There’z a very good service provider, 70mm in Koramangala. They deliver DVDs to your doorsteps, and let you keep the DVDs for 15 days or so (depending upon your type of subscription). I was a subscriber a year back, and discontinued due to lack of time. But I found it’z very good, you can contact them at http://www.seventymm.com. U can make online payments, they will come to you with movies.
-Shree
ಶ್ರೀದೇವಿ ಹೀಗೊಂದು ಮೈಲ್ ಕಳಿಸಿದಾಗ ‘ಇಂದೆಮಗೆ ಆಹಾರ ಸಿಕ್ಕಿತು’ ಎಂಬಂತೆ ನಾವು ಆ ಲಿಂಕ್ ನ ಬೆನ್ನತ್ತಿ ಹೋದೆವು . ನಿಜಕ್ಕೂ ಒಂದು ಒಳ್ಳೆಯ ಔಟ್ಲೆಟ್ ನ ಪರಿಚಯವಾಯಿತು. ಥ್ಯಾಂಕ್ಸ್ ಶ್ರೀದೇವಿ.
ಬೆಂಗಳೂರು ಸೇರಿದಂತೆ ೬ ನಗರಗಲ್ಲಿ ಒಂದು ಫೋನ್ ಮಾಡಿದರೆ ಅಥವಾ ಇ ಮೈಲ್ ಕಳಿಸಿದರೆ ಮನೆ ಬಾಗಿಲಿಗೆ ಅತ್ಯುತ್ತಮ ಸಿನೆಮಾ ಕಳಿಸುವ ವ್ಯವಸ್ಥೆಯೇ ೭೦ ಎಂ ಎಂ.
ನಿಮಗೆ ಯಾವ ಸಿನೆಮಾ ನೋಡಬೇಕು ಎಂಬ ಗೊಂದಲವಿದೆಯೇ? ಯಾವುದಾದರೂ ಸಿನೆಮಾದ ಹೆಸರು ಮರೆತು ಹೋಗಿದ್ದೀರಾ? ನಿಮಗೆ ಅತ್ಯಂತ ಇಷ್ಟವಾದ ನಟರ ಚಿತ್ರ ಬೇಕೆಂದು ಹುಡುಕುತ್ತಿದ್ದೀರಾ? ಈ ಎಲ್ಲಕ್ಕೂ ಪರಿಹಾರವಾಗಿ ಇರುವ ತಾಣದ ಹೆಸರೇ- ೭೦ ಎಂ ಎಂ
ಎಲ್ಲಿಗೂ ಹೋಗಬೇಕಾದ ಅಗತ್ಯವಿಲ್ಲ. ನಿಮ್ಮ ಮನೆ ಬಾಗಿಲಿಗೆ ಸಿನೆಮಾ ತಲುಪಿಸಿ ಕೊಂಡೊಯ್ಯುವ ವ್ಯವಸ್ಥೆ ಇದೆ. ಭಾರತದ, ಜಗತ್ತಿನ ಅತ್ಯುತ್ತಮ ಚಿತ್ರಗಳು, ಫಿಲ್ಮ್ ಫೇರ್ ಪ್ರಶಸ್ತಿ, ಜಾಗತಿಕ ಪ್ರಶಸ್ತಿ ಗೆದ್ದ ಚಿತ್ರಗಳು, ಇತ್ತೀಚೆಗೆ ಬೆಳಕು ಕಂಡ ಚಿತ್ರಗಳು ಎಲ್ಲವೂ ಈ ತಾಣದಲ್ಲಿದೆ.
ಈ ತಾಣದ ವಿಶೇಷತೆ ಎಂದರೆ ನೀವು ವಿಮರ್ಶೆ ಓದಿ, ಬೇರೆಯವರು ಯಾವ ಸಿನೆಮಾ ಹೆಚ್ಚು ನೋಡಿದ್ದಾರೆ ಎಂದು ಗಮನಿಸಿ, ಇಲ್ಲವೇ ಸಿನೆಮಾದ ಫೋಟೋಗಳನ್ನು ನೋಡಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 6000 0070 ಗೆ ಫೋನ್ ಮಾಡಿ ಸಿನೆಮಾ ಪಡೆಯಿರಿ.


May 21, 2008 at 5:24 pm
ಇದೇ ರೀತಿ ರಿಲೆಯನ್ಸ್ ರವರ ಬಿಗ್ ಫ್ಲಿಕ್ಸ್ ಸೇವೆ ಕೂಡ ಇದೆ. http://www.bigflix.com/
May 21, 2008 at 9:08 pm
ಫ್ರೀ ಅಲ್ಲ ಸಾರ್, ದುಡ್ಡು ಕಟ್ಬೇಕು! ಅದನ್ನ ಹೇಳೋದು ಮರೆತಿದ್ದೀರಾ!:)