
ಫಿಲ್ಮ್ ಎಲ್ಲಿಂದ ತರುವುದು ಎನ್ನುವ ಪುಟ್ಟ ಪ್ರಶ್ನೆ ಅನೇಕ ದೊಡ್ಡ ವ್ಯವಸ್ಥೆಯತ್ತ ಬೆರಳು ತೋರಿಸುತ್ತಿದೆ. ಟೈಮ್ಸ್ ಆಫ್ ಇಂಡಿಯಾ ದಲ್ಲಿ ಬಂದಿರುವ ಈ ಲೇಖನ ಫಿಲ್ಮ್ ಬಾಡಿಗೆಗೆ ಕೊಡುವ ಕ್ಷೇತ್ರದಲ್ಲಿಯೂ ದೊಡ್ಡ ಕಂಪನಿಗಳು ಹೆಜ್ಜೆ ಹಾಕುತ್ತಿರುವುದನ್ನು ತಿಳಿಸುತ್ತಿದೆ.
Now video rental business goes corporate
By Himank Sharma
New Delhi, May 15 (IANS) The video rental business, dominated for
years by the neighbourhood shop around the corner, is now drawing big
corporates - a move that makes watching movies at home easier and
promises to cut down piracy.
Bigflicks Ltd, a subsidiary of the Reliance Anil Dhirubhai Ambani
Group (ADAG), is the latest entrant with an initial network spanning
10 cities. Seventymm, with its presence in six cities, currently
dominates the market. And then there are a few regional players like
Movie Mart and Cine Flix that have customers in Delhi and Mumbai
respectively.
Kamal Gianchandani, COO of BigFlicks, told IANS: “The market potential
is huge and immense with regard to demand of home video. The industry
is gaining recognition. “
The proportion of India’s organised home video industry to the number
of box office releases is still small compared to Western countries
like the US. But a report by the Federation of Indian Chambers of
Commerce and Industry (FICCI) says the industry witnessed 30 percent
growth in 2007 and expects to grow at the rate of 15 percent to a
Rs.15-billion industry by 2012.
Movie aficionados couldn’t be happier. Not only do they get the best
quality original prints but also an array of choices available at a
small price.
Gaurav Ahuja, 21, watches two movies every day and the number doubles
on weekends.
“Earlier good quality DVDs were hard to get and only recent titles
were available. Now I make an online play-list and all I have to do is
sms the pickup and delivery timings and make popcorn,” he said.
Customers are offered flexible plans to suit their viewing habits. And
there are no late fees, so people don’t have to slip in the disc as
soon as it arrives.
But Amit Singh, owner of a video rental store in south Delhi’s Lajpat
Nagar, says the organised players have not dented his business and
clientele.
“I used to rent out 5-10 videos every day when I started in 2001. The
numbers have only gone up over the years,” Singh said.
“Now the demand is somewhere between 30-40 videos per day. I’ve also
started renting out games and the business is good,” Singh added.
The existence of unorganised players, corporates say, contributes to
video piracy.
“With a large number of unorganised players still playing a dominant
role in the market, piracy is quite prevalent in the industry. Entry
of more organised players will bring down piracy in a big way,” said
Gianchandani.
“Also, factors like releasing DVDs on a date closer to a date of box
office releases will contribute to reducing piracy,” he added.
Singh, however, refrained from commenting on the rampant piracy and
spoke about the good quality of his videos instead.
“I have the best prints in the whole of Lajpat Nagar; therefore I have
a wide delivery network covering the whole of (nearby) Defence Colony
and Jangpura. Customers don’t care if the video is pirated or original
as long as the print is good,” he said.
Gianchandani said the film fraternity has responded well to the
corporatisation of home video rentals.
“They (film industry) have been very supportive and receptive. We have
relationships with all major home video distributors and have also
tied up with Internet VOD (video on demand) right holders,” he said.
But Suresh Manssharamani, president of Movie Mart, feels otherwise.
“We have received very little support from the film fraternity. They
are still not understanding and visualising the growth in the home
video segment. They need to release movies faster in the home video
format.”
While film buffs enjoy the flexibility and choice corporate players
offer, what they miss is the personal selling factor that is lent by
their friendly neighbourhood shopkeeper.
Ratish Sharma, a manager at a software firm, said: “I really enjoy the
service and the wide choice I get, but I do miss the jokes and
friendly talks I had with my neighbourhood video vendor whenever I
paid him a visit.”
Nevertheless, the market is growing by the day and Movie Mart expects
a subscriber base of one million in three-five years. While Bigflicks
aims to expand operations in the form of stand-alone, shop-in-shop and
franchisees, Seventymm acquired regional leader Madhouse entertainment
about a year ago.

ಮಾಯಾ ಬಜಾರ್ ಆರಂಭ
ನಾವು ಹೇಳಲಿಲ್ಲವಾ. ಪರಮೇಶ್ ಒಳ್ಳೆಯ ಮನುಷ್ಯ ಅಂತ. ಈಗ ಇನ್ನೊದು ಪ್ರೂಫ್ ಇಲ್ಲಿದೆ. ಪರಮೇಶ್ ಹೇಳಿದ ಸಮಯಕ್ಕೆ ಸರಿಯಾಗಿ ತಮ್ಮ ಕಾಲಂ ಬರೆದುಕೊಟ್ಟಿದ್ದಾರೆ. ಪರಮೇಶ್ ಥ್ಯಾಂಕ್ಸ್ ..
-ಪರಮೇಶ್ವರ್ ಗುರುಸ್ವಾಮಿ
ತಾನು ಇನ್ನೊಬ್ಬ ಶೇಕ್ಸಪಿಯರ್ ಆಗಬೇಕು ಅನ್ನೋ ಮಹದಾಕಾಂಕ್ಷೆ ಅವನದು. ತಾನು ಮಹಾನ್ ಪ್ರತಿಭಾವಂತ ಅನ್ನೋ ಆತ್ಮ ವಿಶ್ವಾಸವೂ ಅವನದೇ. ರಂಗನಟನಾಗಿ ಒಂದಿಷ್ಟು ಅವಕಾಶಗಳನ್ನ ಗಿಟ್ಟಿಸಿಕೊಂಡಿದ್ದ. ಒಂದಿಷ್ಟು ಪದ್ಯ, ಕಥೆ ಅದು ಇದು ಅಂತ ಪ್ರಕಟವಾಗಿದ್ವು. ಆದರೆ ನಾಟಕಕಾರನಾಗಿ ಶತ ಪ್ರಯತ್ನ ಪಟ್ಟರೂ ಆ ಪಟ್ಟ ಅವನಿಗೆ ಸಿಗಲಿಲ್ಲ. ಬದುಕಿನಲ್ಲಿ ಬಹಳ ಬವಣೆ ಪಟ್ಟಿದ್ದ. ಅವನ ಹೆಸರು ಡೇವಿಡ್ ವಾರ್ಕ್ ಗ್ರಿಫಿತ್. ಸಿನೆಮಾವನ್ನ ಎಲ್ಲ ಕಲೆಗಳ ಕಲಸು ಮೇಲೋಗರವಾದ ಒಂದು ನಿಕೃಷ್ಟ ಚಟುವಟಿಕೆ ಅಂತ ಎಲ್ಲರೂ ಭಾವಿಸಿದ್ದ ಕಾಲ. ಗ್ರಿಫಿತ್ತನ ಅಭಿಪ್ರಾಯವೂ ಅದೇ ಆಗಿತ್ತು. ಆಗ ಸಿನೆಮಾಕ್ಕೆ ಹದಿಮೂರರ ಹರೆಯ. ಯಾರೇನೇ ಕರೆದರೂ ಜನಪ್ರಿಯತೆಯಲ್ಲಿ, ಹಣಗಳಿಕೆಯಲ್ಲಿ ಧಾಪುಗಾಲು ಇಡುತ್ತಿತ್ತು. ಎಡಿಸನ್ನನ ಕಂಪನಿಯ ನಿರ್ದೇಶಕ ಎಡ್ವಿನ್ ಪೋರ್ಟರ್, “ದ ಗ್ರೇಟ್ ಟ್ರೈನ್ ರಾಬರಿ” ಎಂಬ ಚಿತ್ರ ಮಾಡಿ ಜಗತ್ ಪ್ರಸಿದ್ಧನಾಗಿದ್ದ. ಆ ಚಿತ್ರ, ಸಿನೆಮಾ ಜಗತ್ತಿನ ಮೊಟ್ಟ ಮೊದಲ ಬ್ಲಾಕ್ ಬಸ್ಟರ್. ಈಗಲೂ ಪೋರ್ಟರ್ ನನ್ನು ಸಿನೆಮಾ ಮಾಧ್ಯಮದ ಮೊದಲ ಕಥಾ ನಿರೂಪಕ ಎಂದೇ ಗುರುತಿಸುವುದು.
ಸಿನೆಮಾಗಿಂತ ನಾಟಕವೇ ಶ್ರೇಷ್ಠವಾದ ಪ್ರಕಾರ ಎಂದು ಎಸ್ಟೇ ಬಿಂಕ ಮಾಡಿದರೂ ಹೊಟ್ಟೆ ಪಾಡು ಕೇಳಬೇಕಲ್ಲ. ಅಂತೂ ಒಳ್ಳೆಯ ಕಥೆಯನ್ನಾದರೂ ಸಿನೆಮಾಕ್ಕೆ ಕೊಟ್ಟು ಸ್ವಲ್ಪ ಖರ್ಚಿಗೆ ಕಾಸು ಮಾಡಿಕೊಳ್ಳೋಣ ಅಂದುಕೊಂಡು ಗ್ರಿಫಿತ್ ಪೋರ್ಟರ್ ನನ್ನು ಸಂಪರ್ಕಿಸುತ್ತಾನೆ. ತಾನೇನು ಸಿನೆಮಾ ತಯಾರಿಕೆಯ ಕೀಳು ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿಲ್ಲವಲ್ಲ. ಬರವಣಿಗೆಗೆ ಮೇಲು ಕೀಳು ಎಂಬ ಸೂತಕ ಇಲ್ಲ ಅಂದುಕೊಂಡವನು “ಟೋಸ್ಕ” ಅನ್ನುವ ತನ್ನ ಚಿತ್ರಕಥೆಯನ್ನ ಮಾರಲು ಪ್ರಯತ್ನಿಸುತ್ತಾನೆ. ಗ್ರಿಫಿತ್ ಕೊಟ್ಟ ಹಸ್ತಪ್ರತಿಯನ್ನು ಬದಿಗಿಟ್ಟ ಪೋರ್ಟರ್ ಅದಲ್ಲಿರಲಿ ನನ್ನ ಚಿತ್ರದಲ್ಲಿ ನಟಿಸುತ್ತೀಯಾ. ಬಾ ಅವಕಾಶ ಕೊಡುತ್ತೇನೆ ಅನ್ನುತ್ತಾನೆ. ದಿನಕ್ಕೆ ೫ ಡಾಲರ್ ಕೂಲಿ. ಆಗ ತಾನೆ ಮದುವೆಯಾಗಿದ್ದ ಗ್ರಿಫಿತ್ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ನಟನಾಗುತ್ತಾನೆ. ತನ್ನ ಹೆಸರು, ಡೇವಿಡ್ ವಾರ್ಕ್ ಗ್ರಿಫಿತ್ ಅನ್ನು ತಾನು ಮುಂದೆ ಅಭಿನವ ಶೇಕ್ಸ್ ಪಿಯರ್ ಆದಾಗ ಬೇಕಾಗುತ್ತದೆ, ಈ ಕೀಳು ಸಿನೆಮಾಕ್ಕೆ ಬೇಡ ಅಂದುಕೊಂಡು ಲಾರೆನ್ಸ್ ಗ್ರಿಫಿತ್ ಎಂಬ ಹೆಸರಿಟ್ಟುಕೊಂಡು ನಟನಾಗುತ್ತಾನೆ. ಅದೇ ವರ್ಷ ಬಯೋಗ್ರಾಫ್ ಎಂಬ ಕಂಪನಿಗೆ ವಲಸೆ ಹೋಗುತ್ತಾನೆ.

ಒಂದು ವರ್ಷದಲ್ಲಿ ಸಿನೆಮಾದ ಜನಪ್ರಿಯತೆ ಎಷ್ಟು ಬೆಳೆಯುತ್ತದೆಂದರೆ. ನಿರ್ಮಾಣ ಸಂಸ್ಥೆಗಳು ನಾಕಾಣೆ ಪ್ರಭುಗಳನ್ನು ತೃಪ್ತಿ ಪಡಿಸುವುದಕ್ಕೆ ಸಾಕು ಬೇಕಾಗುತ್ತದೆ. ಬಯೋಗ್ರಾಫ್ ಕಂಪನಿಯವರು ಗ್ರಿಫಿತ್ ನನ್ನು ನಿರ್ದೇಶಕನಾಗು ಎಂದು ಕೇಳಿಕೊಳ್ಳುತ್ತಾರೆ. ನಟನಾಗಿ ಏನೋ ಒಂದಿಷ್ಟು ಸಂಪಾದಿಸುತ್ತಿದ್ದೇನೆ. ಹೆಂಡತಿ ಮಕ್ಕಳಿದ್ದಾರೆ. ನಿರ್ದೇಶಕನಾಗಿ ಸೋತರೆ ಅದಕ್ಕೂ ಖೋತಾ. ಬೇಡ. ಅನ್ನುತ್ತಾನೆ. ಹಗೇನಾದರು ನೀ ಸೋತರೆ ನಾವು ಪುನಃ ನಿನಗೆ ನಟನಾಗಿ ಅವಕಾಶ ಕೊಡುತ್ತೇವೆ ಎಂದು ಕಂಪನಿಯವರು ಮಾತು ಕೊಡುತ್ತಾರೆ. ಆ ಮಾತನ್ನು ನಡೆಸಿಕೊಡುತ್ತಿದ್ದರೋ ಇಲ್ಲವೋ ಎಂಬ ಪರೀಕ್ಷೆಗೆ ಅವಕಾಶವೇ ಸಿಗುವುದಿಲ್ಲ. ನಿಕೃಷ್ಟ ಚಟುವಟಿಕೆ ಮತ್ತು ಕಲಸುಮೇಲೋಗರ ಎಂದು ಪರಿಗಣಿಸಲಾಗಿದ್ದ ಸಿನೆಮಾ ಮಾಧ್ಯಮದ ತಾಂತ್ರಿಕತೆಯಲ್ಲಿ ಕಲಾತ್ಮಕ ಅಭಿವ್ಯಕ್ತಿಯನ್ನ ಸಾಧಿಸಿ ರೂಪಿಸಿದವನು ಇದೇ ಗ್ರಿಫಿತ್. ಇವನನ್ನು ಚಲನಚಿತ್ರ ಮಾಧ್ಯಮದ ಪಿತಾಮಹ ಎಂದೇ ಗುರುತಿಸಲಾಗುತ್ತದೆ. ೧೯೦೮ರೊಂದ ೧೯೧೪ರವರೆಗೆ ಸಿನೆಮಾ ತಯಾರಿಕೆಯಲ್ಲಿ, ಚಿತ್ರೀಕರಣ ಮತ್ತು ಸಂಕಲನ ಘಟ್ಟಗಳಲ್ಲಿ, ಅವನು ರೂಢಿಸಿಕೊಂಡು ರೂಪಿಸಿದ ಬಹಳಷ್ಟು ನಿಯಮಗಳು ಮತ್ತು ತಾಂತ್ರಿಕತೆ ಇಂದಿನ ನಿರ್ದೇಶಕರೂ ಮೀರಲಾಗದ ಲಕ್ಷ್ಮಣ ರೇಖೆಗಳಾಗಿವೆ. ಅವನ ನಂತರದ ಎಲ್ಲ ನಿರ್ದೇಶಕರ ಹೆಗಲಮೇಲೆ ಕುಳಿತು ಅವರನ್ನೇ ನಿರ್ದೇಶಿಸುತ್ತಿರುತ್ತಾನೆ ಎಂಬ ಮಾತು ಸತ್ಯಸ್ಯ ಸತ್ಯ.

I just saw SHAURYA . It is such a wonderful film on Army, Militancy , Court trial etc. It is a brilliantly made film on insurgency, veerchakra, awards and other forms of official recognition. It is a highly recommendable film.
I personally liked and this film raises many questions related to human Rights, relationships, trial etc.. I feel this film is equally as good as ‘The Lives of Others’. Pl dont miss it. There is hardly any crowd, only two screenings at PVR. And, incidentally this film is being produced by PVR productions which has produced Tare Zameen par….
SHAURYA is an excellent tribute Indian Army and it is trying to depict reality in the Army.
Dont miss it.
-Shamantha
shamanthads@gmail.com
ಇದು ಆಶ್ಚರ್ಯ, ಆದರೂ ನಿಜ…ಈ ಬ್ಲಾಗ್ ನ ಹೆಸರು ‘ಕಳ್ಳ-ಕುಳ್ಳ ಬ್ಲಾಗ್’. ಇದು ಇಬ್ಬರು ಪತ್ರಕರ್ತರು ತಮ್ಮ ಮುಂದೆ ಎದುರಾದ ವೈಚಾರಿಕ ಹಾಗೂ ಸಂವೇದನೆಯ ಏಕಾಕಿತನವನ್ನು ತೊಡೆದುಕೊಳ್ಳಲು ಮಾಡುತ್ತಿರುವ ಪ್ರಯತ್ನ. ವಿಕಾಸ್ ನೇಗಿಲೋಣಿ ಹಾಗೂ ಚೇತನ್ ನಾಡಿಗೆರ್ ಈ ಬ್ಲಾಗ್ ನ ಕಳ್ಳ ಹಾಗೂ ಕುಳ್ಳರು. ಈ ಇಬ್ಬರಲ್ಲಿ ಯಾರು ಕಳ್ಳ ಹಾಗೂ ಕುಳ್ಳ ಎಂಬುದನ್ನು ಓದುಗರೇ ನಿರ್ಧರಿಸಿಕೊಳ್ಳಲಿ ಎಂದು ಸುಮ್ಮನಾಗಿದ್ದಾರೆ. ಬ್ಲಾಗ್ ಹೆಸರು ನೋಡಿ ಇದು ಲಘುವಾದ ಬ್ಲಾಗ್ ಎಂದುಕೊಳ್ಳಬೇಡಿ ಎಂಬ ಎಚ್ಚರಿಕೆ ಯನ್ನೂ ನೀಡಿದ್ದಾರೆ. ವಿಸಿಟ್ ಮಾಡಿ. ಒಳ್ಳೆಯ ಬರಹಗಳಿವೆ.
ಚಾಪ್ಲಿನ್‌ಗೆ ತಾನು ನಿರ್ದೇಶಕನಾಗಿ, ಕತೆಗಾರನಾಗಿ ಯಾವತ್ತಾದರೂ ಬದಲಾಗಬೇಕು ಅಂತ ಅನಿಸಿತ್ತೋ ಇಲ್ಲವೋ ಗೊತ್ತಿಲ್ಲ. ಹಾಗೇನಾದರೂ ಹಾಗೇ ಅನಿಸಿದ್ದರೆ, ಆತ ಬದಲಾಗುವುದಕ್ಕೆ ಏನೇನು ಮಾಡಿದನೋ ಅದು ಗೊತ್ತಿಲ್ಲ. ಒಂದು ಪಕ್ಷ ಅವನಿಗೆ ಬದಲಾಗಬೇಕು ಎಂದು ದಟ್ಟವಾಗಿ ಅನಿಸಿದರೆ ಮತ್ತು ಆತ ಬದಲಾದರೆ ಹೇಗೆ? ಎಂಬ ಕಲ್ಪನೆ ಬಂದಾಗ ಹೊಳೆದಿದ್ದೇ ಈ ಕತೆ. ಕತೆಯಾದ್ದರಿಂದ ಇಲ್ಲಿ ಕಲ್ಪನೆಗೆ ಹೆಚ್ಚು ಜಾಗ. ಇಲ್ಲಿ ಆತ್ಮಚರಿತ್ರೆಯ ಅಂಶಗಳಿಲ್ಲ. ಆದರೆ, ಚರಿತ್ರೆಯ ಅಂಶಗಳಂತೂ ಖಂಡಿತಾ ಇದೆ. ಕಲ್ಪನೆ, ಚರಿತ್ರೆ ಎಲ್ಲಾ ಒಟ್ಟುಗೊಡಿದಾಗ ಚಾಪ್ಲಿನ್ ಬದಲಾದ …
ಇನ್ನು ಮೂರು ಗಂಟೆ ಹೊಡೆದರೆ ಆರಾಗುತ್ತದೆ. ಅಷ್ಟಾದರೂ ಆ ರಾತ್ರಿ ಚಾಪ್ಲಿನ್ ಕಣ್ಣುಗಳಿಗೆ ನಿದ್ದೆ ಹತ್ತಿಲಿಲ್ಲ. ‘ನಾನೇನು ಮಾಡುತ್ತಿದ್ದೇನೆ?’ ಎಂಬ ಪ್ರಶ್ನೆ ಹೊಳೆದ ಈ ೧೫ ರಾತ್ರಿಗಳಲ್ಲಿ ಚಾಪ್ಲಿನ್ ಮಲಗಿದ್ದು ಸ್ವಲ್ಪ ಕಡಿಮೆಯೇ ಸರಿ. ಆದರೂ ಇಷ್ಟು ರಾತ್ರಿಗಳಲ್ಲಿ ಆಯಾಸಕ್ಕಾದರೂ ಒಂದೆರೆಡು ತಾಸು ನಿದ್ದೆ ಹೀಗೆ ಬಂದು ಹಾಗೆ ಹೋಗುತಿತ್ತು. ಆದರೆ, ಇವತ್ತು ಅದೂ ಇಲ್ಲ.
‘ನಾನೇನು ಮಾಡುತ್ತಿದ್ದೇನೋ?’, ‘ನಾನೇನು ಮಾಡಬೇಕು?’ ಅಥವಾ ‘ನಾನೇನು ಮಾಡಬಹದು?’ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಖಂಡಿತಾ ಕಷ್ಟವಲ್ಲ. ಆದರೆ, ಆ ಉತ್ತರ ಚಿತ್ರರಂಗದೆಡೆಗೆ ತನಗಿರುವ ನಂಬಿಕೆಯನ್ನೇ ತಿರುಚಿ ಹಾಕುವುದಾದರೇ ಅಂಥ ಉತ್ತರ ಬೇಕಾ? ಇದು ಚಾಪ್ಲಿನ್ ಪ್ರಶ್ನೆ. ಕಳೆದ ೧೫ ದಿನಗಳಿಂದ ಅವನು ಇದೇ ಬಗ್ಗೆ ಯೋಚಿಸುತ್ತಿದ್ದ. ಇಷ್ಟಕ್ಕೂ ಯಾರೋ ಅವನನ್ನು ಪುಸಲಾಯಿಸಿದ್ದಾಗಲೀ, ಕೆಣಕಿದ್ದಾಗಲೀ ಅಲ್ಲ. ಇದು ತನ್ನಿಂತಾನೇ ಅತ್ಯಂತ ಸಹಜವಾಗಿ ಮೂಡಿ ಬಂದ ಪ್ರಶ್ನೆ. ಇನ್ನೆಷ್ಟು ದಿನ ಇದೇ ಕಣ್ಣಾಮುಚ್ಚಾಲೆಯಾಟ? ಇನ್ನೆಷ್ಟು ದಿನ ಬಫೂನರಿ?
ಇವತ್ತು ಸಕಲ ಬಡವರ, ಧೀನರ, ಸಾಮಾನ್ಯ ಪ್ರಜೆಗಳ ಸಿಂಬಲ್ ಆಗಿ ಚಾರ್ಲಿ ಎಂಬ ಟ್ರಾಂಪ್ ರೂಪುಗೊಂಡಿದ್ದಾನೆ. ಹಾಗಾದರೆ ಚಾಪ್ಲಿನ್‌ಗೆ ಚಾರ್ಲಿ ಹೊರತಾದ ಅಸ್ತಿತ್ವವೇ ಇಲ್ಲವೇ? ಚಾಪ್ಲಿನ್‌ನನ್ನು ಒಂದೇ ಸಮನೆ ಚಾರ್ಲಿಯಾಗಿ, ಟ್ರಾಂಪ್ ಆಗಿ ನೋಡಿರುವ ಜನರಿಗೆ ಸಾಕಾಗಿಲ್ಲವೇ? ಮೂಕ ಜಗತ್ತಿನ ಪಿಸುಮಾತಾಗಿರುವ ತನಗೆ ಕೊನೆಯವರೆಗೂ ಮಾತೇ ಬರುವುದಿಲ್ಲವೇ? … ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ. ಜಗತ್ತಿನಾದ್ಯಂತ ಹೊಸ ಹೊಸ ತಂತ್ರಜ್ಞಾನವನ್ನ, ಹೊಸ ಹೊಸ ಶೈಲಿಯ ಸಿನಿಮಾಗಳನ್ನ ಜನ ನಿರ್ಮಿಸುತ್ತಿರುವಾಗ ತಾನಿನ್ನೂ ಎಷ್ಟು ದಿನ ಅದೇ ಬಫೂನರಿ ಮಾಡುತ್ತಾ ಕೂಡುವುದು? ಇಟಲಿಯಂಥ ದೇಶ ಎರಡನೆಯ ಮಹಾಯುದ್ಧದಲ್ಲಿ ಸುಸ್ತಾಗಿ ಕುಳಿತಿರುವಾಗ, ಅಲ್ಲೊಬ್ಬ ವಿಕ್ಟೋರಿಯಾ ಡಿಸಿಕ್ಕಾ ಎಂಬೋನು ‘ದಿ ಬೈಸಿಕಲ್ ಥೀಪ್’ ಎಂಬ ಚಿತ್ರ ಮಾಡುತ್ತಾನೆ. ಜಾಗತಿಕ ಸಿನಿಮಾರಂಗದಲ್ಲಿ ಮಿಂಚುತ್ತಾನೆ. ಇನ್ನೆಲ್ಲೋ ಜಪಾನ್‌ನಲ್ಲಿ ಅಕಿರಾ ಕುರೋಸಾವಾ ಅಂತೆ. ಅವನು ‘ರೋಶೋಮನ್’ ತರಹದ ವಿಭಿನ್ನ ನೆಲೆಯ ಸಿನಿಮಾ ಮಾಡುತ್ತಾನಂತೆ. ಅಷ್ಟೇಕೆ ಹಾಲಿವುಡ್‌ನಲ್ಲೇ ಆರ್ಸನ್ ವೆಲ್ಲೀಸ್. ಆಲ್ಫ್ರೆಡ್ ಹಿಚ್‌ಕಾಕ್, ಡೇವಿಡ್ ಲೀನ್, ವಿಲಿಯಂ ವೈಲರ್, ಸೆಸಿಲ್ ಬಿ. ಡೆಮಿಲ್ ಮುಂತಾದವರು ಒಂದೇ ಸಮನೆ ಬೇರೆ ಬೇರೆ ತರಹದ ಚಿತ್ರಗಳನ್ನು ಮಾಡುತ್ತಿದ್ದಾರೆ.
ಆದರೆ, ತಾನು? ಅದೇ ಟ್ರಾಂಪ್, ಅದೇ ದುಃಖ … ‘ದಿ ಗ್ರೇಟ್ ಡಿಕ್ಟೇಟರ್’ ತನ್ನ ಕಡೆಯ ಅತ್ಯುತ್ತಮ ಚಿತ್ರವಾಗಿ ಬಿಡುತ್ತದಾ? ಇಷ್ಟಕ್ಕೇ ತನ್ನ ತಲೆ ಖಾಲಿಯಾಯಿತಾ? ಸಿಗರೇಟ್ ಬಟ್ ಕೈಸುಡುವವರೆಗೂ ಪ್ರಶ್ನೆ ಮೇಲೆ ಪ್ರಶ್ನೆ.ಆ ಬಟ್ ತನ್ನ ಕೈಯ್ಯಷ್ಟೇ ಸುಟ್ಟಿದ್ದಲ್ಲ. ತನ್ನ ಯೋಚನೆಯನ್ನೂ ಸುಟ್ಟು ಹಾಕಿತು. ಇಲ್ಲ ನನ್ನ ತಲೆ ಮಾತ್ರ ಖಾಲಿಯಾಗಿಲ್ಲ. ಖಚಿತಪಡಿಸಿಕೊಂಡ ಚಾಪ್ಲಿನ್. ತನಗೆ ವಯಸ್ಸಾಗಿರಬಹುದು, ಹಿಂದಿನ ತೀಕ್ಷ್ಣತೆ ಸ್ವಲ್ಪ ಕಡಿಮೆಯಾಗಿರಬಹುದು. ಆದರೆ, ಚಾಪ್ಲಿನ್ ಈಸ್ ಚಾಪ್ಲಿನ್. ಇಷ್ಟು ದಿನ ಮೂಕಿ ಬಿಟ್ಟು ಟಾಕಿ ಚಿತ್ರ ಮಾಡು ಅಂತ ನನಗೆ ಬುದ್ಧಿ ಹೇಳಿದವರೆಷ್ಟೋ ಮಂದಿ. ಮೌನಕ್ಕಿರುವ ತಾಖತ್ತು ನಾಲಗೆಗಿಲ್ಲ ಎಂದು ನಾನೇ ಸುಮ್ಮನಿದ್ದೆ. ಇಲ್ಲ ಹಾಗೆ ಯೋಚಿಸಿದವನು ಹೀಗೂ ಯೋಚಿಸುವುದಕ್ಕೂ ಸಾಧ್ಯ. ಮಾತು, ಶಬ್ಧಗಳನ್ನಿಟ್ಟುಕೊಂಡೇ ಒಂದು ಚಿತ್ರ ಮಾಡುತ್ತೇನೆ. ಚಾಪ್ಲಿನ್ ಚಾರ್ಲಿಗಷ್ಟೇ ಸೀಮಿತವಲ್ಲ ಎಂದು ತೋರಿಸುತ್ತೇನೆ. (more…)
April 14, 2008
Posted by magiccaarpet in Uncategorized.
ಈ ಅಂತರ್ಜಾಲ ನಮ್ಮೆಲ್ಲರ
ಹೃದಯದಂತರ್ಜಾಲವನ್ನೂ ಹೆಚ್ಚೆಚ್ಚು ಬೆಸೆಯುತ್ತಿರುವುದು ಖುಶಿಯ ವಿಚಾರವೇ.
ಸಿನಿಮಾಕ್ಕಾಗಿಯೇ ಒಂದು ಬ್ಲಾಗ್ ಹುಟ್ಟುಹಾಕಿದ್ದು ಉಪಯೋಗಿಯಾಗಿದೆ.
-ಪ್ರೀತಿಯಿಂದ
ಸುಧನ್ವಾ.
***
i just surfed it. quite interesting
-marakini ranganartha
Posted by magiccaarpet in Uncategorized.