ತಾನು ಇನ್ನೊಬ್ಬ ಶೇಕ್ಸಪಿಯರ್‍..

ಮಾಯಾ ಬಜಾರ್ ಆರಂಭ

ನಾವು ಹೇಳಲಿಲ್ಲವಾ. ಪರಮೇಶ್ ಒಳ್ಳೆಯ ಮನುಷ್ಯ ಅಂತ. ಈಗ ಇನ್ನೊದು ಪ್ರೂಫ್ ಇಲ್ಲಿದೆ. ಪರಮೇಶ್ ಹೇಳಿದ ಸಮಯಕ್ಕೆ ಸರಿಯಾಗಿ ತಮ್ಮ ಕಾಲಂ ಬರೆದುಕೊಟ್ಟಿದ್ದಾರೆ. ಪರಮೇಶ್ ಥ್ಯಾಂಕ್ಸ್ ..

-ಪರಮೇಶ್ವರ್ ಗುರುಸ್ವಾಮಿ

ತಾನು ಇನ್ನೊಬ್ಬ ಶೇಕ್ಸಪಿಯರ್‍ ಆಗಬೇಕು ಅನ್ನೋ ಮಹದಾಕಾಂಕ್ಷೆ ಅವನದು. ತಾನು ಮಹಾನ್ ಪ್ರತಿಭಾವಂತ ಅನ್ನೋ ಆತ್ಮ ವಿಶ್ವಾಸವೂ ಅವನದೇ. ರಂಗನಟನಾಗಿ ಒಂದಿಷ್ಟು ಅವಕಾಶಗಳನ್ನ ಗಿಟ್ಟಿಸಿಕೊಂಡಿದ್ದ. ಒಂದಿಷ್ಟು ಪದ್ಯ, ಕಥೆ ಅದು ಇದು ಅಂತ ಪ್ರಕಟವಾಗಿದ್ವು. ಆದರೆ ನಾಟಕಕಾರನಾಗಿ ಶತ ಪ್ರಯತ್ನ ಪಟ್ಟರೂ ಆ ಪಟ್ಟ ಅವನಿಗೆ ಸಿಗಲಿಲ್ಲ. ಬದುಕಿನಲ್ಲಿ ಬಹಳ ಬವಣೆ ಪಟ್ಟಿದ್ದ. ಅವನ ಹೆಸರು ಡೇವಿಡ್ ವಾರ್ಕ್ ಗ್ರಿಫಿತ್.  ಸಿನೆಮಾವನ್ನ ಎಲ್ಲ ಕಲೆಗಳ ಕಲಸು ಮೇಲೋಗರವಾದ ಒಂದು ನಿಕೃಷ್ಟ ಚಟುವಟಿಕೆ ಅಂತ ಎಲ್ಲರೂ ಭಾವಿಸಿದ್ದ ಕಾಲ. ಗ್ರಿಫಿತ್ತನ ಅಭಿಪ್ರಾಯವೂ ಅದೇ ಆಗಿತ್ತು.  ಆಗ ಸಿನೆಮಾಕ್ಕೆ ಹದಿಮೂರರ ಹರೆಯ. ಯಾರೇನೇ ಕರೆದರೂ ಜನಪ್ರಿಯತೆಯಲ್ಲಿ, ಹಣಗಳಿಕೆಯಲ್ಲಿ ಧಾಪುಗಾಲು ಇಡುತ್ತಿತ್ತು. ಎಡಿಸನ್ನನ ಕಂಪನಿಯ ನಿರ್ದೇಶಕ ಎಡ್ವಿನ್ ಪೋರ್ಟರ್‍, “ದ ಗ್ರೇಟ್ ಟ್ರೈನ್ ರಾಬರಿ” ಎಂಬ ಚಿತ್ರ ಮಾಡಿ ಜಗತ್ ಪ್ರಸಿದ್ಧನಾಗಿದ್ದ.  ಆ ಚಿತ್ರ, ಸಿನೆಮಾ ಜಗತ್ತಿನ ಮೊಟ್ಟ ಮೊದಲ ಬ್ಲಾಕ್ ಬಸ್ಟರ್‍. ಈಗಲೂ ಪೋರ್ಟರ್‍ ನನ್ನು ಸಿನೆಮಾ ಮಾಧ್ಯಮದ ಮೊದಲ ಕಥಾ ನಿರೂಪಕ ಎಂದೇ ಗುರುತಿಸುವುದು.

ಸಿನೆಮಾಗಿಂತ ನಾಟಕವೇ ಶ್ರೇಷ್ಠವಾದ ಪ್ರಕಾರ ಎಂದು ಎಸ್ಟೇ ಬಿಂಕ ಮಾಡಿದರೂ ಹೊಟ್ಟೆ ಪಾಡು ಕೇಳಬೇಕಲ್ಲ. ಅಂತೂ ಒಳ್ಳೆಯ ಕಥೆಯನ್ನಾದರೂ ಸಿನೆಮಾಕ್ಕೆ ಕೊಟ್ಟು ಸ್ವಲ್ಪ ಖರ್ಚಿಗೆ ಕಾಸು ಮಾಡಿಕೊಳ್ಳೋಣ ಅಂದುಕೊಂಡು ಗ್ರಿಫಿತ್ ಪೋರ್ಟರ್‍ ನನ್ನು ಸಂಪರ್ಕಿಸುತ್ತಾನೆ. ತಾನೇನು ಸಿನೆಮಾ ತಯಾರಿಕೆಯ ಕೀಳು ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿಲ್ಲವಲ್ಲ. ಬರವಣಿಗೆಗೆ ಮೇಲು ಕೀಳು ಎಂಬ ಸೂತಕ ಇಲ್ಲ ಅಂದುಕೊಂಡವನು “ಟೋಸ್ಕ” ಅನ್ನುವ ತನ್ನ ಚಿತ್ರಕಥೆಯನ್ನ ಮಾರಲು ಪ್ರಯತ್ನಿಸುತ್ತಾನೆ. ಗ್ರಿಫಿತ್ ಕೊಟ್ಟ ಹಸ್ತಪ್ರತಿಯನ್ನು ಬದಿಗಿಟ್ಟ ಪೋರ್ಟರ್‍ ಅದಲ್ಲಿರಲಿ ನನ್ನ ಚಿತ್ರದಲ್ಲಿ ನಟಿಸುತ್ತೀಯಾ. ಬಾ ಅವಕಾಶ ಕೊಡುತ್ತೇನೆ ಅನ್ನುತ್ತಾನೆ. ದಿನಕ್ಕೆ ೫ ಡಾಲರ್‍ ಕೂಲಿ. ಆಗ ತಾನೆ ಮದುವೆಯಾಗಿದ್ದ ಗ್ರಿಫಿತ್ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ನಟನಾಗುತ್ತಾನೆ. ತನ್ನ ಹೆಸರು, ಡೇವಿಡ್ ವಾರ್ಕ್ ಗ್ರಿಫಿತ್ ಅನ್ನು ತಾನು ಮುಂದೆ ಅಭಿನವ ಶೇಕ್ಸ್ ಪಿ‍ಯರ್‍ ಆದಾಗ ಬೇಕಾಗುತ್ತದೆ, ಈ ಕೀಳು ಸಿನೆಮಾಕ್ಕೆ ಬೇಡ ಅಂದುಕೊಂಡು ಲಾರೆನ್ಸ್ ಗ್ರಿಫಿತ್ ಎಂಬ ಹೆಸರಿಟ್ಟುಕೊಂಡು ನಟನಾಗುತ್ತಾನೆ. ಅದೇ ವರ್ಷ ಬಯೋಗ್ರಾಫ್ ಎಂಬ ಕಂಪನಿಗೆ ವಲಸೆ ಹೋಗುತ್ತಾನೆ.

ಒಂದು ವರ್ಷದಲ್ಲಿ ಸಿನೆಮಾದ ಜನಪ್ರಿಯತೆ ಎಷ್ಟು ಬೆಳೆಯುತ್ತದೆಂದರೆ. ನಿರ್ಮಾಣ ಸಂಸ್ಥೆಗಳು ನಾಕಾಣೆ ಪ್ರಭುಗಳನ್ನು ತೃಪ್ತಿ ಪಡಿಸುವುದಕ್ಕೆ ಸಾಕು ಬೇಕಾಗುತ್ತದೆ. ಬಯೋಗ್ರಾಫ್ ಕಂಪನಿಯವರು ಗ್ರಿಫಿತ್ ನನ್ನು ನಿರ್ದೇಶಕನಾಗು ಎಂದು ಕೇಳಿಕೊಳ್ಳುತ್ತಾರೆ. ನಟನಾಗಿ ಏನೋ ಒಂದಿಷ್ಟು ಸಂಪಾದಿಸುತ್ತಿದ್ದೇನೆ. ಹೆಂಡತಿ ಮಕ್ಕಳಿದ್ದಾರೆ. ನಿರ್ದೇಶಕನಾಗಿ ಸೋತರೆ ಅದಕ್ಕೂ ಖೋತಾ. ಬೇಡ. ಅನ್ನುತ್ತಾನೆ. ಹಗೇನಾದರು ನೀ ಸೋತರೆ ನಾವು ಪುನಃ ನಿನಗೆ ನಟನಾಗಿ ಅವಕಾಶ ಕೊಡುತ್ತೇವೆ ಎಂದು ಕಂಪನಿಯವರು ಮಾತು ಕೊಡುತ್ತಾರೆ. ಆ ಮಾತನ್ನು ನಡೆಸಿಕೊಡುತ್ತಿದ್ದರೋ ಇಲ್ಲವೋ ಎಂಬ ಪರೀಕ್ಷೆಗೆ ಅವಕಾಶವೇ ಸಿಗುವುದಿಲ್ಲ. ನಿಕೃಷ್ಟ ಚಟುವಟಿಕೆ ಮತ್ತು ಕಲಸುಮೇಲೋಗರ ಎಂದು ಪರಿಗಣಿಸಲಾಗಿದ್ದ ಸಿನೆಮಾ ಮಾಧ್ಯಮದ ತಾಂತ್ರಿಕತೆಯಲ್ಲಿ ಕಲಾತ್ಮಕ ಅಭಿವ್ಯಕ್ತಿಯನ್ನ ಸಾಧಿಸಿ ರೂಪಿಸಿದವನು ಇದೇ ಗ್ರಿಫಿತ್. ಇವನನ್ನು ಚಲನಚಿತ್ರ ಮಾಧ್ಯಮದ ಪಿತಾಮಹ ಎಂದೇ ಗುರುತಿಸಲಾಗುತ್ತದೆ. ೧೯೦೮ರೊಂದ ೧೯೧೪ರವರೆಗೆ ಸಿನೆಮಾ ತಯಾರಿಕೆಯಲ್ಲಿ, ಚಿತ್ರೀಕರಣ ಮತ್ತು ಸಂಕಲನ ಘಟ್ಟಗಳಲ್ಲಿ, ಅವನು ರೂಢಿಸಿಕೊಂಡು ರೂಪಿಸಿದ ಬಹಳಷ್ಟು ನಿಯಮಗಳು ಮತ್ತು ತಾಂತ್ರಿಕತೆ ಇಂದಿನ ನಿರ್ದೇಶಕರೂ ಮೀರಲಾಗದ ಲಕ್ಷ್ಮಣ ರೇಖೆಗಳಾಗಿವೆ. ಅವನ ನಂತರದ ಎಲ್ಲ ನಿರ್ದೇಶಕರ ಹೆಗಲಮೇಲೆ ಕುಳಿತು ಅವರನ್ನೇ ನಿರ್ದೇಶಿಸುತ್ತಿರುತ್ತಾನೆ ಎಂಬ ಮಾತು ಸತ್ಯಸ್ಯ ಸತ್ಯ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: