ಚಿಲ್ಡ್ರನ್ ಆಫ್ ಹೆವನ್

ಒಂದು ಜೊತೆ ಶೂ ಮತ್ತು ಸ್ವರ್ಗದ ಮಕ್ಕಳು

(ಚಿಲ್ಡ್ರನ್ ಆಫ್ ಹೆವನ್ ಚಿತ್ರದ ಸ್ಟಿಲ್ ನೋಡಿ ಕಾರ್ತಿಕ ಮತ್ತು ಸುಪ್ರೀತ್ ಕಮೆಂಟ್ ಬರೆದಿದ್ದರು. ಸುಪ್ರೀತ್ ಈ ಚಿತ್ರದ ಬಗ್ಗೆ ಸುದೀರ್ಘವಾದ ಒಂದು ಲೇಖನವನ್ನು ಬರೆದಿದ್ದಾರೆ. ಅವರಿಬ್ಬರಿಗೂ ಥ್ಯಾಂಕ್ಸ್. )

-ಅಲೆಮಾರಿ

 

ಶಾಲೆ ಬೆಲ್ ಹೊಡೆಯುತ್ತಿದ್ದಂತೆ ಹುಡುಗಿ ಓಡೋಡಿ ಬರುತ್ತಾಳೆ. ಅವಳಿಗಾಗಿ ಕಾದು ನಿಂತಿದ್ದ ಹುಡುಗ ತನ್ನ ಕಾಲಿನಲ್ಲಿದ್ದ ಚಪ್ಪಲಿ ಕಿತ್ತೆಸೆದು ಅವಳು ಬಿಚ್ಚಿ ಕೊಟ್ಟು ಶೂ ತೊಟ್ಟು ಓಡುತ್ತಾನೆ.ಶಾಲೆ ತಲುಪುವ ಹೊತ್ತಿಗೆ ತಡವಾಗಿರುತ್ತದೆ. ಪ್ರಾರ್ಥನೆ ಆಗಿ ಸಹಪಾಠಿಗಳೆಲ್ಲಾ ತರಗತಿ ಹೊಕ್ಕಿರುತ್ತಾರೆ. ಅವನೂ ಹೋಗುತ್ತಾನೆ.ಇರಾನಿನ ಚಿತ್ರವೊಂದರ ದೃಶ್ಯವಿದು.

 

ಮಾಜಿದ್ ಮಜಿದಿ ಎಂಬಾತ ನಿರ್ದೇಶಿಸಿದ ಈ ಚಿತ್ರದ ಹೆಸರು ಚಿಲ್ಡ್ರನ್ ಆಫ್ ಹೆವನ್.ಸುಮಾರು ಒಂದೂವರೆ ತಾಸಿನ ಈ ಚಿತ್ರ ನಿಮ್ಮನ್ನು ಒಂದರೆ ಕ್ಷಣ ಕಣ್ಣವೆ ಆಚೀಚೆ ಮಾಡದಂತೆ ನೋಡಿಸಿಕೊಳ್ಳುತ್ತದೆ ಎಂದು ಮೊದಲ ಮಾತಿನಲ್ಲಿ ಹೇಳಿಬಿಡಬಹುದು. ನವೀರಾದ ಸಂಗೀತ, ಬೆರಳೆಣಿಕೆಯ ಪಾತ್ರ, ನಮ್ಮದು ಎನಿಸುವಂಥ ದೃಶ್ಯಗಳು, ಜತೆಗೆ ಆಪ್ತವಾದ ಕಥೆ ಮತ್ತು ಅದರ ನಿರೂಪಣೆ.ಪಾತ್ರಗಳು, ಕಥೆ ನಮ್ಮ ಮುಂದೆ ಸ್ಪಷ್ಟವಾಗಿ ಮಾತಿನ ಹಾಗೆ ಬಿಚ್ಚಿಕೊಳ್ಳುತ್ತಿವೆ ಅಂದಾಗ ಮಿಸ್ ಆಗಿ ಬಿಡಬಹುದಾದ ಕಥೆಯ ಮುಖ್ಯ ತಿರುವವನ್ನು ಕೆಮೆರಾದ ಮೂವ್‌ಮೆಂಟ್‌ನಲ್ಲಿ ನಿರ್ದೇಶಕ ಹೇಳಿಬಿಡುತ್ತಾನೆ.

 

ಕಥೆ ಇರುವುದೇ ಇಬ್ಬರು ಮಕ್ಕಳ ಸುತ್ತ. ಅವರಿಬ್ಬರೂ ಅಣ್ಣ ತಂಗಿ. ಒಂದು ದಿನ ತಂಗಿಯ ಶೂ ರಿಪೇರಿ ಮಾಡಿಸಿಕೊಂಡು ಬರಲು ಹೋದ ಆ ಹುಡುಗ ಆಕಸ್ಮಿಕವಾಗಿ ಅವನ್ನು ಕಳೆದುಕೊಳ್ಳುತ್ತಾನೆ. ಪಾಪ ಎಲ್ಲೆಲ್ಲೋ ಹುಡುಕುತ್ತಾನೆ. ಹುಡುಕಲು ಹೋಗಿ ಬೈಸಿಕೊಳ್ಳುತ್ತಾನೆ. ಸಿಕ್ಕುವುದೇ ಇಲ್ಲ. ಮನೆಗೆ ಬಂದರೆ, ತಂಗಿ ಶೂಗಾಗಿ ಕಾಯುತ್ತಾ ಕೂತಿರುತ್ತಾಳೆ. ಚಹಾ ಮಾರಿ ಜೀವನ ಮಾಡುವವನ ಮಕ್ಕಳಿಬ್ಬರು. ಜೊತೆಗೆ ತಾಯಿ ಬಾಣಂತಿ. ಇದೆಲ್ಲವೂ ಗೊತ್ತಿರುವ ಮಕ್ಕಳು ಅವರು.ಇವರಿಬ್ಬರ ನಡುವೆ ಕಳೆದು ಹೋದ ಶೂ ಬಗ್ಗೆ ಸಂಭಾಷಣೆ ನಡೆಯುತ್ತದೆ. ಮೌನವಾಗಿ. ಅದು ಅಪ್ಪ-ಅಮ್ಮನ ಎದುರಿನಲ್ಲಿ. ಇಬ್ಬರೂ ಓದುತ್ತಾ ಕೂತಿರುತ್ತಾರೆ. ಅವಳು ತನ್ನ ನೋಟ್ ಪುಸ್ತಕದಲ್ಲಿ ಬರೆದು ಶೂ ವಿಚಾರ ಕೇಳುತ್ತಾಳೆ. ಅವನದಕ್ಕೆ ಉತ್ತರ ಕೊಟ್ಟು ಅವಳಿಗೆ ಸಮಾಧಾನ ಹೇಳುತ್ತಾನೆ. ಆದರೆ ಅವಳು ಒಪ್ಪುವುದಿಲ್ಲ. ‘ಅಪ್ಪನಿಗೆ ಹೇಳುತ್ತೀನಿ’ ಎಂದು ಬರೆದು ನೋಟ್‌ಬುಕ್ಕನ್ನು ಅವನತ್ತ ತಳ್ಳುತ್ತಾಳೆ.ಅವನು ಅಪ್ಪನಿಗೆ ಹೆದರಿ ಹೇಳಬೇಡ ಎನ್ನುತ್ತಿಲ್ಲ. ಅಪ್ಪ ಈಗ ಮತ್ತೊಂದು ಜೊತೆ ಶೂ ಕೊಡಿಸುವ ಪರಿಸ್ಥಿತಿಯಲ್ಲಿಲ್ಲ ಎಂಬರ್ಥದ ಮಾತನ್ನು ಪುಸ್ತಕದಲ್ಲಿ ಬರೆದು ಕಳಿಸುತ್ತಾನೆ.

 

ಮರುದಿನ ನಡೆಯುವುದೇ ಆರಂಭದಲ್ಲಿ ಹೇಳಿದ ದೃಶ್ಯ. ಅಣ್ಣ ತಂಗಿಗೆ ಮೊದಲು ತನ್ನ ಶೂ ಕೊಟ್ಟು, ಅವಳು ಶಾಲೆಯಿಂದ ಹಿಂದಿರುಗಿ ಬಂದ ಮೇಲೆ ಅದೇ ಶೂ ತೊಟ್ಟು ಅವನು ಶಾಲೆಗೆ ಹೋಗುತ್ತಾನೆ.ಹೀಗೆ ನಡೆಯುತ್ತದೆ. ಅವನು ಶಾಲೆಗೆ ತಡವಾಗಿ ಹೋಗುತ್ತಾನೆ. ಹೆಡ್‌ಮೇಷ್ಟ್ರಿಂದ ಬೈಸಿಕೊಳ್ಳುತ್ತಾನೆ.ಅತ್ತ ಒಂದು ದಿನ ಆ ಹುಡುಗಿ ತಾನು ಕಳೆದುಕೊಂಡ ಶೂ ತನ್ನದೇ ಶಾಲೆಯ ಒಬ್ಬ ಹುಡುಗಿಯ ಕಾಲಲ್ಲಿರುವುದನ್ನು ನೋಡುತ್ತಾಳೆ. ಒಂದು ದಿನ ಅವಳನ್ನು ಹಿಂಬಾಲಿಸಿದ ಹೋದಾಗ ಆ ಹುಡುಗಿ ಕುರುಡನೊಬ್ಬನ ಮಗಳು ಎಂಬುದನ್ನು ಕಂಡು ಸುಮ್ಮನೆ ಹಿಂದಿರುಗುತ್ತಾಳೆ

ಪುಟ್ಟ ಹುಡುಗಿ.ಹುಡುಗನು ಅಪ್ಪನ ಜೊತೆ ನಗರಕ್ಕೆ ಹೊಸದೊಂದು ಕೆಲಸ ಮಾಡಲು ಹೋಗುತ್ತಾನೆ. ಅದು ಗಾರ್ಡನಿಂಗ್ ಕೆಲಸ. ಹೋದಲ್ಲೆಲ್ಲಾ ಜನ ಬೈಯುತ್ತಾರೆ. ನಾಯಿ ಬೊಗಳುತ್ತವೆ. ಯಾರದೋ ಮನೆ ಬಾಗಿಲು ತಟ್ಟಿದಾಗ ‘ಏನಾಗಬೇಕೆಂದರೆ’, ಅಪ್ಪನಿಗೆ ಏನು ಹೇಳಬೇಕೆಂದು ತೋಚದೆ ನಿಲ್ಲುತ್ತಾನೆ. ಮತ್ತೊಮ್ಮೆ ಹೀಗೆ ಆದಾಗ ಆ ಪುಟ್ಟ ಹುಡುಗ ಉತ್ತರ ಕೊಡುತ್ತಾನೆ.ಅಪ್ಪನಿಗೆ ಹೆಮ್ಮೆ ಎನಿಸುತ್ತದೆ.ಅಂದು ಅವರಿಬ್ಬರು ಒಂದು ಮನೆಯಲ್ಲಿ ಗಾರ್ಡನಿಂಗ್ ಮುಗಿಸಿ ಕೈ ತುಂಬ ಹಣತರುತ್ತಾರೆ.ಇದೇ ಹೊತ್ತಿಗೆ ಅಣ್ಣನ ಶಾಲೆಯಲ್ಲಿ ಓಟ ಸ್ಪರ್ಧೆಗೆ ಸ್ಪರ್ಧಾಳುಗಳ ಆಯ್ಕೆ ನಡೆಯುತ್ತಿರುತ್ತದೆ. ಎಂದಿನಂತೆ ತಡವಾಗಿ ಬರುವ ಅಣ್ಣನಿಗೆ ಆಯ್ಕೆ ಸುತ್ತಿನಲ್ಲಿ ಭಾಗವಹಿಸುವುದಕ್ಕೆ ಆಗುವುದಿಲ್ಲ. ಕಡೆಗೂ ಕಣ್ಣೀರು ಹಾಕಿ ದೈಹಿಕ ಶಿಕ್ಷಕರನ್ನು ಒಪ್ಪಿಸಿ ಸ್ಪರ್ಧೆಗೆ ಸಿದ್ಧನಾಗುತ್ತಾನೆ. ತಂಗಿಗೆ ಈ ಸ್ಪರ್ಧೆಯಲ್ಲಿ ಮೂರನೆ ಸ್ಥಾನ ಬಂದರೆ ಒಂದು ಜೊತೆ ಶೂ ಸಿಗುತ್ತೆ ಅಂತಾನೆ.ಅದು ಹುಡುಗರ ಶೂ ನಾನ್ಹೇಗೆ ಹಾಕಿಕೊಳ್ಳಲಿಲ್ಲ ಅಂತಾಳೆ ತಂಗಿ.ಅವನು ಅವನ್ನು ಕೊಟ್ಟು ನಿಂಗೆ ಬೇಕಾದ ಚಂದನೆಯ ಶೂ ತರೋಣ ಎನ್ನುತ್ತಾನೆ.ಸ್ಪರ್ಧೆಯಲ್ಲಿ ನೂರಾರು ಮಕ್ಕಳು. ಅದೊಂದು ಮ್ಯಾರಥಾನ್ ಓಟ. ಓಟ ಅರ್ಧ ದಾರಿ ಸಾಗಿದ ಮೇಲೆ ಅವನಿಗೆ ಮೂರನೆ ಸ್ಥಾನ ಸಿಕ್ಕುತ್ತೋ ಇಲ್ಲವೋ ಎನ್ನುವ ಆತಂಕ ಆರಂಭವಾಗುತ್ತದೆ. ಶೂ ನನಗೆ ಸಿಕ್ಕುವುದಿಲ್ಲ ಎನ್ನಿಸುತ್ತದೆ. ವೇಗವಾಗಿ ಓಡುತ್ತಾನೆ.ಮೇಷ್ಟ್ರು ಹೆಗಲ ಮೇಲೆ ಹೊತ್ತು ‘ನೀನು ಫಸ್ಟ್ ಬಂದೆ’ ಎಂದಾಗಲೇ ಅವನಿಗೆ ಎಚ್ಚರ. ಅಯ್ಯೋ ತಪ್ಪಿ ಹೋಯಿತಲ್ಲ ಶೂ ಎಂದು ಹಳಹಳಿಸುತ್ತಾನೆ.ವೇದಿಕೆಯಲ್ಲಿ ಮೇಲಿದ್ದ ಶೂಗಳನ್ನು ಒದ್ದೆ ಕಣ್ಣಿನಲ್ಲಿ ನೋಡುತ್ತಾನೆ.ಮನೆಗೆ ಬಂದಾಗ ತಂಗಿಯ ಮುಂದೆ ನಾನು ಥರ್ಡ್ ಬರಲಿಲ್ಲ ಅಂತಾನೆ. ಓಡುವುದಕ್ಕಾಗಿ ತೊಟ್ಟಿದ್ದ ಇದ್ದ ಒಂದು ಜತೆ ಶೂ ಕೂಡ ಕಿತ್ತು ಹೋಗಿರುತ್ತವೆ. ಕಾಲು ಬೊಬ್ಬೆ ಬಂದಿರುತ್ತವೆ. ಮನೆ ಅಂಗಳದಲ್ಲಿ ನೀರಿನ ತೊಟ್ಟಿಯಲ್ಲಿ ಕಾಲಿಳೆ ಬಿಟ್ಟು ಕೂರುತ್ತಾನೆ. ಅಲ್ಲಿಗೆ ಚಿತ್ರ ಮುಗಿಯುತ್ತದೆ.

 

ಹಾಗಾದರೆ ಶೂ…?ನಿರ್ದೇಶಕ ಹುಡುಗ ಓಟ ಮತ್ತು ಮನೆಗೆ ಬರುವ ಮಧ್ಯದಲ್ಲೇ ಒಂದು ದೃಶ್ಯವನ್ನು ತೋರಿಸುತ್ತಾನೆ. ಅಲ್ಲಿ ಮಾತಿಲ್ಲ. ಈ ಮಕ್ಕಳ ತಂದೆ ಸೈಕಲ್ಲಿಗೆ ಏನನ್ನೋ ಹಾಕುತ್ತಿರುತ್ತಾನೆ. ಆಗ ಕ್ಯಾರಿಯರ್‌ನಲ್ಲಿ ಒಂದು ಡಬ್ಬಿಯನ್ನು ತೋರಿಸುತ್ತಾನೆ. ಅದರೊಳಗೆ ಎರಡು ಜೊತೆ ಶೂ ಗಳಿರುತ್ತವೆ. ಅಪ್ಪ ಸೈಕಲ್ ಸ್ಟ್ಯಾಂಡ್ ತೆಗೆದು ತಳ್ಳಿಕೊಂಡು ಹೊರಡುತ್ತಾನೆ.ನನಗೆ ಆ ಚಿತ್ರದಲ್ಲಿ ತುಂಬಾ ಹಿಡಿಸಿದ್ದು ಮಕ್ಕಳು ಅವರ ಮುಗ್ಧತೆ, ಜೊತೆಗೆ ತಮ್ಮ ಪರಿಸ್ಥಿತಿಯ ಅರಿವು, ತನ್ನದೇ ವಸ್ತುವನ್ನು ಇನ್ನೊಬ್ಬರ ಬಳಿ ಕಂಡೂ ಅದನ್ನು ಕಿತ್ತುಕೊಳ್ಳದಷ್ಟು ಔದಾರ್‍ಯ… ಎಲ್ಲವೂ ಬೆರಗು ಮಾಡುತ್ತದೆ. ನಿರ್ದೇಶಕ ಮಜಿದ್ ಇರಾನಿನ ಕುಟುಂಬಗಳ ಚಿತ್ರಣವನ್ನು ನೀಡುತ್ತಾರೆ. ನೀವು ನೋಡಿ. ಇತ್ತೀಚೆಗೆ ಸ್ಟಾರ್ ಮೂವೀಸ್ನಲ್ಲಿ ಪ್ರಸಾರವಾಯಿತೆಂದು ಮಿತ್ರರು ಹೇಳುತ್ತಿದ್ದರು.

Advertisements

2 responses to this post.

 1. Posted by chetana chaitanya on ಮೇ 6, 2008 at 12:17 ಅಪರಾಹ್ನ

  ee hinde Bhaagavata mattu Navadaru CHILDREN OF HEAVEN nOduvante shifaarasu mADiddaru. samayavAgiralilla. ee barahagaLannu Odida mEle, innu taDa mADuvudilla!
  THANKS.

  – Chetana

  ಉತ್ತರ

 2. ಸುಪ್ರೀತ್,
  ಈ ಚಿತ್ರವನ್ನ ಗೆಳೆಯ ಕಿರಣ್ ನೋಡಲೆಂದು ಕಳೆದ ವರುಷ ನೀಡಿದ್ದು, ಅರ್ಧದಲ್ಲೆ ನನ್ನವಗೆ ಕಣ್ಣೀರು ಬಂದು ’ಇನ್ನು ಇದನ್ನ ನೋದಲಾರೆ’ ಎಂದು ಎದ್ದು ಹೋಗಿದ್ದು, ನಾನು ಕಣ್ಣೀರು ಹಾಕುತ್ತಲೆ ಚಿತ್ರವನ್ನು ನೋಡಿದ್ದು.. ಸ್ಪೀಚ್ ಅಂಡ್ ಹಿಯರಿಂಗ್ ಇಂಪೇರ್ಡ್ ಹುಡುಗನೊಡನೆ ಒಮ್ಮೆ ಗೊಂಬೆಗಾಗಿ ಕಿತ್ತಾಡಿ ಅವನಿಗೆ ಮಾತು ಬರುವುದಿಲ್ಲ ಎಂದು ತಿಳಿದ ಕೂಡಲೆ ತನ್ನ ಗೊಂಬೆಯನ್ನು ಅವನಿಗೆ ಕೊಟ್ಟು ಸ್ನೇಹ ಬೆಳೆಸಿದ, ನಾವು ಕೊಂಚ ಜೋರಾಗಿ ಮಾತನಾಡಿದರು ’ಮಮ್ಮ, ಡ್ಯಾಡಾ,,ಜಗಳ ಮಾಡಬಾರದು ಫ್ರೆಂಡ್ಸ್ ಆಗಿರ್ಬೇಕು’ ಎಂದು ತಿಳಿಹೇಳುವ ಐದು ವಯಸ್ಸಿನ ನನ್ನ ಮಗಳ ನೋಡುತ್ತ ಆರ್ದ್ರರಾಗಿದ್ದು..ಇಂಥ ಮಕ್ಕಳು ನಮ್ಮ ನಡುವೆ ಇರುವುದಕ್ಕೇನೇ, ಭೂಮಿಯ ಎಲ್ಲ ಬಣ್ಣಗಳು ನಮ್ಮ ಸುತ್ತ ಜೀವಂತವಾಗಿರುವುದು.

  ನಿಜಕ್ಕು ಇವರು ಬರೆ ಮಕ್ಕಳಲ್ಲ..ಸ್ವರ್ಗದ ಮಕ್ಕಳೇ ಸರಿ!!
  – ಟೀನಾ

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: