jump to navigation

So much info here!! May 8, 2008

Posted by magiccaarpet in dailogue.
2 comments

Ohho,
So much info here!! Thank you magic carpet, for offering the service. I need Akira Kurosava’a ‘Roshomon’ (hope I spelt it right!!) very badly. Will check it out at the national market. If you have access, just let me know!!
-Tina

Nange Alfred Hitchcock movies beku, yavyavudu ide? Nanu Vertigo mattu Birds nodidene. bere beku.

-SHREE

Magic Carpet - Many thanks for the offer. I am ‘moved’ -) I’ll try to get the DVDs myself. Incase I dont get… magic carpet idde ideyalla! Mattomme dhanyawadagaLu.

I keep watching foriegn language movies in worldmovies channel (http://www.utvworldmovies.com) now and then.

Would it be possible for you to write a review on one of the movies which touched me most, Stand and Deliver (1988, a movie about high school teacher)?

Thanks,
Rajesh

ಹಿ.. ಹಿ.. ಹಿ.. May 8, 2008

Posted by magiccaarpet in dailogue.
add a comment

ಅರಮನೆ ಚಿತ್ರದಲ್ಲಿ ಕಂಡ ಎಡವಟ್ಟುಗಳು ‘ಸುಸಂಸ್ಕೃತ’ರ ಕಣ್ಣಲ್ಲಿ.

++ತಾರಾ ಅಂಗಡಿಯೊಂದಕ್ಕೆ ಬಂದು ಅಲ್ಲಿನ ಮ್ಯಾನೇಜರ್ ಬಳಿ ದಬಾಯಿಸೋವಾಗ ಹಿನ್ನೆಲೆಯಲ್ಲಿ ಹೂಕೋಸು ಹಿಡಿದುಕೊಂಡಿದ್ದ ಮಹಿಳೆ, ತಾರಾ ಅಂಗಡಿಯ ಮೆಟ್ಟಿಲು ಇಳಿದು ಬರೋಷ್ಟರಲ್ಲಿ ಇಳಿದು ಪಾರ್ಕಿಂಗ್ ಕಡೆ ಹೋಗಿದ್ದು.
++ಅನಂತನಾಗ್ ಭೇಟಿ ಮಾಡೊಕೆ ಮೊದಲು ಗಣೇಶನ ಭೇಟಿ ಮಾಡಿಸೋವಾಗ ವಿಶಾಲ್ ಶರ್ಟ್ ಹೊರಗೆ ಬಿಟ್ಟುಕೊಂಡಿರ್ತಾನೆ. ಅನಂತನಾಗ್ ಕೈಕುಲುಕುವಷ್ಟರಲ್ಲಿ ಇನ್-ಶರ್ಟ್ ಆಗಿರತ್ತೆ. ಕೈ-ಕುಲುಕಿ ಈ ಕಡೆ ತಿರುಗೋಷ್ಟರಲ್ಲಾಗಲೇ ಮತ್ತೆ ಷರ್ಟ್ ಹೊರಗೆ!! :)

ಐಟಿ-ಬಿಟಿ-ಬಿಪಿಒ-ಪಿಜ್ಜಾ ಹಟ್ ಯುಗದಲ್ಲಿ .. May 8, 2008

Posted by magiccaarpet in balcony.
add a comment

 

ಇಲ್ಲಿರುವುದೆಲ್ಲವೂ ನಾನು,ನನ್ನದು,ನನಗಾಗಿ ಬರೆದುಕೊಂಡಿರುವ ಕೆಲವು ನೆನಪುಗಳು. ನಿಮಗೂ ಮಾಡಕ್ಕೆ ಬೇರೆ ಕೆಲಸವಿಲ್ಲದೆ ಅರೆಘಳಿಗೆ ಬಿಡುವಿದ್ದಲ್ಲಿ ಓದಿ ಆನಂದಿಸಿ,ನಿಮ್ಮ ಅನಿಸಿಕೆಗಳನ್ನು ದಾಖಲಿಸಿ :)-ಎನ್ನುವ ಸುಸಂಸ್ಕೃತ ಅವರ ಬ್ಲಾಗ್ ನಲ್ಲಿನ ಅರಮನೆ ವಿಮರ್ಶೆ ಓದಿ

ಪ್ರೀತಿ ತುಂಬಿದ ಪ್ರತಿ ಗೂಡು…’ಅರಮನೆ’ : ಇವತ್ತಿನ ಐಟಿ-ಬಿಟಿ-ಬಿಪಿಒ-ಪಿಜ್ಜಾ ಹಟ್ ಯುಗದಲ್ಲಿ ಅವಿಭಕ್ತ ಕುಟುಂಬಗಳು ಕಾಣೆಯಾಗ್ತಿರೋ ಈ ಕಾಲಕ್ಕೆ ಹೇಳಿ ಮಾಡಿಸಿದ ಹಾಗೆ, ಟೈಮಿಗೆ ಸರಿಯಾಗಿ ಬಂದಿದೆ ಈ ಚಿತ್ರ. ಸೀದಾ-ಸಾದಾ-ನೇರವಾದ ಸಿಂಪಲ್ ಚಿತ್ರ.ದೇಹದ ಯಾವುದೇ ಭಾಗಕ್ಕೂ ಕಷ್ಟ ಕೊಡದ ಚಿತ್ರ ಅನ್ನಬಹುದು.

ನಾಗಶೇಖರ್ ಈ ಹಿಂದೆ ಎಷ್ಟೋ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನ ಮಾಡಿ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಜನರನ್ನ ನಗಿಸಿದ್ರು.ಅವರ ವಿಚಿತ್ರ ಮ್ಯಾನರಿಸಂ,ಟೈಮಿಂಗ್ ಜನರ ಗಮನಕ್ಕೆ ಬಂದಿದ್ದು ಯೋಗರಾಜ್ ಭಟ್ಟರ ‘ರಂಗ SSLC’ ಚಿತ್ರದಲ್ಲಿ ಸುದೀಪ್ ಗೆಳೆಯನಾಗಿದ್ದ ‘ಜಪಾನ್’ಪಾತ್ರದಿಂದ. ಆದ್ರೂ ಈ ಥರದ ಕಾಮಿಕಲ್ ಬ್ಯಾಕ್‍ಗ್ರೌಂಡ್ ಇರೋ ನಾಗಶೇಖರ್ ಏಕಾಏಕಿ ನಿರ್ದೇಶನದಂಥ ಸೀರಿಯಸ್ ಕೆಲಸ ಮಾಡೋಕ್ ಹೊರಟಿದ್ದು ನೋಡಿ(ಕೇಳಿ)ಗಾಳಿ ಬೀಸೋವಾಗ ತೂರಿಕೊಳ್ಳೋ ಪ್ರಯತ್ನ ಮಾಡ್ತಿರೋ ಮತ್ತೊಂದು ಜಳ್ಳೇನೋ ಅನ್ನೋ ಅನುಮಾನ ಬಂತು.ಆ ಕಾರಣಕ್ಕೇ ಅನ್ಸತ್ತೆ, ‘ಅರಮನೆ’ ಚಿತ್ರದಲ್ಲಿ ಗಣೇಶ ಇದ್ರೂ ಆ ಚಿತ್ರದ ಬಗ್ಗೆ ಅಷ್ಟೇನೂ ಹೆಚ್ಚಿನ ಆಕಾಂಕ್ಷೆಗಳಿರ್ಲಿಲ್ಲ ನನಗೆ.ಏನಿಲ್ಲದೆ ಇದ್ರೂ ಗಣೇಶನ ಡೈಲಾಗ್ ಡೆಲಿವರಿ ಮಜಾ ಕೊಡತ್ತೆ ಅನ್ನೋ ಧೈರ್ಯದ ಮೇಲೆ ನೈಟ್ ಶೋ ನೋಡಿಬಿಡಣ ಅಂತ ತಿಗಣೆಗಳಿಗೂ ಹೆದರದೆ ಒಗೆಯೋಕ್ ಹಾಕಬೇಕಿದ್ದ ಹಳೇ ಟೀಶರ್ಟು-ಜೀನ್ಸ್ ಹಾಕೊಂಡು ‘ಈಶ್ವರಿ’ಗೆ ಹೋಗ್ಬಿಟ್ಟೆ!

ಚಿತ್ರ ಶುರುವಾದ ಕಾಲು ಘಂಟೆ-ಇಪ್ಪತ್ತು ನಿಮಿಷವಾಗೋಷ್ಟರಲ್ಲೇ ನಾಗಶೇಖರ್ ಇಂಪ್ರೆಸ್ಸಿವ್ ಕೆಲಸ ಮಾಡಿದಾರೆ ಅನ್ನಿಸಿಬಿಡ್ತು! ಗಣೇಶ-ಅನಂತನಾಗ್ ಭೇಟಿಯಾಗೋ ಸೀನ್ ಸಕತ್ತಾಗಿ ಬಂದಿದೆ. ಯಥಾಪ್ರಕಾರ ಗಣೇಶ ಪುಂಖಾನುಪುಂಖವಾಗಿ ತನ್ನ ಮಾತಿನ ಲಹರಿಯನ್ನ ಹರಿಯಬಿಡ್ತಾನೆ! ಒಬ್ಬೊಬ್ನೇ ಮಾತಾಡಿಕೊಳ್ಳೋ ಕಾಯಿಲೆ ನಂಗೆ ಅಂತ ಬೇರೆ ಹೇಳಿಕೊಳ್ಳೋ ಗಣೇಶ ಜನರಿಗೆ ಇನ್ನಷ್ಟು ಹತ್ತಿರಾಗ್ತಾನೆ. ಕನ್ನಡ ಸಿನಿಮಾಗೆ ‘ಗಣೇಶ-ಅನಂತನಾಗ್’ ಕಾಂಬಿನೇಶನ್ ಪರಿಚಯಿಸಿ ಗೆಲ್ಲಿಸಿದ ಶ್ರೇಯ ಭಟ್ಟರಿಗೆ ಸಲ್ಲಬೇಕು.ಆ ಕಾಂಬಿನೇಶನ್ ಮತ್ತೊಮ್ಮೆ ಇಲ್ಲಿ ವರ್ಕ್-ಔಟ್ ಆಗಿದೆ.ಅನಂತನಾಗ್ ಸ್ಕ್ರೀನ್ ಮೇಲೆ ಬಂದ ಮೊದಲ ಕ್ಷಣದಿಂದ ಕಡೇವರೆಗೂ ತಮ್ಮ ಪಾತ್ರವನ್ನ ಜನರು ಪ್ರೀತಿಸೋ ಹಾಗೆ ಮಾಡುವಲ್ಲಿ ಅವರ ಅನುಭವ,ಅಭಿನಯದ ತಾಕತ್ತನ್ನ ಮತ್ತೊಮ್ಮೆ ಮಗದೊಮ್ಮೆ ಪ್ರೂವ್ ಮಾಡಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಿ ಇಲ್ಲದ ಮೇಲೂ ರಾಜಶೇಖರ್ ಹಂಪಾಪುರರಿಗೆ ಟಿವಿಯಲ್ಲಿ ಏನು ಕೆಲಸ ಅಂದುಕೊಳ್ಳೋವ್ರ ತಲೆ ಮೇಲೆ ಹೊಡೆದಂತಿದೆ ಈ ಚಿತ್ರದ ಪಾತ್ರ.


ಇಡೀ ಚಿತ್ರ ಅವರಿಬ್ಬರ ಸುತ್ತಾನೆ ಗಿರಕಿ ಹೊಡೆಯೋದ್ರಿಂದ ಹೆಚ್ಚಿನ ಪಾತ್ರಗಳನ್ನ ಅನವಶ್ಯಕವಾಗಿ ಸೃಷ್ಟಿಸೋ,ಹಾಗೆ ಸೃಷ್ಟಿಸಿದ ಪಾತ್ರಗಳನ್ನ ಪೋಷಿಸೋ ಅಗತ್ಯ ನಾಗಶೇಖರ್‍ಗೆ ಬರೋದಿಲ್ಲ.ಇರೋದ್ರಲ್ಲೇ ಚಿತ್ರಕಥೆಯ ಚೌಕಟ್ಟನ್ನು ದಾಟದೇ ಅಚ್ಚುಕಟ್ಟಾದ ಚಿತ್ರವೊಂದನ್ನ ಕೊಟ್ಟಿದ್ದಾರೆ.
ಚಿತ್ರದ ಕಥೆ ಏನು ಕಾಂಪ್ಲಿಕೇಟೆಡ್ ಅಲ್ಲ.ರಾಜಶೇಖರ್ ಅರಸ್(ಅನಂತನಾಗ್) ಮೈಸೂರಿನ ಶ್ರೀಮಂತ ಮನೆತನದ ಹಿರಿತಲೆ.ಹಿರಿಮಗಳ(ತಾರಾ) ಹಿಂದೆ ಎರಡು ಗಂಡು ಸಂತಾನ.ಹೆಂಡತಿ(ಸುಮಿತ್ರ) ಸತ್ತ ನಂತರ ಕಾರಣಾಂತರಗಳಿಂದ ರಾಜಶೇಖರ್ ಮಕ್ಕಳಿಂದ ದೂರವಾಗ್ತಾರೆ.ಗಂಡುಮಕ್ಕಳಿಬ್ಬರೂ ಹೊರದೇಶದಲ್ಲೆಲ್ಲೋ ನೆಲೆಸಿದರೆ ಮಗಳು-ಅಳಿಯ (ಅವಿನಾಶ್) ಮೈಸೂರು ತೊರೆದು ಬೆಂಗಳೂರಿನಲ್ಲಿ ವಾಸವಾಗಿರ್ತಾರೆ.ಸುಮಾರು ಇಪ್ಪತ್ತೆರಡು ವರ್ಷಗಳು ತಂದೆಗೂ ಮಕ್ಕಳಿಗೂ ಮಾತಿಲ್ಲ.
ಒಂದು ಪಾಸ್ಪೋರ್ಟ್ ಸೈಝ್ ಫೋಟೋ ತೆಗೆಯುವ ಕಾರಣಕ್ಕೆ ರಾಜಶೇಖರ್ ಮನೆಗೆ ಫೋಟೋಗ್ರಾಫರ್ ಅರುಣನ(ಗಣೇಶ್) ಆಗಮನ. ಮುಂಗಾರು ಮಳೆ ನಂತರ ಮತ್ತೊಮ್ಮೆ ಮನೆಯೊಳಗಿನ ಬಾರ್ ಕೌಂಟರಿನಲ್ಲೇ ಅನಂತ್-ಗಣಿ ಮಿಲನ! :)
“ಏನ್ ತಾತ ನೀನು..ಸಿಡ್ನಿನ ಒಳ್ಳೆ ನನ್ ಕಿಡ್ನಿ ಪಕ್ಕ ಇರೋ ಥರಾ ಮಾತಾಡ್ತಿಯಲ್ಲ…ಅದು ಫಾರಿನ್ನು!
ಆಂ! ವಾಷಿಂಗ್ಟನ್ನಾ? ಎಲ್ಲೋ ಕೇಳಿದೀನಿ ಅನ್ಸುತ್ತೆ. ಓಹ್! ಹೌದು…ಅಮೇರಿಕ ಅಮೇರಿಕ ಸಿನಿಮಾದಲ್ಲಿ ನೋಡಿದೀನಿ” ಇದು ಗಣಿ ಉದುರಿಸೋ ಮುತ್ತುಗಳಲ್ಲೊಂದೆರಡು.
ಒಗ್ಗರಣೆಗೆ ಇರ್ಲಿ ಅಂತ ರಾಜಶೇಖರ್ ಮನೆ ನೋಡ್ಕೊಳೋ ಆಲಿನ್-ಒನ್ ಬಸ್ಯ (ಕರಿಬಸವಯ್ಯ) ಅರುಣನಿಗೆ ಮತ್ತೊಬ್ಬ ಫ್ರೆಂಡು.ಕರಿಬಸವಯ್ಯನನ್ನ ನೋಡಿ ಕುಡಿದ ಅಮಲಿನಲ್ಲಿ ಹೇಳೋ ಮಾತು : “ಆಹಾ!! ಫೋಟೋಲಿ ಬೀಳಲ್ಲ ಕತ್ಲೇಲಿ ಕಾಣಲ್ಲ..ಸರೀಗಿದೀಯ”

ಮಾತು-ಮಧ್ಯದ ಮಧ್ಯೆ ರಾಜಶೇಖರ್‍ರ ಒಡೆದ ಕುಟುಂಬವನ್ನು ಒಂದು ಮಾಡಿ ಗ್ರೂಪ್ ಫೋಟೋ ತೆಗೆಯೋ ಪ್ರಾಮಿಸ್ ಮಾಡ್ತಾನೆ ಅರುಣ್.
ಎಲೆಕ್ಷನ್ ಟೈಂ ಅಂತಲೋ ಏನೋ ಈ ಚಿತ್ರದಲ್ಲೂ ಬೇಕಾದಷ್ಟು ಪ್ರಾಮಿಸ್ಸುಗಳು ಬಂದು ಹೋಗ್ತವೆ.ಆದ್ರೆ ಇಲ್ಲಿ ಎಲ್ಲರೂ ತಾವು ಕೊಟ್ಟ ಮಾತಿನಂತೆ ನಡೆದುಕೊಂಡು ಮಾಡಿದ ಪ್ರಾಮಿಸ್ಸಿಗೆ ನ್ಯಾಯ ಒದಗಿಸಿದ್ದಾರೆ!
ಇಡೀ ಚಿತ್ರ ಗಣೇಶ ಕುತ್ತಿಗೆಗೊಂದು ಕ್ಯಾಮೆರಾ,ಸೈಡಲ್ಲೊಂದು ಜೋಳಿಗೆ,ಫೋಟೋಗ್ರಾಫರ್ಸ್ ಜಾಕೆಟ್ ಹಾಕಿಕೊಂಡು ರಾಜಶೇಖರ್ ಕುಟುಂಬ ಜೋಡಣೆಯ ಸಲುವಾಗಿ ಮೈಸೂರಿಗೂ-ಬೆಂಗಳೂರಿಗೂ ಓಡಾಡೋದೇ ಆಗತ್ತೆ.ಈ ಮಧ್ಯೆ ರಾಜಶೇಖರ್ ಮೊಮ್ಮಗಳನ್ನೇ ಪ್ರೀತಿ ಮಾಡಿ ಆಕೆ ಇನ್ಯಾರನ್ನೋ ಇಷ್ಟ ಪಡ್ತಾಳೆ ಅಂತ ತಿಳಿದು ಹಿಂದೆ ಸರಿಯೋ ಹೀರೋ ಮತ್ತೊಮ್ಮೆ ಮನಸಲ್ಲಿ “ಪ್ರೀತಿ ಮಧುರ ತ್ಯಾಗ ಅಮರ” ಅಂದುಕೊಂಡ ಹಾಗನ್ನಿಸತ್ತೆ.
ಹಿಂದೊಮ್ಮೆ ತ್ಯಾಗಮಯಿ ಪಾತ್ರಗಳನ್ನ ಸಾಲುಸಾಲಾಗಿ ಮಾಡಿ ‘ತ್ಯಾಗರಾಜ್’ ಪಟ್ಟಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದ ರಮೇಶ್ ಜಾಗಕ್ಕೆ ಈಗ ಗಣೇಶ ಸೈಲೆಂಟಾಗಿ ತೂರಿಕೊಳ್ತಿರೋ ಎಲ್ಲ ಲಕ್ಷಣಗಳೂ ಕಾಣಿಸ್ತಿವೆ!

ಇನ್ನುಳಿದಂತೆ ನಾಯಕಿ ಗೀತಾ ಪಾತ್ರಕ್ಕೆ ಬಂದಿರುವ ಹೊಸಮುಖ ರೋಮಾ ಅಸ್ರಾಣಿ ಹೆಚ್ಚಿನ ಭರವಸೆ ಮೂಡಿಸೋದಿಲ್ಲ.ಡೈಲಾಗ್ ಡೆಲಿವರಿ ಪೂರಾ “1,2,3,4 - 1,2,3,4″ ಹೇಳಿ ಮುಗಿಸಿದಂತಿದೆ.ನಾಯಕಿಯ ತಂಗಿ ನೀತಾ ಪಾತ್ರದಲ್ಲಿ ತೇಜಸ್ವಿನಿ ತಕ್ಕಮಟ್ಟಕ್ಕೆ ಓಕೆ. ‘ಮತದಾನ’ ಚಿತ್ರದ ಬಳಿಕ ಮತ್ತೊಮ್ಮೆ ಅನಂತನಾಗ್‍ರ ಮಗಳು-ಅಳಿಯರಾಗಿ ತಾರಾ-ಅವಿನಾಶ್ ಜೋಡಿ ಈ ಚಿತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಗೀತಾಳ ಗಂಡ ವಿಶಾಲ್ ಪಾತ್ರಕ್ಕೆ ಯಾರೋ ಹೊಸಮುಖವನ್ನು ಪರಿಚಯಿಸಿ ದಿಲೀಪ್ ರಾಜ್‍ನಿಂದ ಕಂಠದಾನ ಮಾಡಿಸಿದ್ದು ಬೇಜಾರಾಯ್ತು. 7′O ಕ್ಲಾಕ್ ಚಿತ್ರದಲ್ಲಿ ದಿಲೀಪ್ ರಾಜ್ ಕೂಡಾ ಡಾಕ್ಟರ್ ಪಾತ್ರದಲ್ಲಿ ಚೆನ್ನಾಗೇ ಮಾಡಿದ್ದ.ಅವನಿಗೇ ಆ ಪಾತ್ರ ಕೊಡಬಹುದಿತ್ತೇನೋ!

ಕ್ಯಾಮೆರಾ ವರ್ಕ್ ಈ ಚಿತ್ರದಲ್ಲಿ ಹೇಳಿಕೊಳ್ಳೋ ಹಾಗೇನಿಲ್ಲ.ಸೀದಾ ಸಾದಾ ಲೋ ಬಜೆಟ್ ಚಿತ್ರವೊಂದಕ್ಕೆ ಹೇಗೆ ಬೇಕೋ ಹಾಗೆ ಇದೆ.ಸೆಟ್ಟಿಂಗ್ ಕೂಡಾ ಕೆಲವೊಮ್ಮೆ ತೀರಾ ಕೃತಕ ಅನ್ನಿಸತ್ತೆ.ಸಾಹಿತ್ಯ ಅಷ್ಟಕ್ಕಷ್ಟೇ! “ನನಗೂ ನಿನಗೂ ಕಣ್ಣಲ್ಲೇ ಪರಿಚಯ” ಅನ್ನೋ ಹಾಡನ್ನ ಗುನುಗುನಿಸೋವಾಗ ನೆನಪಲ್ಲಿಟ್ಕೊಳ್ಳೋಕ್ ಸುಲಭವಾಗುವ ಹಾಗೆ ಒಂದೆರಡು ಲೈನ್ ಚೆನ್ನಾಗಿದೆ. ಆದರೆ ಎಲ್ಲದಕ್ಕಿಂತ ನಿರಾಶಾದಾಯಕವಾಗಿರೋದು ಈ ಚಿತ್ರದ ಸಂಗೀತ!ಗುರು ಸಾರ್ - ಸ್ಸಾರಿ!ಈ ಚಿತ್ರಕ್ಕೆ ಸಂಗೀತದ ಕೊಡುಗೆ ನೀರಸವಾಗಿದೆ.
ಗುರುಕಿರಣ್‍ರಿಗೆ “ಯೋಚನಾ ದಾರಿದ್ರ್ಯ” ಯಾಕೆ ವಕ್ಕರಿಸಿಕೊಂಡಿದೆ ತಿಳೀತಿಲ್ಲ. ಎಲ್ಲರೂ ಎಲ್ಲೆಲ್ಲಿಂದಲೋ ಕದ್ದು-ಮುಚ್ಚಿ ತಂದ ಸಂಗೀತವನ್ನ ತಮ್ಮದೇ ಸ್ವಂತ ಅನ್ನೋ ಥರಾ ಪೋಸ್ ಕೊಡೋ ಕಾಲ ಹೋಗಿ ಈಗ ತಾವು ಈ ಮೊದಲೇ ಕೊಟ್ಟಿದ್ದ (ಕದ್ದಿದ್ದ) ಸಂಗೀತವನ್ನೇ ರೀ-ಮಿಕ್ಸ್ ಮಾಡಿ ಮತ್ತೆ ಹೊಸ ಹಾಡುಗಳಂತೆ ಕೊಡೋ ಕಾಲ ಬಂದಿದೆ ಅಂತ ತಿಳಿಸೋಕೆ ಮುಂದು ಬಂದಿರುವಂತಿದೆ!. ಉಪೇಂದ್ರ ಚಿತ್ರದ “ಟೂ ಥೌಸೆಂಡ್ ಏಡಿ ಲೇಡಿಯೇ ಅಲ್ಟ್ರಾ ಮಾಡರ್ನ್” ಅನ್ನೋ ಹಾಡು ಈಗ “ಉಫೀ” ಆಗಿದೆ. ನಿನಗಾಗಿ ಚಿತ್ರದ “ಯಮ್ಮೋ ಯಮ್ಮೋ ಯಾಮಾರ್ಬೇಡಮ್ಮೋ” ಹಾಡನ್ನು ಜುನೂನ್ (ಪಾಕಿಸ್ತಾನ) ತಂಡದ “ಸಯ್ಯೋನೀ” ಹಾಡಿನೊಂದಿಗೆ ಹದವಾಗಿ ಬೆರೆಸಿ ಇಲ್ಲಿ “ಕೊಲ್ಲೇ ನನ್ನನ್ನೇ” ಅನ್ನೋ ಕರ್ಕಶ ಹಾಡೊಂದನ್ನ ಸ್ವತಃ ಗುರು ಹಾಡಿದ್ದಾರೆ!. ರಾಜ್ ಕಪೂರರ ‘ಅನಾರಿ’ ಚಿತ್ರದ “ಕಿಸೀಕಿ ಮುಸ್ಕುರಾಹಟೋಂ ಪೆ” ಹಾಡು ಇಲ್ಲಿ “ನಗು ನಗು ನಗು ನಗು” ಆಗಿದೆ.
ಇರೋದ್ರಲ್ಲಿ ಬೆಸ್ಟ್ ಅಂದ್ರೆ ಕುಣಾಲ್ ಗಾಂಜಾವಾಲ ಹಾಡಿರೋ “ನನಗೂ ನಿನಗೂ ಕಣ್ಣಲ್ಲೇ ಪರಿಚಯ” ಅನ್ನೋ ಮೆಲೋಡಿ.(ಇದರ ಒರಿಜಿನಲ್ ಹಾಡಿಗೆ ಇನ್ನೂ ಹುಡುಕಾಟ ನಡೀತಿದೆ. ನಿಮಗೆ ಗೊತ್ತಿದ್ರೆ ನಮಗೂ ತಿಳಿಸಿಬಿಡಿ)
ಇಂಟರ್ವಲ್ ಬಳಿಕ ಸ್ವಲ್ಪ ರಬ್ಬರ್ ಬ್ಯಾಂಡ್ ಥರಾ ಎಳೆದಿದಾನೆ ಅಂತ ಜನ ಮಾತಾಡ್ಕೊಂಡಿದ್ ಕೇಳಿಸ್ತು. ನನಗೇನೋ ಹಾಗನ್ನಿಸಿಲಿಲ್ಲ.ಆದರೆ ಒಂದೆರಡು ಕಂಟಿನ್ಯುಟಿ ಪ್ರಾಬ್ಲಂ ಈ ಚಿತ್ರದಲ್ಲಿದೆ ಅನ್ನಿಸ್ತು. ಈಗಿನ ಕಾಲದ ಚಿತ್ರದಲ್ಲೂ ಡಿಸ್ಕಂಟಿನ್ಯುಟಿ ನುಸುಳಿರೋದನ್ನ ನೋಡಿ ಆಶ್ಚರ್ಯ ಕೂಡಾ ಆಯ್ತು.

ಒಟ್ಟಿನಲ್ಲಿ ಟೋಟಲ್ ಟೈಂಪಾಸ್ ಚಿತ್ರ ಇದು. ಕೊಟ್ಟ ದುಡ್ಡಿಗೆ ಏನೂ ಮೋಸ ಇಲ್ಲ.ಏನಿಲ್ಲದಿದ್ದರೂ ಚಾಮುಂಡಿ ಬೆಟ್ಟ,ಕ್ರಾಫರ್ಡ್ ಹಾಲ್, ಡಿಸಿ ಆಫೀಸ್,ಮೈಸೂರ್ ಮೆಡಿಕಲ್ ಕಾಲೇಜು,ಮೈಸೂರರಮನೆಯ ಬ್ಯಾಕ್ ಡ್ರಾಪಿರೋ ಸೀನುಗಳನ್ನ ನೋಡಿ ಖುಷಿಯಾಗೋಕಾದ್ರು ಈ ಸಿನಿಮಾ ಒಂದ್ಸಲಾ ನೋಡಿ ಬನ್ನಿ… :)

‘ಷೂ’ ಗೆ ‘ಚಕೋರ’ನ ಅಕ್ಕಿಕಾಳು May 8, 2008

Posted by magiccaarpet in dailogue.
add a comment

‘ಅಲೆಮಾರಿ’ ಬರೆದ ಲೇಖನ ಎಷ್ಟೊಂದು ಒಳ್ಳೆಯ ಸಿನೆಮಾಗಳ ಬಗ್ಗೆ ಮಾತನಾಡಲು, ಆ ಸಿನೆಮಾಗಳನ್ನು ಹುಡುಕುತ್ತಾ ಸಾಗಲು ಅವಕಾಶ ಮಾಡಿಕೊಟ್ಟಿದೆ. ಇನ್ನೊಬ್ಬ ಸಿನೆಮಾ ಕುತೂಹಲಿ ‘ಚಕೋರ’ ಎಂದೋ ಈ ಸಿನೆಮಾದ ಬಗ್ಗೆಯೇ ಬರೆದಿದ್ದ ಲೇಖನ ಇಲ್ಲಿ ಮತ್ತೆ ನಿಮಗಾಗಿ-

ಬಹಳ ಜನ ಮಾಜಿದ್ ಮಜೀದಿಯ ’Childre of Heaven’ ಬಗ್ಗೆ ಮಾತಾಡುತ್ತಿದ್ದಾರೆ. ಇದು ಹೀಗೆ ಸೆಲೆಬ್ರೇಟ್ ಮಾಡಲೇಬೇಕಾದ ಸಿನೆಮಾಗಳಲ್ಲಿ ಒಂದಾದ್ದರಿಂದ, ನನ್ನದೂ ಎರಡು ಅಕ್ಕಿಕಾಳು. ಸ್ವಲ್ಪ ಹಳೆಯ ಅಕ್ಕಿ. ಹಿಂದೆ ಎಲ್ಲೋ ಬರೆದಿದ್ದನ್ನು ಇಲ್ಲಿ ಹಾಕುತ್ತಿದ್ದೇನೆ. ಇಂಗ್ಲಿಶ್‍ನಲ್ಲಿ ಬರೆದಿದ್ದೆ. ಹಾಗೇ ಹಾಕುತ್ತಿದ್ದೇನೆ.

Majid Majidi’s Shoes

The excellent Iranian director Majid Majidi’s Children of Heaven (Bacheha-Ye Aseman, 1997) is not an ambitious movie. The fact that it is not so, and that it is intentionally so, is what makes it stand out. It needs an able artist to seize a tiny thread of an idea and explicate an engaging piece of art. And one can trust Majidi to do that.

The entire movie is based on a seemingly contrived incident. Ali, a 9 year old kid accidentally loses his 7 year old sister Zahra’s shoes on the way back from the cobbler’s. Zahra cannot go to school without her shoes. But Ali doesn’t want her to report this to their father because he doesn’t have any money to buy new shoes. So, the two young siblings hatch out a plan so that they will save themselves from their father’s wrath and also to avoid adding to his troubles. The movie then moves on a fast track portraying the kids’ little escapades.

What makes the movie outstanding is the careful juxtaposition of different frames, each frame celebrating the different qualities of what makes a poor yet happy and closely bound family. I think this is where Majidi focuses and scores. The acting is very good, of course. One of the lead characters, Ali, who has the most screen time, played by Amir Farrokh Hashemian is very good. But I find Zahra, played by Bahare Seddiqi, better. However, I was most impressed by Mohammad Amir Naji, who plays the role of Ali and Zahra’s father. His chracter and performance is very real.

Children of Heaven is not a movie that will give us a lot of food for thought. It is a kind of movie that will leave behind a longing feeling to see more such movies made that capture our own contexts and lives.

I’ll end this post by talking about one of the several scenes that I particularly liked. The masjid sends sugar to Ali’s father through Ali asking him to break it into small sugar cubes. At night we see Ali’s father cutting the sugar and talking to his family. His wife asks Zahra to serve her father some tea. Zahra pours tea in a cup and brings it to her father. Father thanks Zahra but tells her that she forgot to get sugar. Zahra is a little amused at this. She suggests to her father that “there’s so much sugar here”, which he has been cutting. Why doesn’t he use just one cube? Her father smiles and remarks that it’s not right. The Masjid has given it to him because they trust him. Zahra’s mother promptly asks her get sugar from the kitchen. Scenes like this have been beautifully rendered in the movie celebrating the simple family values and love. A nice engaging 90 minutes.

ಹಿಂದೆ ಮಜೀದಿಯ ಒಂದು ಇಂಟರ್‍ವ್ಯೂ ಓದಿದ್ದೆ. ಇಂಗ್ಲಿಶ್ ಬರದ ಮಜೀದಯ ಮೊಗ, ಸಂದರ್ಶಕ “ಶೂ” ಎಂದ ತಕ್ಷಣ ಅರಳಿದ ಬಗೆಯ ಬಗ್ಗೆ ಬರೆದಿದ್ದ. ಏಕೆಂದರೆ ಆ ಶಬ್ದ ಅವನಿಗೆ ಗೊತ್ತು. ಅದು ತೀರಾ ಆಪ್ತ.

Iranian Filmmaker, Majid Majidi welcomed me out on his hotel terrace. His wavy reaching hair, puppy dog eyes, and graying mustache reminded me of Albert Einstein. I framed and focused, “Smile!” I shouted, I was in a good mood. But Majid, peered rather tentatively at the camera. “Smile!” I shouted again, it didn’t occur to me until well into the interview, that Majid knew a completely different word for “Smile.”

“Could you tie your shoe?” I requested. Then he smiled. “Shoe” he knew. That’s the motif his sweet film Children of Heaven runs on … the simple shoe.

ಆ ಸಂದರ್ಶನವನ್ನು ಇಲ್ಲಿ ಓದಿ.

ಆ ಅಮ್ಮನನ್ನು ಹುಡುಕುತ್ತಾ.. May 8, 2008

Posted by magiccaarpet in balcony.
add a comment

-ಹೇಮಶ್ರೀ

ಇತ್ತೀಚೆಗೆ ನಾನು ನೋಡಿದ ಸ್ಪಾನಿಷ್ ಚಿತ್ರ.

LA MISMA LUNA ( Under the same moon )
- Director: Patricia Riggen .
ಒಬ್ಬ ಪುಟ್ಟ ಹುಡುಗನ ದಿಟ್ಟ ಪಯಣದ ಕತೆ.

ಒಂಭತ್ತು ವರ್ಷದ ಕಾರ್ಲಿತೋಸ್, ಅಮೇರಿಕಾದಲ್ಲಿರುವ ತನ್ನ ತಾಯಿಯನ್ನು ಸೇರಲು ಮೆಕ್ಸಿಕೋದಿಂದ ಅಮೇರಿಕಾಗೆ ಪ್ರಯಾಣ ಬೆಳೆಸುತ್ತಾನೆ. ಆತನ ತಾಯಿ ರೊಸಾರಿಯೊ ಮಗನ ಉತ್ತಮ ಭವಿಷ್ಯಕ್ಕಾಗಿ ನಾಲ್ಕು ವರ್ಷಗಳಿಂದ ಅನಧಿಕೃತವಾಗಿ ಅಮೇರಿಕಾದಲ್ಲಿ ದುಡಿಯುತ್ತಿರುತ್ತಾಳೆ. ಅನಿವಾರ್ಯ ಕಾರಣಗಳಿಂದಾಗಿ ತಾಯಿ, ಮಗ ಪರಸ್ಪರರನ್ನು ಭೇಟಿಯಾಗಲು ನಿರ್ಧರಿಸುತ್ತಾರೆ.
But, It becomes an emotional journey and a love story between a mother and a son.

 

ರೊಸಾರಿಯೊಗೆ , ಮಗನನ್ನೂ ಸಹ ಅಮೇರಿಕಾಗೆ ಕರೆದುಕೊಂಡು ಬರುವ ಯೋಚನೆ. ಆದರೆ ತಾನು ಅಮೇರಿಕಾಗೆ ಬಂದಿರುವುದೇ ಕಾನೂನು ಬಾಹಿರ. ಯಾವುದೇ documentಗಳೂ ಆಕೆಯಲ್ಲಿಲ್ಲ. ಇನ್ನು ಮಗನನ್ನು ಕರಕೊಂಡು ಬರುವುದಾದರೂ ಹೇಗೆ ಎಂಬ ಚಿಂತೆ ಆಕೆಯನ್ನು ಕಾಡುತ್ತಿರುತ್ತದೆ. ಇತ್ತ ಮೆಕ್ಸಿಕೋದಲ್ಲಿರುವ ಕಾರ್ಲಿತೋಸ್‍ಗೆ , ತನ್ನ ಅಜ್ಜಿಯ ಆರೈಕೆಯಲ್ಲಿ ತಾನು ಚೆನ್ನಾಗಿದ್ದರೂ ತಾಯಿಯನ್ನು ಬಿಟ್ಟು ಇರಬೇಕಾದ ನೋವು. ತಂದೆ ಇಲ್ಲದ ಕೊರಗು ಬೇರೆ.

ಅಜ್ಜಿಯ ಅನಿರೀಕ್ಷಿತ ಸಾವಿನಿಂದ , ಕಾರ್ಲಿತೋಸ್‍ ಏಕಾಂಗಿಯಾಗುತ್ತಾನೆ. ಆಗ ಆತನಿಗೆ ಹೊಳೆಯುವುದೇ … ಗಡಿ ದಾಟಿ ತಾಯಿಯನ್ನು ಸೇರುವ ಯೋಚನೆ. ಯಾವ ಅಪಾಯ , ತೊಂದರೆಗಳನ್ನೂ ಲೆಕ್ಕಿಸದೆ ಹೊರಟೇ ಬಿಡುತ್ತಾನೆ ಕಾರ್ಲಿತೋಸ್. ತನ್ನ ತಾಯಿ ಎಂದಿನಂತೆ ಭಾನುವಾರ ತನಗೆ phone ಮಾಡುವ ಮೊದಲು ತಾನು ಆಕೆಯನ್ನು ಭೇಟಿ ಮಾಡುವ ಆತುರ.ಇಬ್ಬರು ಅಮೇರಿಕನ್ ವಿದ್ಯಾರ್ಥಿಗಳ ಸಹಾಯದಿಂದ ಅವರ ಕಾರಿನ ಸೀಟಿನಡಿಯಲ್ಲಿ ಅಡಗಿ ಕುಳಿತು ಗಡಿ ದಾಟುವುದರಲ್ಲಿ ಸಫಲನಾಗುತ್ತಾನೆ. ಆದರೆ, ಅಮೇರಿಕನ್ ವಿದ್ಯಾರ್ಥಿಗಳು immigrant officer ಗಳ ಕೈಗೆ ಸಿಕ್ಕಿಬೀಳುತ್ತಾರೆ.

ಮತ್ತೆ ಕಾರ್ಲಿತೋಸ್ ಒಬ್ಬಂಟಿ.
ಕಾರ್ಲಿತೋಸ್‍ನ ಪ್ರಯಾಣದಲ್ಲಿ ಜತೆಯಾಗುತ್ತಾನೆ ಎನ್ರಿಕ್. ಆತನೂ ಅನಧಿಕೃತ ವಲಸೆಗಾರ. ಅಮೇರಿಕ ಪೋಲಿಸರ ಕಣ್ಣು ತಪ್ಪಿಸಿ ಓಡಾಡಬೇಕಾದ ಪರಿಸ್ಥಿತಿ ಇಬ್ಬರದೂ. ಎನ್ರಿಕ್ ಗೆ ಕಾರ್ಲಿತೋಸ್‍ನ ಜತೆ ಅಸಹನೀಯವಾಗುತ್ತದೆ. ತನಗೆ ಗಂಟು ಬಿದ್ದಿರುವ ಸಣ್ಣ ಹುಡುಗನನ್ನು ಆತನ ತಾಯಿಯ ಜತೆ ಸೇರಿಸುವ ಅನಿವಾರ್ಯ ಜವಾಬ್ದಾರಿ . ಕೈಯಲ್ಲಿ ಬೇರೆ ಕಾಸಿಲ್ಲ. ಕಾರ್ಲಿತೊಸ್‍ನ ಪ್ರಯತ್ನ ದಿಂದ ಇಬ್ಬರೂ ಪಿಝಾ ರೆಸ್ಟೋರಂಟ್ ಒಂದರಲ್ಲಿ ಎರಡು ದಿನ ಕೆಲಸ ಮಾಡಿ ಸ್ವಲ್ಪ ಹಣ ಗಳಿಸುತ್ತಾರೆ.

ಇತ್ತ , ರೊಸಾರಿಯೊಗೆ ತನ್ನ ಮಗ ಮೆಕ್ಸಿಕೋ ಗಡಿ ದಾಟಿ ಬಂದಿರುವ ವಿಷಯ ತಿಳಿಯುತ್ತದೆ. ಮಗ ಎಲ್ಲಿದ್ದಾನೋ , ಸುರಕ್ಷಿತವಾಗಿದ್ದಾನೋ ಎನ್ನುವ ಭಯ ಆಕೆಗೆ. ಖಂಡಿತವಾಗಿ ಆತ ಪೋಲೀಸರ ಕೈಗೆ ಸಿಕ್ಕಿ ಬಿದ್ದು , ಪೋಲೀಸರು ಆತನನ್ನು ಮೆಕ್ಸಿಕೊಗೆ ಕಳುಹಿಸಿ ಬಿಡುತ್ತಾರೆ ಎನ್ನುವ ಆತಂಕ. ತನ್ನನ್ನು ಇಷ್ಟ ಪಡುತ್ತಿದ್ದ ಪೇಕ್‍ ( ಆತ ಅಮೇರಿಕನ್ ) ನನ್ನು ರೊಸಾರಿಯೊ , ಗ್ರೀನ್ ಕಾರ್ಡ್ ಸವಲತ್ತಿಗಾಗಿ ಮದುವೆ ಮಾಡಿಕೊಳ್ಳಲು ಈ ಹಿಂದೆ ಒಪ್ಪಿದ್ದಳು. ಆದರೆ, ಈಗ ತನ್ನ ಮಗ ಒಬ್ಬಂಟಿ. ಆತ ಕ್ಷೇಮವಾಗಿದ್ದಾನೆ ಎನ್ನುವುದೂ ಆಕೆಗೆ ತಿಳಿದಿಲ್ಲ. ತನ್ನ ಮದುವೆಯನ್ನು ರದ್ದು ಮಾಡಿ , ಮೆಕ್ಸಿಕೋಗೆ ಹಿಂತಿರುಗುವ ನಿರ್ಧಾರ ಮಾಡುತ್ತಾಳೆ.

ತಾಯಿಯನ್ನು ಹುಡುಕುತ್ತಿರುವ ಕಾರ್ಲಿತೋಸ್‍ಗೆ ಆಕೆಯ ವಿಳಾಸ ಗೊತ್ತಿಲ್ಲ. ತಿಳಿದಿರುವುದು ಒಂದೇ. ಆಕೆ ಪ್ರತಿ ಭಾನುವಾರ ತನಗೆ phone ಮಾಡುತ್ತಿದ್ದ ಜಾಗದ ವಿವರ. ಒಂದು ಪಿಝಾ ರೆಸ್ಟೊರೆಂಟ್, ಒಂದು ಗೋಡೆ ಚಿತ್ರ , ನಾಲ್ಕು ದಾರಿಗಳು ಸಂಧಿಸುವ ಜಾಗ ಮತ್ತು phone booth . ಇವಿಷ್ಟನ್ನು ಇಡೀ ಲಾಸ್ ಎಂಜಲೀಸ್‍ನಲ್ಲಿ ಹುಡುಕುವುದೆಂದರೆ. ಮರುದಿನ ಭಾನುವಾರ. ಎನ್ರಿಕ್ ಮತ್ತು ಕಾರ್ಲಿತೋಸ್ ದಿನವಿಡೀ ವಿಳಾಸ ಪತ್ತೆ ಹಚ್ಚುವುದರಲ್ಲೇ ಸುಸ್ತು. ಮರುದಿನ ಅನಿರೀಕ್ಷಿತವಾಗಿ ಎನ್ರಿಕ್ ಪೋಲೀಸರಿಗೆ ಸಿಕ್ಕಿ ಬೀಳುತ್ತಾನೆ. ಕಾರ್ಲಿತೋಸ್ ಅಲ್ಲಿಂದ ತಪ್ಪಿಸಿಕೊಂಡು ಓಡುತ್ತಾನೆ.

 

ಚಿತ್ರದ ಕೊನೆ , ನಿರೀಕ್ಷಿತ ಅನ್ನಿಸಿದರೂ … ಮನ ಮುಟ್ಟುವ ರೀತಿಯಲ್ಲಿ ಅನಿರೀಕ್ಷಿತ frame ನಲ್ಲಿ ಚಿತ್ರ ಕೊನೆಗೊಳ್ಳುತ್ತದೆ. ವಾಚ್ಯವಾಗದೆ , ತಾಯಿ ಮತ್ತು ಮಗ ಸಂಧಿಸುವ ಕ್ಷಣದ ಕಲ್ಪನೆಯನ್ನು ಪ್ರೇಕ್ಷಕರಿಗೇ ಬಿಟ್ಟುಕೊಡುತ್ತದೆ.

ಕಾನೂನು , ಆಡಳಿತ, ರಾಜಕಾರಣ, ಅನಧಿಕೃತ ವಲಸೆಗಾರರ ಪಾಡು , ಸ್ಥಿತಿ … ಅವರ ನೋವು - ಆತಂಕ - ತೊಂದರೆಗಳನ್ನು ಎಲ್ಲಿಯೂ ಗಟ್ಟಿಯಾಗಿ ಹೇಳದೆ ಮಾನವ ಸಂಬಂಧಗಳ ಮಿಡಿತವನ್ನು ನವಿರಾಗಿ ಈ ಚಿತ್ರ ಬಿಂಬಿಸುತ್ತದೆ.

ತಾಯಿ ಮತ್ತು ಮಗ ಬೇರೆ ಬೇರೆಯಾಗಿದ್ದರೂ ಒಂದೇ ಚಂದ್ರನ ಅಡಿ ಇಬ್ಬರ ನೋವೂ ಒಂದೇ.
ಜತೆಯಾಗಿರಬೇಕೆನ್ನುವ ಹಂಬಲ , ಅದಕ್ಕಿರುವ ಅಡ್ಡಿಗಳು , ಅವನ್ನು ಲೆಕ್ಕಿಸದೆ ಕಾರ್ಲಿತೋಸ್ ಕೈಗೊಳ್ಳುವ ನಿರ್ಧಾರ ಎಲ್ಲವನ್ನೂ ಚಿತ್ರದ ನಿರ್ದೇಶಕಿ ಪೆಟ್ರೀಷಿಯಾ ರಿಗ್ಗೇನ್ ಸಮರ್ಥವಾಗಿ ನಿರೂಪಿಸುತ್ತಾರೆ. ಕಾರ್ಲಿತೋಸ್ , ಧಿಡೀರೆಂದು ಗಡಿ ದಾಟುವ ಯೋಚನೆ ಮಾಡುವುದು ಸ್ವಲ್ಪ ನಾಟಕೀಯ ಅನ್ನಿಸಿದರೂ ಬೇರೆಲ್ಲಿಯೂ ಅತಿಯಾದ ಭಾವುಕತೆ ಚಿತ್ರದಲ್ಲಿ ಕಾಣುವುದಿಲ್ಲ. ಈ ಕಾರಣಕ್ಕಾಗೇ , ಚಿತ್ರದ ಹಲವು ಸನ್ನಿವೇಶಗಳು ಮನಸ್ಸಲ್ಲಿ ಉಳಿಯುತ್ತವೆ.
ತನ್ನ ತಾಯಿಯನ್ನು ನೆನಪಿಸಿಕೊಳ್ಳುವ ದೃಶ್ಯದಲ್ಲಿ , ಕಾರ್ಲಿತೋಸ್ - ” ನನ್ನ ತಾಯಿ ಯಾವಾಗಲೂ ಹೇಳುತ್ತಾಳೆ. ಆಕೆಯ ನೆನಪಾದಾಗಲೆಲ್ಲಾ… ಆಕಾಶದಲ್ಲಿನ ಚಂದ್ರನನ್ನು ನೋಡುವಂತೆ. ಯಾಕಂದ್ರೆ. ಅವಳು ಕೂಡ ಅದೇ ಚಂದ್ರನನ್ನು ನೋಡುತ್ತಿರುತ್ತಾಳೆ “. ಎನ್ನುತ್ತಾನೆ. ಚಿತ್ರದ ಒಟ್ಟು ಆಶಯವನ್ನು ಈ ದೃಶ್ಯ ಕಟ್ಟಿಕೊಡುತ್ತದೆ. ಅಜ್ಜಿಯ ಸಾವನ್ನು ಕಾರ್ಲಿತೋಸ್ ಅರಗಿಸಿಕೊಳ್ಳುವ ದೃಶ್ಯದಲ್ಲಿ ಆತನ ಮನಸ್ಸಿನ maturity , ತನ್ನ ತಂದೆಯ ಕುರಿತು ಸತ್ಯ ಅರಿವಾದಾಗಿನ ನೋವು, ಎನ್ರಿಕ್ ಮತ್ತು ಕಾರ್ಲಿತೋಸ್ ನಡುವಿನ ಸ್ನೇಹ - ಜಗಳದ ಕಣ್ಣು ಮುಚ್ಚಾಲೆ … ಹೀಗೆ ಭಾವನೆಗಳನ್ನು ಸರಳವಾಗಿಸುತ್ತಾ, ಚಿತ್ರ , ಮನಸ್ಸನ್ನು ನಾಟುತ್ತದೆ.