ ಸೆಳೆದಿದೆ. ಇಳಯರಾಜ ಎಂಬ ಸಂಗೀತ ಮಾಂತ್ರಿಕನ ಬಗ್ಗೆ ಅವರು ಬರೆದಿರುವ ‘ದ ಮೇಸ್ತ್ರೋ’ ಅವರ ಪ್ರತಿಬೆಗೆ ಒಂದು ಸ್ಯಾಂಪಲ್. ಶ್ರೀನಿವಾಸರಾಜು ಇನ್ನು ಮುಂದೆ ನಿಯತವಾಗಿ ‘ಮ್ಯಾಜಿಕ್ ಕಾರ್ಪೆಟ್’ನಲ್ಲಿ ಬರೆಯುತ್ತಾರೆ.
ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಂಸಲೇಖ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಗ ಅವರನ್ನು ಸಭೆಗೆ ಪರಿಚಯಿಸುತ್ತ ಯಾರೋ, `ದಕ್ಷಿಣ ಭಾರತದ ಖ್ಯಾತ ಸಂಗೀತ ನಿದರ್ೇಶಕ’ಎಂಬ ವಿಶೇಷಣ ಹಚ್ಚಿ ಕೊಂಡಾಡಿದರು. ಈ ಪರಾಕು ಆಕಸ್ಮಿಕವಾಗಿತ್ತೋ ಇಲ್ಲವೋ ತಿಳಿದು ಬರಲಿಲ್ಲ. ಆದರೆ ಹಂಸ್ರ ಕಟ್ಟಾ ಅಭಿಮಾನಿಗಳಾಗಿದ್ದ ನನ್ನಂಥವರಿಗೆ ಅದು ಆ ಕ್ಷಣ ವಿಚಿತ್ರವಾಗಿ ಕೇಳಿಸಿತು. ವಾಸ್ತವವಾಗಿ ಇಂಥ ಹೊಗಳಿಕೆಗಳೆಲ್ಲ ಸಲ್ಲಬೇಕಾದದ್ದು ಇಳಯರಾಜರಿಗಲ್ಲವೇ ಎಂದು ನಾವೊಂದಷ್ಟು ಜನ ಆಡಿಕೊಂಡೆವು. ಇದಕ್ಕೆ ಕಾರಣಗಳೂ ಇದ್ದವು. ಇಳಯರಾಜ ದಕ್ಷಿಣದ ಎಲ್ಲ ಚಿತ್ರರಂಗಗಳಲ್ಲೂ ಕೆಲಸ ಮಾಡಿದ್ದಾರೆ ಎಂಬುದಷ್ಟೇ ಗಮನಾರ್ಹ ಅಲ್ಲ. ಅಥವಾ ಅವರು ಎಲ್ಲ ಭಾಷೆಗಳಲ್ಲೂ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ ಎಂಬುದೂ ಮುಖ್ಯವಲ್ಲ. ಇವೆಲ್ಲವನ್ನೂ ಮೀರಿ ಇಳಯರಾಜರ ಸಾಧನೆ ಇದೆ. ಅಸಾಧಾರಣ ಜೀನಿಯಸ್ ಆತ. ಮಹಾ ವೃತ್ತಿಪರ ಕೂಡ. ಕನ್ನಡದಲ್ಲೂ ಸಹ ಇಳಯರಾಜ ಇಲ್ಲಿನ ಜಾಯಮಾನಕ್ಕೆ ತಕ್ಕ ಸಂಗೀತವನ್ನು ಒದಗಿಸಿದರು ಮತ್ತು ಈಗಾಗಲೇ ಪ್ರಸಿದ್ಧವಾಗಿದ್ದ ತಮ್ಮ ಸಂಯೋಜನೆಯ ಟ್ಯೂನ್ಗಳನ್ನು ಬಳಸದೆ, ತಾಜಾ ಚೇತೋಹರಿ ರಾಗಗಳನ್ನೇ ಹೊಸೆದರು. ಈ ದೃಷ್ಟಿಯಲ್ಲಿ ದಕ್ಷಿಣ ಭಾರತದ ಇತರೆ ಪ್ರತಭಾವಂತ ಸಂಗೀತ ನಿದರ್ೇಶಕರಾದ ಹಂಸಲೇಖ, ಕೀರವಾಣಿ, ಎ.ಆರ್.ರೆಹಮಾನ್ ಮುಂತಾದವರೆಲ್ಲ ಇಳಯರಾಜರಿಂದ ಕಲಿಯುವುದು ಸಾಕಷ್ಟಿದೆ.
ಇಳಯರಾಜ 800ರ ಆಸುಪಾಸಿನಲ್ಲೇನೋ ಸಂಗೀತ ನಿದರ್ೇಶಿಸುತ್ತಿದ್ದಾರೆ ಎಂಬ ಅಂದಾಜಿತ್ತು. ಮೊನ್ನೆ ಸೆಟ್ಟೇರಿದ ಕನ್ನಡದ `ನನ್ನವನು’ ಸಿನಿಮಾ ಅವರ 867ನೇ ಚಿತ್ರ ಎಂಬ ಮಾಹಿತಿಯೊಂದಿಗೆ ಅವರ ಸೃಜನಶೀಲತೆಗೆ ತಗುಲಿಕೊಂಡಿರುವ ಸಂಖ್ಯೆಯ ಮೊತ್ತ ತಿಳಿಯಿತು. ರಿಟನರ್್ ಆಫ್é್ ದಿ ಮೇಸ್ಟ್ರೊ! ಈ ನೆವದಲ್ಲೇ ಇಳಯರಾಜ ಬಗ್ಗೆ ಒಂದಷ್ಟು ಚಚರ್ಿಸಬಹುದೆನಿಸುತ್ತದೆ.
ಒಂದು ತಮಾಷೆಯ ಪ್ರಸಂಗ ನೆನಪಾಗುತ್ತದೆ. ಕೆಲವು ವರ್ಷಗಳ ಹಿಂದೆ ಎಂ.ಜಿ ರಸ್ತೆಯ ಯಾವುದೋ ಮ್ಯೂಸಿಕ್ ಸಿ.ಡಿ ಮಳಿಗೆಯ ಉದ್ಘಾಟನೆಯ ಸಲುವಾಗಿ ಇಳಯರಾಜ ಬೆಂಗಳೂರಿಗೆ ಬಂದಿದ್ದರು. ಪತ್ರಕರ್ತರ ದಂಡೊಂದು ಅವರನ್ನು ಮಾತಾಡಿಸಲು ಧಾವಿಸಿತು. ಇವರಲ್ಲಿ ಇಂಗ್ಲಿಷ್ ಪತ್ರಿಕೆಗಳವರೇ ಹೆಚ್ಚಿದ್ದರು. ಪತ್ರಿಕಾಗೋಷ್ಠಿ ಹೆಚ್ಚೂಕಮ್ಮಿ ಹೀಗೆ ನಡೆಯಿತೆಂದು ವರದಿಗಳು ಹೇಳಿದವು: ಪತ್ರಕರ್ತರು ಇಳಯರಾಜ ಎದುರಿಗೆ ನಮ್ರವಾಗಿ ಕುಳಿತು, ಸ್ಕೂಲು ಮಕ್ಕಳಂತೆ ವಿಧೇಯತೆಯಿಂದ ಕೇಳಿದರು- `ನಿಮ್ಮ ಪ್ರಕಾರ ಸಂಗೀತ ಎಂದರೇನು?’ ಅದಕ್ಕೆ ಇಳಯರಾಜ ಭಾರಿ ನಿಲರ್ಿಪ್ತತೆಯಿಂದ `ಅದೊಂದು ಸಮುದ್ರ’ ಎಂದರು. ಹಾಗೆಯೇ ಅವರ ಸಾಧನೆಯ ಬಗ್ಗೆ ಪ್ರಶ್ನಿಸಲಾಗಿ, ಅವರು ಕೈ ಅಲ್ಲಾಡಿಸುತ್ತಾ `ನಾನೇನೂ ಸಾಧಿಸಿಲ್ಲ. ಬರೇ ಸೊನ್ನೆ’ ಎಂದು ತೇಲಿಸಿಬಿಟ್ಟರು. `ನಿಮ್ಮನ್ನು ರಾಗಋಷಿ ಎನ್ನುವುದರ ಬಗ್ಗೆ…’ ಎಂದು ಪತ್ರಕರ್ತರಿನ್ನೂ ಪ್ರಶ್ನಿಸುತ್ತಿರುವಂತೆಯೇ ಇಳಯರಾಜ ಮುಗಿಲ ದಿಕ್ಕಿಗೆ ಸನ್ನೆ ಮಾಡುತ್ತಾ, `ಏನೂ ಇಲ್ಲ. ನನ್ನದೇನೂ ಇಲ್ಲ’ ಎನ್ನುತ್ತಾ ಜಾಗ ಖಾಲಿ ಮಾಡಿದರು!
ಸಾಕಷ್ಟು ಕುತೂಹಲದ ಅಂಶಗಳು ಇಲ್ಲಿವೆ. ಮೇಲ್ನೋಟಕ್ಕೆ ಇಳಯರಾಜ ಚಯರ್ೆಯಲ್ಲಿ ಉಡಾಫೆ, ಭೋಳೆತನ ಇತ್ಯಾದಿಗಳು ಕಂಡುಬಂದರೂ, ನಿಜ ಸಂಗತಿ ಅದಲ್ಲ. ಇಳಯರಾಜ ಮಾತುಗಳಲ್ಲಿ ಆಧ್ಯಾತ್ಮದ ಛಾಯೆ ಇರುವಂತೆ ತೋರಿದರೂ ಮತ್ತು ನಿಜಕ್ಕೂ ಇಳಯರಾಜ ಆಧ್ಯಾತ್ಮ ಜೀವಿ ಹೌದಾದರೂ ವಿಷಯ ಅದಷ್ಟೇ ಅಲ್ಲ. ಮೂಲತಃ ಇಳಯರಾಜ ಎಂಥ ಸಂಕೋಚದ ಜೀವಿ ಎಂದರೆ, ಅವರೆಂದೂ ಇಲ್ಲಿ ಪತ್ರಕರ್ತರು ಎಳೆಯಲು ಉದ್ದೇಶಿಸಿದ್ದಂತಹ ದೇಶಾವರಿ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದೇ ಇಲ್ಲ ಮತ್ತು ಆ ಮೂಲಕ ಎಂದೂ ಸಮಯ ವ್ಯರ್ಥ ಮಾಡಿಕೊಂಡವರೂ ಅಲ್ಲ. ತಾವು, ತಮ್ಮ ಕೆಲಸ ಎಂದು ಇದ್ದುಬಿಡುವ ಇಳಯರಾಜ, ಚಲಾವಣೆ ಗಿಟ್ಟಿಸಿಕೊಳ್ಳುವ ಎಲ್ಲ ಗಿಮಿಕ್ಗಳಿಂದ ಮೊದಲಿನಿಂದಲೂ ದೂರ. ಹೀಗಿರುವಾಗ ಅವರು ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿ ಪತ್ರಕರ್ತರನ್ನು ತಬ್ಬಿಬ್ಬು ಮಾಡಿದ್ದು ದೊಡ್ಡ ತಮಾಷೆ.
ಇನ್ನೂ ಹೇಳಬೇಕೆಂದರೆ, ಮೇಲ್ಸಾರದ ತಿಳುವಳಿಕೆ ಈಚೀಚೆಗೆ ಮಾಧ್ಯಮದ ಮಂದಿಯಲ್ಲಿ ಅತಿಯಾಗುತ್ತಿರುವುದನ್ನೂ ಮೇಲಿನಂಥ ಘಟನೆಗಳು ಸೂಚಿಸುತ್ತವೆ. ವಿವರಗಳ ಹೊರಮೈಯಲ್ಲಿ ದೇಶ, ಕಾಲ, ವ್ಯಕ್ತಿಗಳನ್ನು ಗ್ರಹಿಸುವ ಇಂಥ ಮನೋಭಾವವನ್ನು `ಕ್ವಿಜéರ್ ಆ್ಯಟಿಟ್ಯೂಡ್’ ಎನ್ನಲಾಗುತ್ತದೆ. ನಮ್ಮಲ್ಲಿ ರಾಜ್ ಬಗ್ಗೆಯೇ ಮಾಧ್ಯಮಗಳು ಇಂಥ ವರಸೆಯನ್ನು ಪ್ರದಶರ್ಿಸುವುದಿದೆ. ರಾಜ್ ಪ್ರಸ್ತಾಪ ಬಂದಿದ್ದು ಇಲ್ಲಿ ಒಳ್ಳೆಯದೇ ಆಯಿತು. ಯಾಕೆಂದರೆ ರಾಜ್ಕುಮಾರ್ ಮತ್ತು ಇಳಯರಾಜ ಇಬ್ಬರೂ ಕನ್ನಡದ ವಿಶಿಷ್ಟ ಪ್ರಯೋಗಶೀಲ ನಿದರ್ೇಶಕ ಜಿ.ಕೆ.ವೆಂಕಟೆೇಶ್ ಅವರಿಂದ ಬೆಳಕಿಗೆ ಬಂದವರು. ಈ ಇಬ್ಬರನ್ನು ಕ್ರಮವಾಗಿ ಗಾಯಕ ಮತ್ತು ಸಂಗೀತ ನಿದರ್ೇಶಕರಾಗಲು ಪ್ರೋತ್ಸಾಹಿಸಿ ಒತ್ತಾಸೆಯಾಗಿ ನಿಂತದ್ದೇ ಜಿ.ಕೆ.ವಿ. ತಮ್ಮ ಹೆಮ್ಮೆಯ ಘಳಿಗೆಗಳಲ್ಲಿ ಜಿ.ಕೆ.ವೆಂಕಟೇಶ್, `ನಾನು ಪರಿಚಯಿಸಿದ ಇಬ್ಬರು `ರಾಜ’ರು ನನ್ನ ಹೆಸರನ್ನು ಉಳಿಸುತ್ತಾರೆ’ ಎಂದು ಹೇಳಿದ್ದಿದೆ. (more…)
ಅಮುಲ್ ‘ಫಿಲಂ’ ಪಂಚ್ May 28, 2008
Posted by magiccaarpet in balcony.add a comment
‘ಶಾರಿ’ ಹೇಳಿದ್ದು ಸರಿ May 24, 2008
Posted by magiccaarpet in dailogue.1 comment so far
Ganesh K : 2ganesh@gmail.com
ಮುಸ್ಸಂಜೆ ಮಾತು ಕೆಲವರಿಗೆ ಭಾವಗಡಲ “ತೀರದ” ಯಾನವಾಗಿದೆಯಂತೆ..!
ನನಗೆ ಮಾತ್ರ ಭಾವನಾತ್ಮಕ ಕಾಮಿಡಿಯಂತೆ ತೋರಿದೆ.
ಕೊನೆ ದೃಶ್ಯದಲ್ಲಿ ಪ್ರತಿಭಟನೆ ಮಾಡಕ್ಕೇ ಅಂತ ಒಂದು ನೂರ್ ಜನ ಬರ್ತಾರಲ್ಲಾ ಸುದೀಪನ್ನ ಒಪ್ಪಿಸೋಕೆ..? The real humor scene..! ಯಾವುದು ಸೀರಿಯಸ್ ಸಂದರ್ಭ ಅನ್ನಿಸಬೇಕಿತ್ತೋ ಅದು ಪೇಲವವಾಗುತ್ತೆ. ಕೊನೆಗೆ ಬರುವ “ನಾರ್ಮಲ್ ಟರ್ನಿಂಗ್ ಪಾಯಿಂಟ್” ಕಥೆಯ ಹಂದರವನ್ನೇ ಕೇವಲವಾಗಿಸಿಬಿಡುತ್ತದೆ. ಸುದೀಪ್ ಸಹಾಯ ಮಾಡಿದ ವ್ಯಕ್ತಿಯೇ ಆತನಿಗೆ ರಮ್ಯಳನ್ನ ತಂದೊಪ್ಪಿಸುವುದು ತೀರಾ ಓವರ್ ಅನ್ನಿಸುತ್ತೆ. ಸಿನಿಮೀಯತೆ ಅಂದ್ರೆ ಇದೇನಾ ಅನ್ನಿಸುತ್ತೆ.
ಕೆಲವು ಒಪ್ಪತಕ್ಕ ಅಂಶಗಳಿದ್ದರೂ ಚಿತ್ರ ತನ್ನ ವೇಗ ಕಳೆದುಕೊಂಡಿದೆ. ನಿರ್ದೇಶಕ ಕಥೆ ಬಿಗಿಯಾಗಿ ಹೇಳುವುದರಲ್ಲಿ ಎಡವಿದ್ದಾನೆ. ಅಸಲಿಗೆ ಇಲ್ಲಿ ಕಥೆನೇ ಇಲ್ಲ. ತುಂಬಾ ಬೋರಿಂಗ್ ಆದ ಸಿನೆಮಾ. ಸುದೀಪ್ ಅಥವಾ ರಮ್ಯ ಯಾರ ಪಾತ್ರಗಳೂ ಪ್ರಮುಖವೆನಿಸಿಲ್ಲ. ಅತ್ಲಾಗೆ ಕಥೆಯಾದರೂ ಒಂದ್ ಕೈ ಮೇಲಿದೆಯಾ ಅಂತಾ ನೋಡಿದ್ರೆ ಅದೂ ಇಲ್ಲ. ನಿರ್ದೇಶಕನಿಗೆ ಇದು ಸಿನಿಮಾ ಮಾಡುವ ಕಥೆ ಏಕೆ ಅನ್ನಿಸಲಿಲ್ಲವೋ ನಾ ಕಾಣೆ. ಅಥವಾ ಹೇಳುವ ದಾರಿ ತಪ್ಪಿದೆಯಾ ಗೊತ್ತಿಲ್ಲ.
ಮೂರು ಹಾಡುಗಳು ಚೆನ್ನಾಗಿವೆ. ಕೆಲವು ಸನ್ನಿವೇಶಗಳು ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡುತ್ತವೆ. ಆದ್ರೆ, ಒಟ್ಟಾರೆ ಎಫೆಕ್ಟ್ ಮುಖ್ಯತಾನೇ..? ಒಟ್ಟಾರೆಯಾಗಿ ಮುಸ್ಸಂಜೆಮಾತು ಅತ್ಲಾಗೆ ಕಾಮಿಡಿಯೂ ಅಲ್ಲ, ಇತ್ಲಾಗೆ ಗಂಭೀರವೂ ಅಲ್ಲ.
“ಏನೋ ಒಂಥರಾ ಥರಾ..!” ![]()
ಕೇಳಲೊಂಥರಾ ಥರಾ ನೋಡಲೊಂಥರಾ…!!!!!
![]()
ಗಂಟಲು ಗದ್ಗದಿತವಾಗಿತ್ತು. ಅಳು ತುಟಿಗೆ ಬಂದು ನಿಂತಿತ್ತು ! May 24, 2008
Posted by magiccaarpet in balcony.1 comment so far
ಮ್ಯಾಜಿಕ್ ಕಾರ್ಪೆಟ್‌ನಲ್ಲಿ ಸುಪ್ರೀತ್ ಚಿಲ್ಡ್ರನ್ ಆಫ್ ಹೆವನ್ (ಮಜಿದ್ ಮಜ್ದಿ) ಚಿತ್ರದ ಬಗ್ಗೆ ಹೇಳಿದ್ದಾರೆ. ನನ್ನ ಭಾವಕೋಶದೊಳಗೆ ತೀರಾ ಕಾಡಿದ ಚಿತ್ರವದು. ಯಾಕೋ, ನನಗೆ ಸ್ವಲ್ಪ ಇರಾನಿ ಚಿತ್ರಗಳೆಂದರೆ ಇಷ್ಟ. ಅದಕ್ಕೆ ಕಾರಣ ಹಲವಿವೆ. ಈ ಹಿಂದೆಯೂ ಒಂದು ಇರಾನಿ (ಸೈಲೆನ್ಸ್) ಚಿತ್ರದ ಬಗ್ಗೆಯೇ ಬರೆದಿದ್ದೆ. ಇತ್ತೀಚೆಗೆ ನನ್ನನ್ನು ತೀರಾ ಬಾಧಿಸಿದ ಚಿತ್ರವದು.
ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಈ ಚಿತ್ರವನ್ನು ನೋಡಿದ್ದೆ. ದೊಡ್ಡ ಸ್ಕ್ರೀನ್‌ನಲ್ಲಿ ನೋಡಿದಾಗ ಗಂಟಲು ಗದ್ಗದಿತವಾಗಿತ್ತು. ಅಳು ತುಟಿಗೆ ಬಂದು ನಿಂತಿತ್ತು !
ವಾಸ್ತವವಾಗಿ ಅಂದಿನಿಂದ ಇರಾನಿ ಚಿತ್ರದ ಬಗೆಗೆ ಬೆರಗು ಬೆಳೆಸಿಕೊಂಡದ್ದು. ಮಜಿದ್ ಮಜ್ದಿಯ ಎಲ್ಲ ಚಿತ್ರಗಳನ್ನು ನೋಡುವ ಶಪಥ ತೊಟ್ಟು ಬಹುಪಾಲನ್ನು ಮುಗಿಸಿದ್ದೇನೆ. ಇನ್ನೂ ನೋಡುವುದಿದೆ. ಮೊನ್ನೆ ಗೆಳತಿಯೊಬ್ಬಳೊಂದಿಗೆ ಇದೇ ವಿಷಯವಾಗಿ ಮತ್ತು ಇದೇ ಚಿತ್ರದ ಬಗ್ಗೆ ಹರಟುತ್ತಿದ್ದೆ.
ನಮ್ಮ ಕನ್ನಡ ಚಿತ್ರಗಳಲ್ಲಿ ವಿಷಾದವನ್ನು ಕಟ್ಟಿಕೊಡಲು ಬರುವುದೇ ಇಲ್ಲ ಎನ್ನುವುದು ನನ್ನ ತಕರಾರು. ನನ್ನ ದೃಷ್ಟಿಯಲ್ಲಿ ಎಂದಿಗೂ ದುಃಖ ವಿಷಾದವಲ್ಲ. ಅಳುವುದು ವಿಷಾದಕ್ಕೆ ಸಮನಲ್ಲ. ವಿಷಾದ ನಮ್ಮನ್ನು ಗಂಟಲು ಉಬ್ಬಿಸುವಂಥ ಸ್ಥಿತಿ. ಅಳು ಬಂದು ಧಾರೆಯಾಗಿ ಇಳಿಯುವಂಥ ಸ್ಥಿತಿ ; ಇಳಿಯುವುದಿಲ್ಲ. ಮನದೊಳಗೆಲ್ಲಾ ಒಂದು ತೀರಾ ತಣ್ಣನೆಯ ಸ್ಪರ್ಶವನ್ನು ಕೊಟ್ಟು ವಿಷಣ್ಣನಾಗಿಸಿಬಿಡುವಂಥದ್ದು. ಬಹಳಷ್ಟು ಬಾರಿ ಅತ್ತು ಹಗುರಾಗುವ ಪ್ರಕ್ರಿಯೆ ನಮ್ಮ ವಿಷಾದದ ಸನ್ನಿವೇಶಗಳಲ್ಲಿ ನಡೆಯುತ್ತದೆ. ವಾಸ್ತವವಾಗಿ ಅದಲ್ಲ.
ನಮ್ಮಲ್ಲಿ ವಿಷಾದವೆಂದರೆ ಗೊಳೋ ಎಂದು ಅಳಿಸಿಬಿಡುತ್ತೇವೆ. ಗಿರೀಶ್ ಕಾಸರವಳ್ಳಿಯವರ “ದ್ವೀಪ’ದಲ್ಲೂ ಸ್ಥಳಾಂತರದ ಅನಿವಾರ್ಯದಿಂದ ಹುಟ್ಟಿದ ವಿಷಾದ ಮಳೆಯಂತೆಯೇ ಅಳುವಾಗಿ ಮಾರ್ಪಡುತ್ತದೆ. ಇವುಗಳನ್ನೆಲ್ಲಾ ಬ್ಯಾಕ್‌ಡ್ರಾಪ್‌ನಲ್ಲಿಟ್ಟುಕೊಂಡು ನೋಡಿದಾಗ “ಸ್ವರ್ಗದ ಮಕ್ಕಳು’ ಅದ್ಭುತ ಚಿತ್ರವೆನಿಸುತ್ತದೆ. ಇದುವರೆಗೆ ಇದನ್ನು ಎಂಟು ಬಾರಿ ನೋಡಿದ್ದೇನೆ. ನೋಡಿದಾಗಲೆಲ್ಲಾ ಮನಸ್ಸಿನೊಳಗೆ ಹೊಸ ಹುರುಪು ತುಂಬಿದೆ. ಸುಂದರ ಚಿತ್ರ ಬದುಕಿಗೆ ಭಾಷ್ಯ ಬರೆಯಬಲ್ಲದು ಎಂಬುದೊಂದು ಮಾತಿದೆ. ಅದರಂತೆಯೇ ಇದು ಭಾಷ್ಯ ಬರೆದ ಚಿತ್ರವೇ ಹೌದು.
ಕಳೆದ ಶಿವರಾತ್ರಿಯಂದು ಕೊಡಚಾದ್ರಿ ಬೆಟ್ಟದ ಮೇಲಿನ ಭಟ್ಟರ ಮನೆಯಲ್ಲಿ ನಾವೆಲ್ಲಾ ಒಂದಷ್ಟು ಮಂದಿ (ವಾದಿರಾಜ್, ಹರ್ಷ, ವಿಘ್ನೇಶ್, ಪ್ರವೀಣ್, ಚೈತನ್ಯ, ಸಿಂಚನ, ಸಿರಿ, ಲಕ್ಷ್ಮೀನಾರಾಯಣ, ಗಿರಿಧರ್, ಕಾರ್ತಿಕ್, ಮಹೇಂದ್ರ ಮತ್ತಿತರರು) ಇದೇ ಚಿತ್ರವನ್ನು ನೋಡಿದೆವು ; ಚರ್ಚಿಸಿದೆವು. ಒಂದು ಒಳ್ಳೆಯ ಸಂವಾದ. ಚೇತನಾರಿಗೂ ಈ ಚಿತ್ರ ನೋಡುವಂತೆ ಸಲಹೆ ನೀಡಿದ್ದೆ. ನನಗೆ ಇರಾನಿ ಚಿತ್ರ ಇಷ್ಟವಾಗುವ ಕಾರಣ ತಿಳಿಸುತ್ತೇನೆ. ಬಹುಶಃ ಅದೇ ಈ ಸ್ವರ್ಗದ ಮಕ್ಕಳ ಚಿತ್ರದ ಬಗೆಗಿನ ವ್ಯಾಖ್ಯಾನವಾಗಬಹುದೇನೋ? ಗೊತ್ತಿಲ್ಲ. (more…)
ಅಮುಲ್ ‘ಫಿಲಂ’ ಪಂಚ್ May 23, 2008
Posted by magiccaarpet in Studio charlie.add a comment
ಮುಸ್ಸಂಜೆ ಸಮಸ್ಯೆಗಳು May 23, 2008
Posted by magiccaarpet in dailogue.2 comments
ಮುಸ್ಸಂಜೆ ಮಾತು ನೋಡ್ದೆ. ಇಷ್ಟೇಂದು ತಲೆನೋವು ಈ ಹಿಂದೆ ಬಂದಿರಲಿಲ್ಲ. ಸುಧಾರಿಸಿಕೊಳ್ಳೋಕೆ 2 ದಿನ ಬೇಕಾಯ್ತು. ಸುದೀಪ್ ನಟನೆ ಕೂಡ ಬೋರಿಂಗ್. ಮುಸ್ಸಂಜೆ ಸಮಸ್ಯೆಗಳು ಅಂಥ ಇಟ್ಟಿದ್ರೆ ಚೆನ್ನಾಗಿರೋದು
-shari
ಕಾಕನಕೋಟೆಯ ಕಾಡೊಳಗೆ ಭಾವಸಂಚಾರ May 23, 2008
Posted by magiccaarpet in dailogue.1 comment so far
ಕಾಕನ ಕೋಟೆ, ಮಾಸ್ತಿ, ಆ ಕಾಡು ಎಲ್ಲದರ ಬಗ್ಗೆ ನಮ್ಮ ಆತ್ಮೀಯ ಜೋಗಿ ಒಂದು ವಿಶಿಷ್ಟ ನೋಟ ನೀಡಿದ್ದಾರೆ.
ಬೆಟ್ಟದಾ ತುದಿಯಲ್ಲಿ ಕಾಡುಗಳ ಎದೆಯಲ್ಲಿ
ಕಪಿನೀಯ ನದಿಯೆಲ್ಲಿ ಉಗುತಿರುವುದಲ್ಲಿ;
ಎಲ್ಲಿ ನೋಡ ನೋಡ ಕರ್ರ ಕಾರುವ ಮೋಡ
ಪಡೆಗೂಡುವುದು ಗಾಡ ಒಟ್ಟೊಟ್ಟಿ ಅಲ್ಲಿ;
ಎಲ್ಲಿ ಕೊಂಬಿನ ಸಲಗ ಹೆಣ್ಣಾನೆ ಮರಿಬಳಗ
ಬೆಳುತಿಂಗಳಿನ ತಳಗ ನಡೆಯುವುದು ಅಲ್ಲಿ;
ಯಾವಲ್ಲಿ ಸಾರಂಗ ಕೆಚ್ಚುಕೋಡಿನ ಸಿಂಗ
ನೋಡುತ ನಿಂತ್ಹಂಗ ನಿಲ್ಲುವುದು ಅಲ್ಲಿ;
ಎಲ್ಲಿ ಎರಳೆಯ ಹಿಂಡು ಹುಲಿಯ ಕಣ್ಣನು ಕಂಡು
ಹೆದರಿ ಹಾರುವ ದಂಡು ಚೆಲ್ಲುವುದು ಅಲ್ಲಿ;
ಗಿಳಿಗೊರವ ಕೋಗೀಲೆ ಹಾರು ಹಕ್ಕಿಯ ಮಾಲೆ
ಹಾಡುತಿದೆ ದನಿಮೇಲೆ ದನಿಯೇರಿ ಎಲ್ಲಿ;
ಎಲ್ಲಿ ಏಕಾಏಕಿ ಗಂಡು ನಮಿಲಿಯ ಕೇಕಿ
ಬೋರಗಲ್ಲಿಗೆ ತಾಕಿ ಗೆಲ್ಲುವುದು ಅಲ್ಲಿ;
ಹೆಜ್ಜೇನು ಯಾವಲ್ಲಿ ಇದ್ದಲ್ಲೇ ಹೂವಲ್ಲಿ
ಕದ್ದೊಂದು ಮೇವಲ್ಲಿ ತಣಿದಿರುವುದಲ್ಲಿ;
ದಿನ ದಿನಾ ಸಂಪಂಗಿ ಇರುವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗಿ ಅರಳುವುದು ಎಲ್ಲಿ;
ಯಾವಲ್ಲಿ ಜಾಲಾರಿ ಎದೆಯ ಕಂಪನು ಕಾರಿ
ತನ್ನ ತಾಣವ ಸಾರಿ ಬಾ ಎಂಬುದಲ್ಲಿ;
ಯಾವಲ್ಲಿ ಹೆಬ್ಬಲಸು ಕೈಗೆ ಕಾಲಿಗೆ ಗೊಲಸು
ಅಂತ ಹಣ್ಣನು ಹುಲುಸು ಹೊತ್ತಿರುವುದಲ್ಲಿ
ಎಲ್ಲಿ ಕರಿ ಸಿರಿಗಂಧ ಮರ ಬೆಳೆದು ತಾ ಮುಂದ
ಮಾದೇಶ್ವರಗೆ ಚೆಂದ ಮೆಚ್ಚುವುದು ಅಲ್ಲಿ..
ಈ ಹಾಡು ಬರೆದದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರರು ಹೌದಾ? ಹಾಗೆ ಬೆರಗಾಗುವಂಥ ವೈವಿಧ್ಯ ಇದರಲ್ಲಿದೆ. ಮಾಸ್ತಿಯವರ ನವರಾತ್ರಿಯ ಪದ್ಯಗಳನ್ನೂ ಇತರ ಗೀತೆಗಳನ್ನೂ ಓದಿದವರಿಗೆ ಇದನ್ನೂ ಅವರೇ ಬರೆದಿದ್ದಾರೆ ಎಂದರೆ ನಂಬಲು ಕಷ್ಟವಾಗುತ್ತದೆ. ಮಾಸ್ತಿಯವರ ಕತೆಗಳನ್ನು ಓದಿದವರಿಗೆ ಪರಿಚಿತವಾಗಿರುವ ಸರಳತೆ ಮತ್ತು ಸ್ಪಷ್ಟತೆ ಅವರ ಈ ನಾಟಕದ ಗೀತೆಯಲ್ಲೂ ಕಾಣಿಸುತ್ತದೆ.
ಇದು `ಕಾಕನಕೋಟೆ’ ನಾಟಕಕ್ಕೆ ಮಾಸ್ತಿಯವರು ಬರೆದ ಗೀತೆ. ನಾಟಕದ ಆರಂಭದಲ್ಲೇ ಬರುತ್ತದೆ. ಇದಕ್ಕೆ ಅಶ್ವ್‌ಥ ಅಷ್ಟೇ ನಾಜೂಕಾಗಿ ಸಂಗೀತ ಸಂಯೋಜಿಸಿದ್ದಾರೆ. ಸಂಗೀತದ ಅಗತ್ಯವೇ ಇಲ್ಲ ಎನ್ನಿಸುವಂಥ ಲಯಬದ್ಧತೆಯೂ ಈ ಗೀತೆಯಲ್ಲಿದೆ. ಎಲ್ಲಿ ಏಕಾಏಕಿ ಗಂಡು ನಮಿಲಿಯ ಕೇಕಿ ಬೋರಗಲ್ಲಿಗೆ ತಾಕಿ ಗೆಲ್ಲುವುದು ಅಲ್ಲಿ- ಎಂಬ ಸಾಲುಗಳನ್ನು ಕಾಡಿನ ಬಗ್ಗೆ ವಿಶೇಷವಾದ ಮತ್ತು ಗಾಢವಾದ ತಿಳುವಳಿಕೆ ಇರದ ಹೊರತು ಬರೆಯುವುದು ಸುಲಭವಲ್ಲ. ದಿನ ದಿನಾ ಸಂಪಂಗಿ ಇರುವಂತಿ ಮಲ್ಲಂಗಿ ಎನ್ನುವ ಸಾಲಿನ ಜೊತೆಗೇ ಅಚ್ಚರಿಗೊಳಿಸುವಂಥ ಮೊಲ್ಲೆ ಅದರ ತಂಗಿ… ಎಂಬ ಸಾಲಿದೆ. ಒಂದು ಹೆಸರಿಲ್ಲದ ಮೊಲ್ಲೆಯಂಥ ಹೂವನ್ನು ಅದರ ತಂಗಿ ಎಂದು ಕರೆಯುವುದು ಅವರಿಗಷ್ಟೇ ಸಾಧ್ಯವಿತ್ತಾ? ಅದಾದ ತುಂಬ ವರುಷಗಳ ನಂತರ ಕೆ ಎಸ್್ ನರಸಿಂಹಸ್ವಾಮಿ ` ತಾರೆಗಳ ಜರತಾರಿ ಅಂಗಿ ತೊಡಿಸುವರಂತೆ ಚಂದಿರನ ತಂಗಿಯರು ನಿನ್ನ ಕರೆದು..’ ಎಂದು ಬಳಸಿದಾಗ ಥಟ್ಟನೆ ನೆನಪಾದದ್ದು ಮಾಸ್ತಿಯವರ `ಮೊಲ್ಲೆ… ಅದರ ತಂಗಿ’ ಪ್ರಯೋಗ.
ನಮ್ಮಲ್ಲಿ ಅನೇಕರು ತುಂಬ ಕಡೆಗಣಿಸಿದ ಲೇಖಕರ ಪೈಕಿ ಪುತಿನರಂತೆ ಮಾಸ್ತಿ ಕೂಡ ಒಬ್ಬರು. ಮಾಸ್ತಿಯವರು ಕನ್ನಡದ ಆಸ್ತಿ ಎನ್ನುವುದು ಈಗ ಕೇವಲ ಸ್ಲೋಗನ್ನಷ್ಟೇ ಆಗಿ ಉಳಿದುಬಿಟ್ಟಿದೆ. ಟಾಲ್ ಸ್ಟಾಯ್ ಕತೆಗಳನ್ನು ಮೀರಿಸಬಲ್ಲ ಒಳನೋಟ ಮತ್ತು ಬದುಕಿನ ಗಾಢ ಅರಿವು ಮಾಸ್ತಿ ಕತೆಗಳಲ್ಲಿ ಕಾಣಿಸುತ್ತದೆ. ಅವರು ಕತೆ ಬರೆದು ಎಪ್ಪತ್ತೆಂಬತ್ತು ವರುಷಗಳಾದ ನಂತರ ದೃಶ್ಯಮಾಧ್ಯಮವಾದ ಸಿನಿಮಾ ಅವರ ಶೈಲಿಯನ್ನು ಕಂಡುಕೊಳ್ಳಲು ತುಡಿಯುತ್ತಿದೆ. ಮಾಸ್ತಿಯವರಷ್ಟು ನಿರುಮ್ಮಳವಾಗಿ, ತಣ್ಣನೆಯ ದನಿಯಲ್ಲಿ ಮತ್ತು ಅಬ್ಬರವಿಲ್ಲದ ಧಾಟಿಯಲ್ಲಿ ಒಂದು ಕಥಾನಕವನ್ನು ಅರುಹುವುದು ಸಾಧ್ಯವಾದರೆ ಎಷ್ಟು ಚೆನ್ನ ಎಂದು ಈಗ ಎಲ್ಲರಿಗೂ ಅನ್ನಿಸತೊಡಗಿದೆ.
ಮಾಸ್ತಿಯವರ ಕತೆಯಷ್ಟೇ ಬೆರಗುಗೊಳಿಸುವ ಕೆಲವು ನಾಟಕಗಳಿವೆ. ಅವರು ಬರೆದ ಆರೆಂಟು ನಾಟಕಗಳ ಪೈಕಿ ಇವತ್ತಿನ ಸಂದರ್ಭಕ್ಕೆ ತುಂಬ ಆಪ್ತ ಅನ್ನಿಸುವುದು ಕಾಕನಕೋಟೆ. ಇವತ್ತು ನಾವು ಹಿಡಿಯಲೆತ್ನಿಸುತ್ತಿರುವ ಜಾಗತೀಕರಣದ ವಿರುದ್ಧದ ರೂಪಕಕ್ಕೆ ಕಾಕನಕೋಟೆಗಿಂತ ಪ್ರಬಲವಾದ ಮತ್ತೊಂದು ದೃಷ್ಟಾಂತ ಸಿಗಲಾರದು. ನಮ್ಮ ರಾಜಕೀಯ ಸ್ಥಿತಿಯನ್ನು ತುಘಲಕಇವತ್ತಿಗೂ ಹೇಗೆ ಪ್ರತಿನಿಧಿಸುತ್ತದೆಯೋ ಅಷ್ಟೇ ಸಮರ್ಥವಾಗಿ ಕಾಕನಕೋಟೆ ನಮ್ಮ ಗ್ರಸ್ತ ಆರ್ಥಿಕ ಸ್ಥಿತಿಯನ್ನು ಹಿಡಿದಿಡುತ್ತದೆ.
ಹಾಗೆ ನೋಡಿದರೆ ನಾವು ಸಂಸರನ್ನೂ ಶ್ರೀರಂಗರನ್ನೂ ನಾಟಕಕಾರರೆಂದು ಒಪ್ಪಿಕೊಂಡಷ್ಟು ಪುತಿನರನ್ನೂ ಮಾಸ್ತಿಯವರನ್ನೂ ಒಪ್ಪಿಕೊಳ್ಳುವುದಿಲ್ಲ. ಪುತಿನ ಕಾವ್ಯದಲ್ಲಿ ಮಾಸ್ತಿ ಸಣ್ಣಕತೆಯಲ್ಲಿ ಅಗಾಧವಾಗಿ ಸಾಧಿಸಿದ್ದರಿಂದ ಅವರ ಇತರ ಬರಹಗಳು ಮೂಲೆಗುಂಪಾಗಿರುವ ಸಾಧ್ಯತೆಯೂ ಇದೆ. ಆದರೆ ಬಿವಿ ಕಾರಂತರು ಗೋಕುಲ ನಿರ್ಗಮನವನ್ನು ಆಡಿಸದೇ ಹೋಗಿದ್ದರೆ ಅದರ ಅಂತಃಶಕ್ತಿ ಇವತ್ತಿಗೂ ಒಡೆದುಕೊಳ್ಳದೇ ಹೋಗುತ್ತಿತ್ತೋ ಏನೋ? ಹಾಗೇ, ಮಾಸ್ತಿಯವರ ಕಾಕನಕೋಟೆ ಕೂಡ. (more…)
ಮಾಹಿತಿಗಾಗಿ ಧನ್ಯವಾದಗಳು May 23, 2008
Posted by magiccaarpet in dailogue.1 comment so far
ಕಾಕನ ಪಾತ್ರವೇ ಆಗಿಹೋಗಿದ್ದ ಲೋಕೇಶ್
amara : mail2amar@gmail.com
ಕಾಕನ ಕೋಟೆ ಡಿವಿಡಿ ಮತ್ತೆ ವಿಸಿಡಿಯಲ್ಲಿ(ಗಣೇಶ್ ವಿಡಿಯೊ ಅವರದ್ದು) ಲಭ್ಯವಿದೆ …. ಸಪ್ನ ಮತ್ತೆ ಎಸ್ ಪಿ roadನಲ್ಲಿ ಸಿಗುತ್ತೆ ವಿಸಿಡಿ ೬೮/- ಡಿವಿಡಿ ೧೫೦/- ನಾನು ತಂದಾಗ ಇತ್ತು.
http://www.shopmania.in/shopping~online-dvds~buy-kaakana-kote-1977~p-1717424.html
***
ಕಾರ್ತಿಕ್ : karthik.knk@gmail.com
ಚೇತನ,
ನೀವು ಕೇಳಿದ ಕರಿ ಹೈದನೆಂಬೋನು ಮಹದೇಸ್ವರ ಹಾಡು ಇಲ್ಲಿದೆ
http://www.youtube.com/watch?v=47rydLhMxOU
ಕಾಡು ಕುದುರೆ ಓಡಿ ಬಂದಿತ್ತಾ… ಹಾಡು ಕಾಡು ಕುದುರೆ ಚಿತ್ರದ್ದು…
http://www.youtube.com/watch?v=CEGIXGYIv1M
***
ಚೇತನಾ ತೀರ್ಥಹಳ್ಳಿ-
ಕಾರ್ತಿಕ್, ಅಮರ, ಮಾಹಿತಿಗಾಗಿ ಧನ್ಯವಾದಗಳು.
- ಚೇತನಾ
***
ಟೀನಾ-
Dear Karthik,
Thank you for the info. I was a bit confused. Will check my facts properly now onwards. Chet, I apologize dear!! ![]()
Tina.
‘Long’ shot May 23, 2008
Posted by magiccaarpet in kitaki.add a comment









