ಚೇತನಾ ಕಾತ್ತಿರುಂದಾಳ್..

ನಂದೊಂದು ಸಿನೆಮಾ ಕಳೆದುಹೋಗಿದೆ. ಗುಜರಾಥಿ ಸಿನೆಮಾ. ಹೆಸರು ಇತ್ಯಾದಿ ಗೊತ್ತಿಲ್ಲ. ಪರಮೇಶ್ ಗುರು ಸ್ವಾಮಿಯವರು ಸಹಾಯ ಮಾಡುವರೇ?
ಅದು ಸಮಾಜದ ಮೇಲು- ಕೀಳುಗಳನ್ನ ಬಹಳ ತಣ್ಣಗೆ ಹಿಡಿದಿಟ್ಟ ‘ಪ್ರಶಸ್ತಿ ಪುರಸ್ಕೃತ’ ಚಿತ್ರ. ಅದಕ್ಕೆ ಎರಡೆರಡು ಅಂತ್ಯಗಳಿದ್ದು ಯಾವುದನ್ನು ಬೇಕಾದರೂ ನಾವು ಆಯ್ದುಕೊಳ್ಳಬಹುದಿತ್ತು.
ಸಿನೆಮಾ ನೆನಪು ಹೀಗೆ ಅಸ್ಪಷ್ಟವಾಗಿದೆ. ಇವಳದ್ದೆಲ್ಲ ಹಳೆ ಕಥೆಗಳೇ ಅಂದ್ಕೊಳ್ಬೇಡಿ, ಅದನ್ನ ನಾನು ನೋಡಿ ಹದಿನಾರು- ಹದಿನೇಳು ವರ್ಷಗಳಾದ್ವು!

ಅದು ಹೀಗಿದೆ.
ರಾಜಕೀಯ ಕುತಂತ್ರಕ್ಕೆ ಸಿಕ್ಕ ರಾಜ ಮನೆತನದ ಶಿಶು ಅಂತ್ಯಜರ (ಈ ಪದ ಪ್ರಯೋಗ ಕೂಡ ತಪ್ಪು. ಬೇರೆ ಸಿಗುತ್ತಿಲ್ಲ, ಯಾರಾದರೂ ಸಹಾಯ ಮಾಡಿ ಪ್ಲೀಸ್) ಪ್ರಾಂತ್ಯ ಸೇರುತ್ತದೆ. ಅಲ್ಲಿನ ಜನ ಸೊಂಟಕ್ಕೆ ಪೊರಕೆ ಸಿಕ್ಕಿಸ್ಕೊಂಡು ಓಡಾಡ್ತಿರ್ತಾರೆ. ಈ ಮಗು ಬೆಳೀತಾ ಬೆಳೀತಾ ತಾನು ಇವರ ನಡುವಿನವನಲ್ಲ ಅಂತ ಭಾವಿಸ್ತಾ ತನ್ನ ಬೇರನ್ನ ಹುಡುಕ್ತಲೇ ಇರುತ್ತೆ… ಕಾಯುತ್ತಲೇ ಆತ ಯುವಕನಾಗ್ತಾನೆ…. ಹೀಗೆ ಸಾಗತ್ತೆ ಸಿನೆಮಾ. ಆದ್ರೇನು ಮಾಡ್ಲಿ? ಕಥೆ ಪೂರ್ತಿ ನೆನಪಿಲ್ಲ. ಸೊಂಟಕ್ಕೆ ಪೊರಕೆ…. ಗಣ್ಯ, ಮೇಲ್ಜಾತಿ ಅಂತೆಲ್ಲ ಅನಿಸಿಕೊಂಡ ಪ್ರಾಣಿಗಳು ಬಂದಕೂಡಲೆ ಅವರೆಲ್ಲ ಅಡಗಿಕೊಳ್ಳೋದು, ಈತ ಪ್ರತಿಭಟಿಸೋದು… ಒಂದು ಅಂತ್ಯದಲ್ಲಿ ಆತ ರಾಜಕುಮಾರ ಅಂತ ಗೊತ್ತಾಗಿ ಆತನನ್ನ ಸ್ವೀಕರಿಸಿ ರಾಜ ಮಾಡೋದು, ಮತ್ತೊಂದು ಅಂತ್ಯದಲ್ಲಿ ಆತನನ್ನ ವಾಪಸು ಸ್ವೀಕರಿಸಲಾಗದೆ ಬಾವಿಗೆ ತಳ್ಳೋದು… ಅದರಲ್ಲಿ ನಂಗೆ ಬಾವಿಗೆ ತಳ್ಳೋದೇ ವಾಸ್ತವ ಅನಿಸಿ ಅತ್ತುಬಿಟ್ಟಿದ್ದು…. ಇಷ್ಟು ಮಾತ್ರ ನೆನಪಿದೆ.
ಯಾಕೋ ಗೊತ್ತಿಲ್ಲ, ನಾನು ಆ ಸಿನೆಮಾ ಮತ್ತೆ ನೋಡಬೇಕು. ಹೊರಗೆ ಕಸ ಗುಡಿಸುವ ಅಜ್ಜಿ ಮತ್ತು ಬೂಟ್ ಕಟ್ ಪ್ಯಾಂಟು ಹಾಕ್ಕೊಂಡು ತಲೆ ತಗ್ಗಿಸಿಯೇ ಅವಳು ಗುಡಿಸಿದ ಕಸವೆತ್ತಿ ಗಾಡಿಗೆ ಹಾಕ್ಕೊಳ್ಳುವ  ಅವಳ ಮಗನನ್ನ ನೋಡಿದಾಗೆಲ್ಲ ಆ ಸಿನೆಮಾ ನೆನಪಾಗತ್ತೆ. ಇಷ್ಟಕ್ಕೂ ಅದೊಂದು ಅವಾರ್ಡ್ ಮೂವೀ. ಆದರೆ ಜನಪ್ರಿಯವಾಗಿತ್ತಾ? ಗೊತ್ತಿಲ್ಲ. ಅದರ ಹೆಸರು, ಇತ್ಯಾದಿ ಯಾರಾದರೂ ಹೇಳಬಲ್ಲರೇ?

ಕಾಯ್ತಿದ್ದೇನೆ.
ಚೇತನಾ ತೀರ್ಥಹಳ್ಳಿ

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: