2001: A space Odyssey

-ಅಲೆಮಾರಿ

ಆತ..
ಹುಟ್ಟಿದ್ದು ಇಂಗ್ಲೆಂಡಿನಲ್ಲಿ. ಚಿಕ್ಕಂದಿನಲ್ಲೇ ಕ್ಲಾರ್ಕ್‌ಗೆ ವಿಜ್ಞಾನದಲ್ಲಿ ಅಪಾರ ಆಸಕ್ತಿ. ಅಮೆರಿಕದ ಸೈಂಟಿಫಿಕ್ ಫಿಕ್ಷನ್‌ಗಳನ್ನು ಓದುತ್ತಾ ಬೆಳೆದರು. ಹೆಚ್ಚಿನ ಓದು ಸಾಧ್ಯವಾಗದೇ ಎರಡನೇ ಮಹಾಯುದ್ಧ ಕಾಲದಲ್ಲಿ ರಾಯಲ್ ಏರ್‌ಫೋರ್ಸ್‌ನಲ್ಲಿ ರಡಾರ್ ತಜ್ಞನಾಗಿ ಸೇರಿಕೊಂಡರು. ಪೈಲಟ್ ಆಫೀಸರ್, ಫ್ಲೈಯಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿದರು. ಯುದ್ಧ ಕಾಲದ ಹಾಗೂ ಸೇನೆಯ ಈ ಅನುಭವಗಳನ್ನಿಟ್ಟುಕೊಂಡೇ ಕ್ಲಾರ್ಕ್ ಕಾದಂಬರಿ ಬರೆದರು. ಅದರ ಹೆಸರು ಗ್ಲೈಡ್ ಪಾತ್. ಹೀಗೆ ಬರೆಯಲಾರಂಭಿಸಿದ ಕ್ಲಾರ್ಕ್ ವಿಜ್ಞಾನದ ಅಚ್ಚರಿಯ ಜಗತ್ತನ್ನು ತಮ್ಮ ಕಾದಂಬರಿ ಹಾಗೂ ಲೇಖನಗಳ ಮೂಲಕ ಓದುಗರಿಗೆ ತೆರೆದಿಟ್ಟರು.
೨೦೦೧ ಸ್ಪೇಸ್ ಓಡಿಸ್ಸಿ
ಕ್ಲಾರ್ಕ್ ಬದುಕಿನಲ್ಲೇ ಅಪರೂಪ ಘಳಿಗೆ ತಮ್ಮದೇ ವೈಜ್ಞಾನಿಕ ಕಥೆ ‘ದಿ ಸೆಂಟಿನಲ್’ ಚಿತ್ರವಾಗಿದ್ದು. ತಮಾಷೆಯಂದರೆ ೧೯೪೮ರಲ್ಲಿ ಬಿಬಿಸಿ ನಡೆಸಿದ ಸ್ಪರ್ಧೆಗಾಗಿ ಕ್ಲಾರ್ಕ್ ಈ ಕಥೆ ಬರೆದಿದ್ದರು. ಆದರೆ ಈ ಕಥೆಯನ್ನು ಬಿಬಿಸಿ ತಿರಸ್ಕರಿಸಿತು. ಎರಡು ದಶಕಗಳ ನಂತರ ಅದೇ ಕಥೆ ವಿಶ್ವದ ಜನಪ್ರಿಯ ಚಿತ್ರವಾಯಿತು. ಅದರ ಹೆಸರು ‘೨೦೦೧ ಎ ಸ್ಪೇಸ್ ಒಡಿಸ್ಸಿ’. ಚಿತ್ರರಂಗದ ಇತಿಹಾಸದಲ್ಲೇ ತಾಂತ್ರಿಕ ಕೌಶಲದ ಹಾಗೂ ವಿಜ್ಞಾನದ ವಸ್ತುವುಳ್ಳ ಅತ್ಯಂತ ಭಿನ್ನ ಹಾಗೂ ಅಪರೂಪದ ಚಿತ್ರ ಇದಾಗಿ ಮೈಲುಗಲ್ಲು ಸ್ಥಾಪಿಸಿತು. ತಮ್ಮ ಕಥೆಯನ್ನು ಚಿತ್ರಕತೆಯಾಗಿ ಬರೆದು ಕ್ಯೂಬ್ರಿಕ್ ಜೊತೆಗೆ ಕ್ಲಾರ್ಕ್ ಚಿತ್ರ ನಿರ್ಮಿಸಿದರು. ೧೯೬೮ರ ಹೊತ್ತಿನಲ್ಲೇ ಬಾಹ್ಯಾಕಾಶದ ಕಥೆಯುಳ್ಳ ಚಿತ್ರ ನೋಡಿ ಜನ ಬೆರಗಾದರು. ವಿಜ್ಞಾನಿಗಳು ಕಣ್ಣರಳಿಸಿದರು.
ಮತ್ತೊಂದು ಮೈಲಿಗಲ್ಲು ಕ್ಲಾರ್ಕ್ ಬರೆದ ಕಥೆಯೊಂದು ಚಿತ್ರವಾಗಿ ಮೆಚ್ಚುಗೆಗೆ ಪಾತ್ರವಾಯಿತು. ಹಾಗೆಯೇ ಕ್ಲಾರ್ಕ್ ಕಂಡ ಕನಸೊಂದು ನಿಜವಾಯಿತು. ಭೂಸ್ಥಿರ ಉಪಗ್ರಹದ ನೆರವಿನಿಂದ ಸಂಪರ್ಕ ಸಾಧಿಸಬಹುದು ಎಂದು ಕ್ಲಾರ್ಕ್ ವೈರ್‌ಲೆಸ್ ವರ್ಲ್ಡ್ ಪತ್ರಿಕೆಗೆ ೧೯೪೫ರ ಅಕ್ಟೋಬರ್‌ನಲ್ಲಿ ಲೇಖನ ಬರೆದರು. ಅವರು ಇದನ್ನು ಬರೆದಾಗ ತಮ್ಮ ಈ ಕಲ್ಪನೆ ಕೆಲವೇ ದಶಕಗಳಲ್ಲಿ ನನಸಾಗುತ್ತದೆ ಎಂದುಕೊಂಡಿದ್ದರು. ಆದರೆ ಕೇವಲ ೨೫ ವರ್ಷಗಳಲ್ಲಿ ಇದು ಸಾಕಾರಗೊಂಡಿತು! ಸಂಪರ್ಕ ಕ್ಷೇತ್ರದ ಕ್ರಾಂತಿಗೆ ನಾಂದಿಯಾಯಿತು. ಆದರೂ ಈ ಕ್ಲಾರ್ಕ್ ಕಲ್ಪನೆಯೇ ಈ ಬೆಳವಣಿಗೆಗಳಿಗೆ ಕಾರಣ ಎಂಬುದು ಸ್ಪಷ್ಟವಿಲ್ಲ. ಆದರೆ ಭೂಸ್ಥಿರ ಉಪಗ್ರಹಗಳಿಂದ ಸಂಪರ್ಕ ಸಾಧಿಸುವ ಕಲ್ಪನೆ ಕ್ಲಾರ್ಕ್‌ರದ್ದೇ ಎನ್ನುವುದು ಹಲವರ ನಂಬಿಕೆ. ಆರ್ಥರ್ ಕ್ಲಾರ್ಕ್ ಬರೆದ ಎಲ್ಲ ವೈಜ್ಞಾನಿಕ ಕೃತಿಗಳು ವಿಜ್ಞಾನದ ಆತ್ಮವಿಶ್ವಾಸ ಮೂಡಿಸುವಂಥವು. ಸೌರವ್ಯೂಹವನ್ನು ಜಾಲಾಡುವ ಮನುಕುಲವನ್ನು ಸಶಕ್ತಗೊಳಿಸುವ ಒಂದು ಬಲ ವಿಜ್ಞಾನವೆಂದೇ ಪ್ರತಿಪಾದಿಸಿದ್ದರು ಕ್ಲಾರ್ಕ್.
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: