Photo : Bangalore Mirror ಅಭಿನಯ್ ಥಿಯೇಟರ್ ನಲ್ಲಿ ‘ಅನು’ ಸಿನೆಮಾ ನೋಡಲು ಹೋದವರಿಗೆ ಅಚ್ಚರಿ ಕಾದಿತ್ತು. ಏನ್ ಗೊತ್ತಾ…? ‘ಅನು’ ಹೀರೋಯಿನ್ ಪೂಜಾ ಗಾಂಧಿಯೇ ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತಿದ್ದರು. ಟಿಕೆಟ್..ಟಿಕೆಟ್ ಅಂತ ಕೇಳೋದು ಟಿಕೆಟ್ ಹರಿಯೋದು. ಅಭಿಮಾನಿಗಳಂತೂ ಸೂಪರ್ ಸುಸ್ತು.
Archive for the ‘Mayaa bazaar’ Category
14 May
ಸಿನೆಮಟೋಗ್ರಾಫ್-ವಿಟಾಸ್ಕೋಪ್
-ಪರಮೇಶ್ವರ ಗುರುಸ್ವಾಮಿ ಲ್ಯೂಮಿಯೇರ್ ಸಹೋದರರ ’ಸಿನೆಮಟೋಗ್ರಾಫ್’ನ ಜೊತೆಗೇ ಎಡಿಸನ್ ಕಂಪನಿ ಏಕ ವ್ಯಕ್ತಿ ವೀಕ್ಷಣೆಯ ’ಕೈನೆಟೋಸ್ಕೋಪ’ನ್ನು ಬಿಟ್ಟುಕೊಟ್ಟು ಸಮೂಹ ಪ್ರದರ್ಶನಕ್ಕೆ ’ವಿಟಾಸ್ಕೋಪ್’ ಅನ್ನು ಬಳಸಲಾರಂಭಿಸುತ್ತದೆ. ಎರಡೂ ಕಂಪನಿಗಳು ಮೂಲಭೂತವಾಗಿ ಉದ್ಯಮಗಳು. ಇಬ್ಬರ ಕೈಗೂ ಜನರನ್ನು ಸಮ್ಮೋಹನಗೊಳಿಸಿ ಹಣ ಮಾಡುವ ಚಿತ್ರ ತಯಾರಿಕೆ ಮತ್ತು ಪ್ರದರ್ಶನದ ಸಲಕರಣೆಗಳು ದಕ್ಕಿದ್ದುವು. ಎರಡೂ ಕಂನಿಗಳು ಪೈಪೋಟಿಯ ಮೇಲೆ ಜನರ ಮೇಲೆ ಪುಂಖಾನುಪುಂಖವಾಗಿ ಚಿತ್ರಗಳನ್ನು ಹೇರತೊಡಗಿದರು.ಪ್ರಾರಂಭದ ಚಿತ್ರಗಳು ೧೫ರಿಂದ ೯೦ ಸೆಕೆಂಡುಗಳಷ್ಟು ಮಾತ್ರ ಇರುತ್ತಿದ್ದುವು. ಜನರಿಗೆ ತೆರೆಯ ಮೇಲೆ ಮೂಡುವ ಚಲನೆಯನ್ನು ವೀಕ್ಷಿಸುವುದೇ [...]
6 May
ಗ್ರಾಂಡ್ ಕೆಫೆಯ ನೆಲಕೋಣೆಯಲ್ಲಿ..
ಮಾಯಾ ಬಜಾರ್ -ಪರಮೇಶ್ವರ ಗುರುಸ್ವಾಮಿ ಲ್ಯೂಮಿಯೇರ್ ಸಹೋದರರು ಮಾರ್ಚ್ ೨೨, ೧೮೯೫ರಂದು ತಮ್ಮ ಸಿನೆಮಾಟೊಗ್ರಾಫ್ ಎಂಬ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದ ದೃಶ್ಯವನ್ನು ಆಹಾನ್ವಿತ ಪ್ರೇಕ್ಷಕರಿಗೆ ಪ್ರದರ್ಶಿಸಿದ್ದರು. ಅದು, ಲ್ಯೂಮಿಯೇರ್ ಕಾರ್ಖಾನೆಯಿಂದ ಕೆಲಸ ಮುಗಿಸಿ ಹೊರಬರುತ್ತಿರುವ ಕಾರ್ಮಿಕರನ್ನು ಚಿತ್ರೀಕರಿಸಿದ ದೃಶ್ಯವಾಗಿತ್ತು. ಪುನಃ ಅದೇ ವರ್ಷ ಜೂನ್ ೧೦ರಂದು ೮ ಚಿತ್ರ ತುಣುಕುಗಳನ್ನು ಪ್ರದರ್ಶಿಸಿದ್ದರು. ಅದೇ ವರ್ಷ ಡಿಸೆಂಬರ್ ೨೮ರಂದು ಸಾರ್ವಜನಿಕರಿಗೆ ಪ್ರವೇಶ ದರ ವಿಧಿಸಿ ಪ್ಯಾರಿಸ್ಸಿನ ಗ್ರಾಂಡ್ ಕೆಫೆಯ ನೆಲಕೋಣೆಯಲ್ಲಿ ಕೆಲವು ಚಿತ್ರಗಳನ್ನು ಪ್ರದರ್ಶಿಸಿದರು. ಈ ದಿನಾಂಕವನ್ನೆ ಸಿನೆಮಾ [...]
