ನಾದ ಮಯ ಈ ಲೋಕವೆಲ್ಲಾ…

ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಅಡಕೆಯ ತವರೂರಾದ ಶಿರಸಿಯಲ್ಲಿ. ಸಾಹಿತ್ಯ ಮತ್ತು ಶಾಸ್ತ್ರೀಯ ಸಂಗೀತದ ಮೇಲೆ ತುಂಬಾ ಆಸಕ್ತಿ ಎನ್ನುವ ಮಧು ಅಮೆರಿಕಾದ ಆಸ್ಟಿನ್ ನಲ್ಲಿ ಸಾಫ್ಟ್ ವೇರ್ ತಂತ್ರಜ್ಞ. ‘ಮಧುವನ’ ಇವರ ಬ್ಲಾಗ್. ಸರಳವಾಗಿ ಮನಮುಟ್ಟುವಂತೆ ಬರೆಯುವುದು ಇವರ ಹೆಗ್ಗಳಿಕೆ. ಲಲಿತ ಪ್ರಬಂಧಗಳಂತೆ ಓದಿಸಿಕೊಂಡು ಹೋಗುವ ಶೈಲಿ ಒಂದೇ ಬಾರಿಗೆ ಇಷ್ಟವಾಗಿಬಿದುತ್ತದೆ. ಹಾಡಿನ ಬೆನ್ನತ್ತುವುದು ಇವರ ಹವ್ಯಾಸ. ಹಾಗೆ ಬೆನ್ನು ಹತ್ತಿದ ಒಂದು ತುಣುಕು ಇಲ್ಲಿದೆ.

ಎಲ್ಲೆಲ್ಲೂ ಸಂಗೀತವೇ…

 

ಸಿನೆಮಾ ಗೀತೆಗಳಲ್ಲಿ ಶುದ್ಧ ಶಾಸ್ತ್ರೀಯ ಸಂಗೀತದ ಛಾಯೆಯಿರುವ ಗೀತೆಗಳು ಬಹಳೇ ಬಹಳ ಕಮ್ಮಿಯಿವೆ ಎಂಬುದು, ನನ್ನಂತೆ ಇನ್ನೂ ಹಲವರ ಕೊರಗು. ಆದರೂ ಅಲ್ಲಲ್ಲಿ ಒಂದೆರಡು ಅತ್ಯುತ್ತಮ ರಚನೆಗಳು ಮನಸೂರೆಗೊಳ್ಳುತ್ತವೆ. ನನಗೆ ಅತ್ಯಂತ ಇಷ್ಟವಾದ ಮೂರು ಉತ್ತಮ ಹಾಡುಗಳನ್ನು ದಕ್ಷಿಣ ಭಾರತ ಸಿನೆಮಾಗಳಿಂದ ಆಯ್ದು ಇಲ್ಲಿ ಹಾಕಿದ್ದೇನೆ. ಬಿಡುವಿನ ಸಮಯದಲ್ಲಿ ನೀವೂ ಕೇಳಿ ಆನಂದಿಸಿ.

ಮೊದಲನೆಯದು, ಡಾ.ರಾಜ್ ಕುಮಾರ್ ನಟಿಸಿದ ಜೀವನ ಚೈತ್ರ ಚಿತ್ರದ “ನಾದ ಮಯ ಈ ಲೋಕವೆಲ್ಲಾ’ ಎಂಬ ಹಾಡು. ಈ ಹಾಡನ್ನು ನೀವೆಲ್ಲರೂ ಆಗಲೇ ಕೇಳಿರುತ್ತೀರಿ. ಈ ಹಾಡಿಗೆ ೧೯೯೩ ರಲ್ಲಿ ಉತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಇನ್ನೂ ಗಾಯನ ಮತ್ತು ಅಣ್ಣಾವ್ರ ನಟನೆ ಬಗ್ಗೆ ನನಗೇನೂ ಹೇಳಲು ಉಳಿದಿಲ್ಲ. ಹಾಡು ಕೇಳಿ ಮುಗಿಯುತ್ತಿದ್ದಂತೆಯೇ ಮಂತ್ರಮುಗ್ಧವಾಗಿ ಸರಸ್ವತಿಯ ಪರವಶವಾಗುವುದರಲ್ಲಿ ಸಂಶಯವೇ ಇಲ್ಲ. ವಿಶೇಷವೆಂದರೆ ಈ ಹಾಡು ಅತ್ಯಂತ ಕ್ಲಿಷ್ಟವಾದ ರಾಗದಲ್ಲಿ (ತೋಡಿ) ರಚನೆಯಾಗಿದ್ದುದರಿಂದ ಹಾಡುವುದು ಅತ್ಯಂತ ಕಠಿಣವೆಂದು ಬಲ್ಲಿದರು ಹೇಳಿದ್ದನ್ನು ಕೇಳಿದ್ದೇನೆ. ಆದರೆ ಅಣ್ಣಾವ್ರ ನಾಲಿಗೆಯಲ್ಲಿ ಸಾಕ್ಷಾತ್ ಸರಸ್ವತಿಯೇ ನಲಿಯುತ್ತಿದೆ ಎಂಬಷ್ಟು ಸೊಗಸಾಗಿದೆ ಮೂಡಿ ಬಂದಿದೆ.

ಎರಡನೆಯದು ವಾಣಿ ಜಯರಾಮ್ ಹಾಡಿದ “ಆನತಿ ನೀಯರಾ” ಎಂಬ ಹಾಡು. ತೆಲುಗಿನ “ಸ್ವಾತಿ ಕಿರಣಮ್” ಚಿತ್ರದ ಈ ಗೀತೆಗೆ ೧೯೯೨ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿದೆ. “ಕಲಾ ತಪಸ್ವಿ” ಎಂದೇ ಖ್ಯಾತರಾದ ಕೆ.ವಿಶ್ವನಾಥ್ ಅವರು ಇಂಥ ಹಲವಾರು ಸದಭಿರುಚಿಯ ಚಿತ್ರಗಳನ್ನು (ಶಂಕರಾಭರಣಂ, ಸಾಗರ ಸಮ್ಮುಖಂ..) ತೆಲುಗಿನಲ್ಲಿ ನೀಡುತ್ತಲೇ ಬಂದಿದ್ದಾರೆ. ವಾಣಿ ಜಯರಾಂ ಅವರು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಹಲವಾರು ಗೀತೆಗಳನ್ನು ಹಾಡಿದ್ದಾರೆ. ಕನ್ನಡದಲ್ಲೂ ಹಲವಾರು ಶಾಸ್ತ್ರೀಯ ಹಿನ್ನೆಲೆಯ ಹಾಡುಗಳಿಗೆ ಅವರು ಧ್ವನಿ ಒದಗಿಸಿದ್ದಾರೆ. ಈ ಹಾಡಲ್ಲಿ ನಟಿಸಿದವರು,ಕನ್ನಡದವರೇ ಆದ ಮಾ.ಮಂಜುನಾಥ್ ಅವರು. ಹಾಡುತ್ತಿರುವಾಗ ಅವರ ತುಟಿ ಚಲನೆ, ಹಾವಭಾವ, ಗತ್ತು ಎಲ್ಲವನ್ನೂ ಒಮ್ಮೆ ಗಮನಿಸಿ. ವಾಣಿ ಜಯರಾಂ ಅವರ ಕಂಠಕ್ಕೆ ಅತ್ಯುತ್ತಮವಾದ ನ್ಯಾಯವನ್ನು ಅವರು ಹಾಡಿನಲ್ಲಿ ಸಲ್ಲಿಸಿದ್ದಾರೆ.ಈ ಚಿತ್ರವೆಲ್ಲಾದರೂ ಸಿಕ್ಕರೆ ತಪ್ಪದೇ ನೋಡಿ. ಚಿತ್ರದ ಎಲ್ಲಾ ಹಾಡುಗಳು ಅದ್ಭುತವಾಗಿವೆ. ಚಿತ್ರದ ಸಂಗೀತ ನಿರ್ದೇಶಕರು ಕೆ.ವಿ.ಮಹಾದೇವನ್.

ಮೂರನೆಯದು, ಮಲಯಾಳಮ್ಮಿನ “ಹಿಸ್ ಹೈನೆಸ್ ಅಬ್ದುಲ್ಲಾ” ಚಿತ್ರದ “ನಾದರೂಪಿಣೀ’ ಎಂಬ ಹಾಡು. ಹಾಡಿದವರು ಎಂ.ಜಿ.ಶ್ರೀಕುಮಾರ್. ಈ ಹಾಡಿಗೆ ೧೯೯೧ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ವೀಡಿಯೋದ ಗುಣಮಟ್ಟ ಅಷ್ಟೊಂದೇನೂ ಚೆನ್ನಾಗಿಲ್ಲ. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ. ಆದರೆ ಹಾಡು ಮಾತ್ರ ಸೂಪರ್.ಸಂಗೀತ ನೀಡಿದವರು ರವೀಂದ್ರನ್ ಮಾಸ್ಟರ್. ಈ ಚಿತ್ರದ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿವೆ.

ಈ ಮೂರು ಹಾಡುಗಳು ೧೯೯೦-೧೯೯೩ ರ ಮಧ್ಯೆ ಬಿಡುಗಡೆಯಾಗಿದ್ದು ಒಂದು ವಿಶೇಷ. ಮೂರೂ ಹಾಡುಗಳ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಬಂದಿದೆ. ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಸಾಹಿತ್ಯ ಅರ್ಥವಾಗದಿದ್ದರೂ ರಸಾಸ್ವಾದನೆಗೆ ಕಷ್ಟವಾಗಲಾಗದು. ಹಾಡುಗಳು ನಿಮಗೂ ಇಷ್ಟವಾದರೆ ನನಗೆ ಸಂತೋಷ!

Advertisements

One response to this post.

  1. ನಮಸ್ಕಾರ.
    ನನ್ನ ಪೋಸ್ಟ್ ಇಲ್ಲಿ ಹಾಕಿದ್ದು ನೋಡಿ ತುಂಬಾ ಸಂತೋಷವಾಯ್ತು. ಧನ್ಯವಾದಗಳು.
    ಮಾಜಿಕ್ ಕಾರ್ಪೆಟಿನಲ್ಲಿ ಬಹಳ ವೈವಿಧ್ಯಮಯ ಪೋಸ್ಟುಗಳನ್ನು ಹಾಕಿದ್ದೀರಿ. ನಿಮ್ಮ ಒಳ್ಳೆಯ ಕೆಲಸವನ್ನು ಹೀಗೆ ಮುಂದುವರಿಸಿ.
    ~ಮಧು

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: