ಬೆಟ್ಟದಾ ತುದಿ­ಯಲ್ಲಿ ಕಾಡು­ಗಳ ಎದೆ­ಯಲ್ಲಿ

ಕಾರ್ತಿಕ್ ಅವರ ಕೋರಿಕೆಗೆ ಈಟಿವಿ ಚಾನಲ್ ನ ಶ್ರೀನಿವಾಸ ಗೌಡ ಅವರು ಅಲ್ಲಿಲ್ಲಿ ಹುಡುಕಿ ಕಾಕನ ಕೋಟೆಯ ಮತ್ತೆ ಮತ್ತೆ ಗುನುಗುನಿಸಿಕೊಳ್ಳುವಂತಹ ಹಾಡನ್ನು ಕಳಿಸಿಕೊಟ್ಟಿದ್ದಾರೆ. ಇಲ್ಲಿದೆ-

ಬೆಟ್ಟದಾ ತುದಿ­ಯಲ್ಲಿ ಕಾಡು­ಗಳ ಎದೆ­ಯಲ್ಲಿ
ಕಪಿ­ನೀಯ ನದಿ­ಯೆಲ್ಲಿ ಉಗು­ತಿ­ರು­ವು­ದಲ್ಲಿ;
ಎಲ್ಲಿ ನೋಡ ನೋಡ ಕರ್ರ ಕಾರುವ ಮೋಡ
ಪಡೆ­ಗೂ­ಡು­ವುದು ಗಾಡ ಒಟ್ಟೊಟ್ಟಿ ಅಲ್ಲಿ;
ಎಲ್ಲಿ ಕೊಂಬಿನ ಸಲಗ ಹೆಣ್ಣಾನೆ ಮರಿ­ಬ­ಳಗ
ಬೆಳು­ತಿಂ­ಗ­ಳಿನ ತಳಗ ನಡೆ­ಯು­ವುದು ಅಲ್ಲಿ;

ಯಾವಲ್ಲಿ ಸಾರಂಗ ಕೆಚ್ಚು­ಕೋ­ಡಿನ ಸಿಂಗ
ನೋಡುತ ನಿಂತ್ಹಂಗ ನಿಲ್ಲು­ವುದು ಅಲ್ಲಿ;
ಎಲ್ಲಿ ಎರ­ಳೆಯ ಹಿಂಡು ಹುಲಿಯ ಕಣ್ಣನು ಕಂಡು
ಹೆದರಿ ಹಾರುವ ದಂಡು ಚೆಲ್ಲು­ವುದು ಅಲ್ಲಿ;
ಗಿಳಿ­ಗೊ­ರವ ಕೋಗೀಲೆ ಹಾರು ಹಕ್ಕಿಯ ಮಾಲೆ
ಹಾಡು­ತಿದೆ ದನಿ­ಮೇಲೆ ದನಿ­ಯೇರಿ ಎಲ್ಲಿ;
ಎಲ್ಲಿ ಏಕಾ­ಏಕಿ ಗಂಡು ನಮಿ­ಲಿಯ ಕೇಕಿ
ಬೋರ­ಗ­ಲ್ಲಿಗೆ ತಾಕಿ ಗೆಲ್ಲು­ವುದು ಅಲ್ಲಿ;
ಹೆಜ್ಜೇನು ಯಾವಲ್ಲಿ ಇದ್ದಲ್ಲೇ ಹೂವಲ್ಲಿ
ಕದ್ದೊಂದು ಮೇವಲ್ಲಿ ತಣಿ­ದಿ­ರು­ವು­ದಲ್ಲಿ;
ದಿನ ದಿನಾ ಸಂಪಂಗಿ ಇರು­ವಂತಿ ಮಲ್ಲಂಗಿ
ಮೊಲ್ಲೆ ಅದರ ತಂಗಿ ಅರ­ಳು­ವುದು ಎಲ್ಲಿ;
ಯಾವಲ್ಲಿ ಜಾಲಾರಿ ಎದೆಯ ಕಂಪನು ಕಾರಿ
ತನ್ನ ತಾಣವ ಸಾರಿ ಬಾ ಎಂಬು­ದಲ್ಲಿ;
ಯಾವಲ್ಲಿ ಹೆಬ್ಬ­ಲಸು ಕೈಗೆ ಕಾಲಿಗೆ ಗೊಲಸು
ಅಂತ ಹಣ್ಣನು ಹುಲುಸು ಹೊತ್ತಿ­ರು­ವು­ದಲ್ಲಿ
ಎಲ್ಲಿ ಕರಿ ಸಿರಿ­ಗಂಧ ಮರ ಬೆಳೆದು ತಾ ಮುಂದ
ಮಾದೇ­ಶ್ವ­ರಗೆ ಚೆಂದ ಮೆಚ್ಚು­ವುದು ಅಲ್ಲಿ..

ಮಾಸ್ತಿ ವೆಂಕಟೇಶ ಅಯ್ಯಂಗಾರ್

Advertisements

3 responses to this post.

 1. Posted by chetana chaitanya on ಮೇ 22, 2008 at 3:34 ಅಪರಾಹ್ನ

  ಅಂದಹಾಗೆ, ಕರಿಹೈದನೆಂಬೋನು ಮಾದೇಶ್ವರ…
  ನೇಸರ ನೋಡು…
  ಈ ಹಾಡುಗಳು ಕಾಕನ ಕೋಟೆಯದ್ದೇ ಅಲ್ವಾ?
  ನೇಸರ ನೋಡು ಲಿರಿಕ್ಸ್ ಇದೆಯಾ?
  ಕಾಡು ಕುದುರೆ ಓಡಿ ಬಂದಿತ್ತಾ…. ಈ ಹಾಡಿನ ಬಗ್ಗೆ ಸ್ವಲ್ಪ ಕನ್ಫ್ಯೂಶನ್ನಿದೆ. ಕ್ಲಿಯರ್ ಮಾಡ್ತೀರಾ?

  ಉತ್ತರ

 2. chetana,
  ‘Nesara Nodu..’ as far as I know is not from ‘Kakana Kote’ But from another Shankar Nag starrer ‘Ondaanondu Kaladalli’. If I am not wrong, it was his first movie. (I still can’t overcome my awe when I saw him duelling with so many warriors..oooh!!) I think, one of our fellow bloggers had posted the u-tube version of the entire song. I will let u know soon from my archives..
  cheer,
  Tina.

  ಉತ್ತರ

 3. Posted by ಕಾರ್ತಿಕ್ on ಮೇ 23, 2008 at 10:17 ಫೂರ್ವಾಹ್ನ

  Thanks ಶ್ರೀನಿವಾಸ ಗೌಡ್ರೆ.. ಕಾಕನ ಕೋಟೆ ಹಾಡುಗಳನ್ನು ತುಂಬಾ ದಿನದ ಮೇಲೆ ಮೊನ್ನೆ ಕೇಳಿದೆ… ಇಲ್ಲಿ ಅದರ ಬಗ್ಗೆ ಇನ್ನು ಹೆಚ್ಚು ವಿಷಯ ತಿಳಿಬಹುದೇನೋ ಅಂಥ request ಮಾಡಿದೆ.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: