ಇಳಯರಾಜಾ ಎಂಬ ‘ದ ಮೇಸ್ಟ್ರೊ’

-ಶ್ರೀನಿವಾಸರಾಜು

ಶ್ರೀನಿವಾಸರಾಜು ಕನ್ನಡದ ಚಿತ್ರ ಪತ್ರಿಕೋದ್ಯಮದಲ್ಲಿನ ಹೊಸ ಹೆಸರು. ಸೂಕ್ಷ್ಮ ನೋಟದ ಇವರು ‘ಕನ್ನಡ ಟೈಮ್ಸ್’ನಲ್ಲಿ  ಬರೆಯುತ್ತಿರುವ ಬರಹಗಳು ಈಗಾಗಲೇ ಗಮನ ಸೆಳೆದಿದೆ. ಇಳಯರಾಜ ಎಂಬ ಸಂಗೀತ ಮಾಂತ್ರಿಕನ ಬಗ್ಗೆ ಅವರು ಬರೆದಿರುವ ‘ದ ಮೇಸ್ತ್ರೋ’ ಅವರ ಪ್ರತಿಬೆಗೆ ಒಂದು ಸ್ಯಾಂಪಲ್. ಶ್ರೀನಿವಾಸರಾಜು ಇನ್ನು ಮುಂದೆ ನಿಯತವಾಗಿ ‘ಮ್ಯಾಜಿಕ್ ಕಾರ್ಪೆಟ್’ನಲ್ಲಿ ಬರೆಯುತ್ತಾರೆ.

ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ನಡೆದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಂಸಲೇಖ  ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಆಗ ಅವರನ್ನು ಸಭೆಗೆ ಪರಿಚಯಿಸುತ್ತ ಯಾರೋ, `ದಕ್ಷಿಣ ಭಾರತದ ಖ್ಯಾತ ಸಂಗೀತ ನಿದರ್ೇಶಕ’ಎಂಬ ವಿಶೇಷಣ ಹಚ್ಚಿ ಕೊಂಡಾಡಿದರು. ಈ ಪರಾಕು ಆಕಸ್ಮಿಕವಾಗಿತ್ತೋ ಇಲ್ಲವೋ ತಿಳಿದು ಬರಲಿಲ್ಲ. ಆದರೆ ಹಂಸ್ರ ಕಟ್ಟಾ ಅಭಿಮಾನಿಗಳಾಗಿದ್ದ ನನ್ನಂಥವರಿಗೆ ಅದು ಆ ಕ್ಷಣ ವಿಚಿತ್ರವಾಗಿ ಕೇಳಿಸಿತು. ವಾಸ್ತವವಾಗಿ ಇಂಥ ಹೊಗಳಿಕೆಗಳೆಲ್ಲ ಸಲ್ಲಬೇಕಾದದ್ದು ಇಳಯರಾಜರಿಗಲ್ಲವೇ ಎಂದು ನಾವೊಂದಷ್ಟು ಜನ ಆಡಿಕೊಂಡೆವು. ಇದಕ್ಕೆ ಕಾರಣಗಳೂ ಇದ್ದವು. ಇಳಯರಾಜ ದಕ್ಷಿಣದ ಎಲ್ಲ ಚಿತ್ರರಂಗಗಳಲ್ಲೂ ಕೆಲಸ ಮಾಡಿದ್ದಾರೆ ಎಂಬುದಷ್ಟೇ ಗಮನಾರ್ಹ ಅಲ್ಲ. ಅಥವಾ ಅವರು ಎಲ್ಲ ಭಾಷೆಗಳಲ್ಲೂ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ ಎಂಬುದೂ ಮುಖ್ಯವಲ್ಲ. ಇವೆಲ್ಲವನ್ನೂ ಮೀರಿ ಇಳಯರಾಜರ ಸಾಧನೆ ಇದೆ. ಅಸಾಧಾರಣ ಜೀನಿಯಸ್ ಆತ. ಮಹಾ ವೃತ್ತಿಪರ ಕೂಡ. ಕನ್ನಡದಲ್ಲೂ ಸಹ ಇಳಯರಾಜ ಇಲ್ಲಿನ ಜಾಯಮಾನಕ್ಕೆ ತಕ್ಕ ಸಂಗೀತವನ್ನು ಒದಗಿಸಿದರು ಮತ್ತು ಈಗಾಗಲೇ ಪ್ರಸಿದ್ಧವಾಗಿದ್ದ ತಮ್ಮ ಸಂಯೋಜನೆಯ ಟ್ಯೂನ್ಗಳನ್ನು ಬಳಸದೆ, ತಾಜಾ ಚೇತೋಹರಿ ರಾಗಗಳನ್ನೇ ಹೊಸೆದರು. ಈ ದೃಷ್ಟಿಯಲ್ಲಿ ದಕ್ಷಿಣ ಭಾರತದ ಇತರೆ ಪ್ರತಭಾವಂತ ಸಂಗೀತ ನಿದರ್ೇಶಕರಾದ ಹಂಸಲೇಖ, ಕೀರವಾಣಿ, ಎ.ಆರ್.ರೆಹಮಾನ್ ಮುಂತಾದವರೆಲ್ಲ ಇಳಯರಾಜರಿಂದ ಕಲಿಯುವುದು ಸಾಕಷ್ಟಿದೆ.

ಇಳಯರಾಜ 800ರ ಆಸುಪಾಸಿನಲ್ಲೇನೋ ಸಂಗೀತ ನಿದರ್ೇಶಿಸುತ್ತಿದ್ದಾರೆ ಎಂಬ ಅಂದಾಜಿತ್ತು. ಮೊನ್ನೆ ಸೆಟ್ಟೇರಿದ ಕನ್ನಡದ `ನನ್ನವನು’ ಸಿನಿಮಾ ಅವರ 867ನೇ ಚಿತ್ರ ಎಂಬ ಮಾಹಿತಿಯೊಂದಿಗೆ ಅವರ ಸೃಜನಶೀಲತೆಗೆ ತಗುಲಿಕೊಂಡಿರುವ ಸಂಖ್ಯೆಯ ಮೊತ್ತ ತಿಳಿಯಿತು. ರಿಟನರ್್ ಆಫ್é್ ದಿ ಮೇಸ್ಟ್ರೊ! ಈ ನೆವದಲ್ಲೇ ಇಳಯರಾಜ ಬಗ್ಗೆ ಒಂದಷ್ಟು ಚಚರ್ಿಸಬಹುದೆನಿಸುತ್ತದೆ. 

ಒಂದು ತಮಾಷೆಯ ಪ್ರಸಂಗ ನೆನಪಾಗುತ್ತದೆ. ಕೆಲವು ವರ್ಷಗಳ ಹಿಂದೆ ಎಂ.ಜಿ ರಸ್ತೆಯ ಯಾವುದೋ ಮ್ಯೂಸಿಕ್ ಸಿ.ಡಿ ಮಳಿಗೆಯ ಉದ್ಘಾಟನೆಯ ಸಲುವಾಗಿ ಇಳಯರಾಜ ಬೆಂಗಳೂರಿಗೆ ಬಂದಿದ್ದರು. ಪತ್ರಕರ್ತರ ದಂಡೊಂದು ಅವರನ್ನು ಮಾತಾಡಿಸಲು ಧಾವಿಸಿತು. ಇವರಲ್ಲಿ ಇಂಗ್ಲಿಷ್ ಪತ್ರಿಕೆಗಳವರೇ ಹೆಚ್ಚಿದ್ದರು. ಪತ್ರಿಕಾಗೋಷ್ಠಿ ಹೆಚ್ಚೂಕಮ್ಮಿ ಹೀಗೆ ನಡೆಯಿತೆಂದು ವರದಿಗಳು ಹೇಳಿದವು: ಪತ್ರಕರ್ತರು ಇಳಯರಾಜ ಎದುರಿಗೆ ನಮ್ರವಾಗಿ ಕುಳಿತು, ಸ್ಕೂಲು ಮಕ್ಕಳಂತೆ ವಿಧೇಯತೆಯಿಂದ ಕೇಳಿದರು- `ನಿಮ್ಮ ಪ್ರಕಾರ ಸಂಗೀತ ಎಂದರೇನು?’ ಅದಕ್ಕೆ ಇಳಯರಾಜ ಭಾರಿ ನಿಲರ್ಿಪ್ತತೆಯಿಂದ `ಅದೊಂದು ಸಮುದ್ರ’ ಎಂದರು. ಹಾಗೆಯೇ ಅವರ ಸಾಧನೆಯ ಬಗ್ಗೆ ಪ್ರಶ್ನಿಸಲಾಗಿ, ಅವರು ಕೈ ಅಲ್ಲಾಡಿಸುತ್ತಾ `ನಾನೇನೂ ಸಾಧಿಸಿಲ್ಲ. ಬರೇ ಸೊನ್ನೆ’ ಎಂದು ತೇಲಿಸಿಬಿಟ್ಟರು. `ನಿಮ್ಮನ್ನು ರಾಗಋಷಿ ಎನ್ನುವುದರ ಬಗ್ಗೆ…’ ಎಂದು ಪತ್ರಕರ್ತರಿನ್ನೂ ಪ್ರಶ್ನಿಸುತ್ತಿರುವಂತೆಯೇ ಇಳಯರಾಜ ಮುಗಿಲ ದಿಕ್ಕಿಗೆ ಸನ್ನೆ ಮಾಡುತ್ತಾ, `ಏನೂ ಇಲ್ಲ. ನನ್ನದೇನೂ ಇಲ್ಲ’ ಎನ್ನುತ್ತಾ ಜಾಗ ಖಾಲಿ ಮಾಡಿದರು!

ಸಾಕಷ್ಟು ಕುತೂಹಲದ ಅಂಶಗಳು ಇಲ್ಲಿವೆ. ಮೇಲ್ನೋಟಕ್ಕೆ ಇಳಯರಾಜ ಚಯರ್ೆಯಲ್ಲಿ ಉಡಾಫೆ, ಭೋಳೆತನ ಇತ್ಯಾದಿಗಳು ಕಂಡುಬಂದರೂ, ನಿಜ ಸಂಗತಿ ಅದಲ್ಲ. ಇಳಯರಾಜ ಮಾತುಗಳಲ್ಲಿ ಆಧ್ಯಾತ್ಮದ ಛಾಯೆ ಇರುವಂತೆ ತೋರಿದರೂ ಮತ್ತು ನಿಜಕ್ಕೂ ಇಳಯರಾಜ ಆಧ್ಯಾತ್ಮ ಜೀವಿ ಹೌದಾದರೂ ವಿಷಯ ಅದಷ್ಟೇ ಅಲ್ಲ. ಮೂಲತಃ ಇಳಯರಾಜ ಎಂಥ ಸಂಕೋಚದ ಜೀವಿ ಎಂದರೆ, ಅವರೆಂದೂ ಇಲ್ಲಿ ಪತ್ರಕರ್ತರು ಎಳೆಯಲು ಉದ್ದೇಶಿಸಿದ್ದಂತಹ ದೇಶಾವರಿ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದ್ದೇ ಇಲ್ಲ ಮತ್ತು ಆ ಮೂಲಕ ಎಂದೂ ಸಮಯ ವ್ಯರ್ಥ ಮಾಡಿಕೊಂಡವರೂ ಅಲ್ಲ. ತಾವು, ತಮ್ಮ ಕೆಲಸ ಎಂದು ಇದ್ದುಬಿಡುವ ಇಳಯರಾಜ, ಚಲಾವಣೆ ಗಿಟ್ಟಿಸಿಕೊಳ್ಳುವ ಎಲ್ಲ ಗಿಮಿಕ್ಗಳಿಂದ ಮೊದಲಿನಿಂದಲೂ ದೂರ. ಹೀಗಿರುವಾಗ ಅವರು ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿ ಪತ್ರಕರ್ತರನ್ನು ತಬ್ಬಿಬ್ಬು ಮಾಡಿದ್ದು ದೊಡ್ಡ ತಮಾಷೆ.

ಇನ್ನೂ ಹೇಳಬೇಕೆಂದರೆ, ಮೇಲ್ಸಾರದ ತಿಳುವಳಿಕೆ ಈಚೀಚೆಗೆ ಮಾಧ್ಯಮದ ಮಂದಿಯಲ್ಲಿ ಅತಿಯಾಗುತ್ತಿರುವುದನ್ನೂ ಮೇಲಿನಂಥ ಘಟನೆಗಳು ಸೂಚಿಸುತ್ತವೆ. ವಿವರಗಳ ಹೊರಮೈಯಲ್ಲಿ ದೇಶ, ಕಾಲ, ವ್ಯಕ್ತಿಗಳನ್ನು ಗ್ರಹಿಸುವ ಇಂಥ ಮನೋಭಾವವನ್ನು `ಕ್ವಿಜéರ್ ಆ್ಯಟಿಟ್ಯೂಡ್’ ಎನ್ನಲಾಗುತ್ತದೆ. ನಮ್ಮಲ್ಲಿ ರಾಜ್ ಬಗ್ಗೆಯೇ ಮಾಧ್ಯಮಗಳು ಇಂಥ ವರಸೆಯನ್ನು ಪ್ರದಶರ್ಿಸುವುದಿದೆ. ರಾಜ್ ಪ್ರಸ್ತಾಪ ಬಂದಿದ್ದು ಇಲ್ಲಿ ಒಳ್ಳೆಯದೇ ಆಯಿತು. ಯಾಕೆಂದರೆ ರಾಜ್ಕುಮಾರ್ ಮತ್ತು ಇಳಯರಾಜ ಇಬ್ಬರೂ ಕನ್ನಡದ ವಿಶಿಷ್ಟ ಪ್ರಯೋಗಶೀಲ ನಿದರ್ೇಶಕ ಜಿ.ಕೆ.ವೆಂಕಟೆೇಶ್ ಅವರಿಂದ ಬೆಳಕಿಗೆ ಬಂದವರು. ಈ ಇಬ್ಬರನ್ನು ಕ್ರಮವಾಗಿ ಗಾಯಕ ಮತ್ತು ಸಂಗೀತ ನಿದರ್ೇಶಕರಾಗಲು ಪ್ರೋತ್ಸಾಹಿಸಿ ಒತ್ತಾಸೆಯಾಗಿ ನಿಂತದ್ದೇ ಜಿ.ಕೆ.ವಿ. ತಮ್ಮ ಹೆಮ್ಮೆಯ ಘಳಿಗೆಗಳಲ್ಲಿ ಜಿ.ಕೆ.ವೆಂಕಟೇಶ್, `ನಾನು ಪರಿಚಯಿಸಿದ ಇಬ್ಬರು `ರಾಜ’ರು ನನ್ನ ಹೆಸರನ್ನು ಉಳಿಸುತ್ತಾರೆ’ ಎಂದು ಹೇಳಿದ್ದಿದೆ.

ಇನ್ನು ಇಳಯರಾಜ ಬಗ್ಗೆ ಪಂಜು ಅರುಣಾಚಲಂ ಹೇಳುವುದನ್ನು ನೋಡಿ: ಹಂಸಲೇಖ ತಮ್ಮ `ಜಾಣೆಯಾಗಿರು ನನ್ನ ಮಲ್ಲಿಗೆ’ ಎಂಬ ಲೇಖನದಲ್ಲಿ ಸಾಂದಭರ್ಿಕವಾಗಿ ಈ ಉಲ್ಲೇಖ ತರುತ್ತಾರೆ. `ಪಂಜು ಅರುಣಾಚಲಂ, ತಮಿಳಿನ ಹಿರಿಯ ಚಿತ್ರಸಾಹಿತಿ, ನಿಮರ್ಾಪಕ, ವಿತರಕ. ತಮ್ಮ ನಿಮರ್ಾಣದ `ಅನ್ನಕ್ಕಿಳಿ’ ಮೂಲಕ ಇವರು ಇಳಯರಾಜರಿಗೆ ಸಂಗೀತ ನಿದರ್ೇಶನದ ಅವಕಾಶ ಕೊಟ್ಟವರು. `ಪ್ರೇಮಲೋಕ’ದ ತಮಿಳು ಆವೃತ್ತಿಗೆ ಸಂಭಾಷಣೆ ಬರೆದವರು. ಒಂದು ದಿನ ನಾನು ಅವರನ್ನು ಕೇಳಿದೆ- `ಗಿಟಾರಿಸ್ಟ್ ಇಳಯರಾಜರನ್ನು ಸಂಗೀತ ನಿದರ್ೇಶನಕ್ಕಿಳಿಸಲು ನೀವು ಹೇಗೆ ಧೈರ್ಯ ಮಾಡಿದಿರಿ?’ ಆಸ್ಪತ್ರೆಯ ಹಾಸಿಗೆಯಲ್ಲಿ ಆಯಾಸದಿಂದ ಮಲಗಿದ್ದರೂ ನನಗಾಗಿ ಅವರು ಅದನ್ನು ಸವಿಸ್ತಾರವಾಗಿ ಹೇಳಿದರು. `ತಮಿಳಿನಲ್ಲಿ ಒಂದು ಕಾಲ ಬಂತು ಹಂಸಲೇಖ. ತಮಿಳು ಚಿತ್ರಗಳೆಲ್ಲ ಗಲ್ಲಾಪೆಟ್ಟಿಗೆಯಲ್ಲಿ ಸೋಲುತ್ತಿದ್ದವು. ಯಾರ ಬಾಯಲ್ಲಿ ನೋಡಿದರೂ ಹಿಂದಿ ಚಿತ್ರಗಳ ಗೀತೆಗಳೇ. ಆಗ ನಾನೂ ನನ್ನ ಕೆಲವು ಸ್ನೇಹಿತರೂ ತಮಿಳು ಚಿತ್ರಗಳ ಸೋಲಿಗೆ, ಹಿಂದಿ ಸಿನಿಮಾ ಹಾಡುಗಳ ಜನಪ್ರಿಯತೆಗೆ ಕಾರಣ ಹುಡುಕತೊಡಗಿದೆವು. ನಿದರ್ೇಶಕರು, ಸಂಗೀತ ನಿದರ್ೇಶಕರು, ನಟರು, ಗಾಯಕರು ಆಮೂಲಾಗ್ರವಾಗಿ ಬದಲಾಗಬೇಕು ಎಂಬ ತೀಮರ್ಾನಕ್ಕೆ ಬರಲಾಯಿತು. ಒಬ್ಬೊಬ್ಬರಾಗಿ ಬದಲಾವಣೆಯ ಪ್ರಯೋಗಗಳನ್ನು ಆರಂಭಿಸಿದೆವು. ಎರಡು ವರ್ಷಗಳ ಇಂಥ ಸತತ ಹತಾಶ ಯತ್ನದಲ್ಲಿ ನಾಲ್ಕೈದು ಪ್ರತಿಭಾರತ್ನಗಳು ನಮಗೆ ಸಿಕ್ಕಿದವು. ಇಳಯರಾಜ, ಭಾರತಿರಾಜ, ಭಾಗ್ಯರಾಜ ನಮ್ಮ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದರು. ಇತ್ತೀಚೆಗಂತೂ ಮಣಿರತ್ನಂ ಬಂದರು. ತಮಿಳು ಚಿತ್ರಗಳನ್ನು ದೇಶವೆಲ್ಲಾ ನೋಡುವಂತೆ ಮಾಡಿದರು…’ ಎಂಥ ಚಾರಿತ್ರಿಕ ಬಿಕ್ಕಟ್ಟುಗಳಲ್ಲಿ ಇಳಯರಾಜರಂಥ ಪ್ರತಿಭೆಗಳು ಹಾಯ್ದುಬಂದಿವೆ ಎಂಬುದನ್ನು ಇಲ್ಲಿ ನಾವು ಮನವರಿಕೆ ಮಾಡಿಕೊಳ್ಳಬಹುದು.
ಹಂಗೇರಿಯ ರಾಜಧಾನಿ ಬುಡಾಪೆಸ್ಟ್ನಲ್ಲೊಮ್ಮೆ ಇಳಯರಾಜ ಚಿತ್ರವೊಂದಕ್ಕೆ ರೀ-ರೆಕಾಡರ್ಿಂಗ್ ಮಾಡಿದ್ದರು. ಎರಡು ಸಾವಿರ ವಾದ್ಯಗಾರರಿರುವ ಸಾಕಷ್ಟು ಪ್ರಖ್ಯಾತ ತಂಡ ಹಂಗೇರಿಯದು. ಈ ಸಿಂಫನಿ ಆಕರ್ೆಸ್ಟ್ರಾವನ್ನಿಟ್ಟುಕೊಂಡೇ ಅವರು ಅವರು ಹೋದವರ್ಷ `ತಿರುವಾಸಗಂ’ ಹೆಸರಿನ ಆಲ್ಬಂ ತಂದರು. ಬಹಳ ವಿಶೇಷ ಎನಿಸುವ ಈ ಆಲ್ಬಂನಲ್ಲಿ ಮಾಣಿಕ್ಯ ವಾಸಗರ್ ಎಂಬ ಹಳೆ ಕವಿಯ ಪದ್ಯಗಳಿವೆ. ಅವನ್ನು ಜನಪದೀಯ ಮತ್ತು ಪಾಶ್ಚಾತ್ಯ ಶೈಲಿಗೆ ಹದವಾಗಿ ಹುರಿಗೊಳಿಸಲಾಗಿದೆ. ಇಂಥ ಚಮತ್ಕಾರಗಳನ್ನು ಇಳಯರಾಜ ಇನ್ನೂ ಮಾಡುತ್ತಿರುವುದು ಆಶ್ಚರ್ಯ. ಅವರ ಪ್ರತಿಭೆ ಅಕ್ಷಯವೇ ಎಂದು ನಾವೆಲ್ಲ ಸೋಜಿಗಪಡುವುದಿದೆ. ಇಲ್ಲಿ ನಮ್ಮ ಹಂಸಲೇಖ, `ಕುಮಾರವ್ಯಾಸ ಭಾರತ’ದ ಆಯ್ದ ಪದ್ಯಗಳ ಸಿ.ಡಿ ತಯಾರಿಸಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡು ಎಷ್ಟೋ ವರ್ಷಗಳಾದವು. ಅವರಿಗೆ ಏನೇನು ತಾಪತ್ರಯಗಳಿವೆಯೋ ಗೊತ್ತಿಲ್ಲ. ಆದರೆ ಇಳಯರಾಜರ ಚಟುವಟಿಕೆ ಎಲ್ಲ ಸೃಜನಶೀಲ ಸಂಗೀತ ನಿದರ್ೇಶಕರಿಗೆ ಸ್ಫೂತರ್ಿ ಉಕ್ಕಿಸುವಂತಾಗಬೇಕು. ಹಂಸಲೇಖರಂಥ ಬಹಳಷ್ಟು ಜನ ಇಲ್ಲಿ ಇಳಯರಾಜರನ್ನು ತಮ್ಮ ಪಾಲಿನ ಆದರ್ಶ ಮತ್ತು ಸವಾಲು ಎಂದು ಗುಟ್ಟಾಗಿ ಭಾವಿಸುವುದರಿಂದ ಇದನ್ನಿಲ್ಲಿ ಮೆಲುವಾಗಿ ಜ್ಞಾಪಿಸಬೇಕಾಯ್ತು.
 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: