Turtles can fly

-ಕೃಷ್ಣಮಾಸಡಿ.            

10-12 ವಯಸ್ಸಿನ ಹುಡುಗಿಯೊಬ್ಬಳು ನಿಧಾನಕ್ಕೆ ನಡೆಯುತ್ತಾ ಎತ್ತರದ ಬೆಟ್ಟದ ತುದಿಗೆ ಬಂದು ನಿಲ್ಲುತ್ತಾ ಹಿಂದೆ ತಿರುಗಿ ನೊಡುತ್ತಾಳೆ. ನೀರಿನಲ್ಲಿ ಅವಳ ನೆರಳು ಕಾಣುತ್ತಿ ರುತ್ತದೆ, ಆ ನೆರಳಿಗೆ ಅವಳು ಕಲ್ಲೆಸೆಯುತ್ತಾಳೆ, ನೀರಿನಲ್ಲಿ ಅಲೆಯೇಳುತ್ತದೆ. ಮತ್ತೆ ಹುಡುಗಿ ಬೆಟ್ಟದ ತುದಿಗೆ ಬಂದು ಕಾಲಿನಲ್ಲಿದ್ದ ಶೂಗಳನ್ನು ಬಿಟ್ಟು ಮುಂದೆ ಕಾಣುವ ಪ್ರಪಾತಕ್ಕೆ ಹಾರುತ್ತಿದ್ದಂತೆ ಪರದೆ ಕಪ್ಪಾಗಿ ಹಾಡು ಕೇಳುತ್ತಾ ಸಿನಿಮಾದ ಟೈಟಲ್ಗಳು ಆರಂಭಗೊಳ್ಳುತ್ತವೆ.
ಟೈಟಲ್ಗಳು ಮುಗಿದ ನಂತರ ನಿರಾಶ್ರಿತ ಶಿಬಿರದ ಮೇಲ್ಗಡೆ ಇರುವ ಗುಡ್ಡದ ಬಳಿ ಹತ್ತಿಪ್ಪತ್ತು ಹುಡುಗರು ಟಿ.ವಿ. ಅಂಟೇನಾಗಳನ್ನು ಹಿಡಿದುಕೊಂಡು ಸಿಗ್ನಲ್ಗೆ ಕಾಯುತ್ತಿರುತ್ತಾರೆ. ಸಿಗದಿರುವ ಸಿಗ್ನಲ್ ಕುರಿತು ಕೆಳಗಿನ ಹುಡುಗರು ಜೊತೆಯಲ್ಲಿ ಮುದುಕ ಇಸ್ಮಾಯಿಲ್. ಎಲ್ಲರ ಲೀಡರ್ 13-14 ರ ಹುಡುಗ ಸೆಟಲೈಟ್. ಸೋರನ್ ಅವನ ಹೆಸರಾಗಿ ದ್ದರೂ ಎಲ್ಲರೂ ಕರೆಯುವುದು ಸೆಟಲೈಟ್ ಎಂದೇ. ಈ ಶಿಬಿರ ಇರುವುದು ಕುದರ್ಿಷ್ಸ್ತಾನ್ ಎಂಬಲ್ಲಿ. ಇರಾನ್ ಮತ್ತು ತುಕರ್ಿಯ ಮಗ್ಗಲ ಬೆಟ್ಟ-ಗುಡ್ಡಗಳ ಎತ್ತರದ ಮೈನಡುಗಿಸುವ ಚಳಿ-ಮಳೆ-ಮಂಜುಗಳಿಂದ ಕೂಡಿದ ಪ್ರದೇಶವೇ ನಿಲ್ಲಲು ನೆಲೆ ಇಲ್ಲದ ಈ ಜನಾಂಗದವರ ಜಾಗ. ಈ ಸಿನಿಮಾದ ಕತೆ ನಡೆಯುವುದು 2003. ಅಮೇರಿಕಾ ಇರಾಕ್ ಮೇಲೆ ಯಾವುದೇ ಕ್ಷಣದಲ್ಲಿ ಯುದ್ದಕ್ಕೆ ಸಿದ್ದವಾಗಿರುವ ಸಮಯ. ಯುದ್ದದ ಸುದ್ದಿ ಕೇಳಲು ಎಲ್ಲರ ಕಾತರ. ಅಲ್ಲಿರುವವರೆಲ್ಲಾ ಬರೀ ಹುಡುಗರೇ ಆಗಿರುವುದರಿಂದ ಸೆಟಲೈಟ್ ಮೇಲ್ಗಡೆ ನಿಂತೇ ಎಲ್ಲರಿಗೂ ಕಮ್ಯಾಂಡ್ ಮಾಡುತ್ತಿರುತ್ತಾನೆ. ಬೆನ್ನಿಗೆ 2-3 ವರ್ಷದ ಕುರುಡ ಹುಡುಗನನ್ನು ಕಟ್ಟಿಕೊಂಡು ನಿಂತು ನೋಡುತ್ತಿದ್ದ 10-12ರ ಹುಡುಗಿಯ ಮೇಲೆ ಅವನ ಕಣ್ಣು ಹೋಗುತ್ತದೆ. ನಿನ್ನೆ ತಾನೆ ಈ ಶಿಬಿರಕ್ಕೆ ಬಂದ ಹೊಸ ಹುಡುಗಿ ಮತ್ತು ಅವಳ ಅಣ್ಣನ ಬಗ್ಗೆ ಪಾಷಾ ಹೇಳುತ್ತಾ ಅವಳ ಅಣ್ಣನಿಗೆ ಎರಡೂ ಕೈಗಳು ಮೈನ್ಸ್ನಲ್ಲಿ ಹೋಗಿರುವುದಾಗಿ ಹೇಳುತ್ತಾನೆ. ಹೀಗೆ ಹೇಳಿದ ಪಾಷಾನಿಗೆ ಒಂದು ಕಾಲಿರುವುದಿಲ್ಲ.
ಅಂಟೇನಾದಿಂದ ಸಿಗ್ನಲ್ ಸಿಗುವುದಿಲ್ಲವೆಂದು ಡಿಶ್ ತರಲು ಪಟ್ಟಣಕ್ಕೆ ಮುದುಕ ಸೆಟಲೈಟ್ನನ್ನು ಕರೆದುಕೊಂಡು ಹೊರಡುತ್ತಾನೆ. ಹಳೆಯ ರೆಡಿಯೋಗಳನ್ನು ಸುರಿದು ಮೇಲೆ ಹಣ ಕೊಟ್ಟು ಡಿಶ್ ತರುತ್ತಾರೆ. ಅದು ಕೂರಿಸಿದ ನಂತರ ಊರ ಹಿರಿಯರು ಟಿ.ವಿ. ನೋಡಲು ಒಂದೆಡೆ ಸೇರುತ್ತಾರೆ. ಸೆಟಲೈಟ್ಗೆ ನಿಷಿದ್ಧ ಚಾನೆಲ್ಗಳನ್ನು ಹಾಕಬೇಡ ಎಂದು ಮುದುಕ ಹೇಳಿದರೂ ಅವುಗಳು ನುಸುಳಿ ಬರುತ್ತಿರುತ್ತವೆ. ಕೊನೆಗೆ ಸಿಎನ್ಎನ್ ಚಾನಲ್ ಸಿಗುತ್ತದೆ. ಬುಷ್ ಮಾತನಾಡುತ್ತಿರುತ್ತಾನೆ. ಅಲ್ಪಸ್ವಲ್ಪ ಇಂಗ್ಲಿಷ್ ಬಲ್ಲ ಸೆಟಲೈಟ್ಗೆ ಅವರು ಮುಗಿಬೀಳುತ್ತಾರೆ. `ಇವನೇ ಬುಷ್ ಅಂತ.. ಅವನ ಅಂಗೈಯಲ್ಲಿ ಪ್ರಪಂಚ ಇದೆ..’ ಎಂದವನು ಮುಂದೆ ಏನೂ ಅರ್ಥವಾಗದೆ ನಾಳೆ ಮಳೆ ಬರುತ್ತದೆ ಅಂದ.. ಎಂದು ಅಲ್ಲಿಂದ ಹೊರಡುತ್ತಾನೆ.

ನಿರಾಶ್ರಿತ ಶಿಬಿರದ ಮಕ್ಕಳೆಲ್ಲಾ ಏಳೆಂಟು ವರ್ಷದಿಂದ ಹತ್ತರ ಅಸುಪಾಸಿನವರು. ಇವರೆಲ್ಲರ ಉದ್ಯೋಗ ನೆಲದಲ್ಲಿ ಹುಗಿದಿರುವ ಮೈನ್ಸ್ಗಳನ್ನು ಆರಿಸಿ ತರುವುದು. ಅವುಗಳನ್ನು ತೆಗೆದುಕೊಂಡು ಸೆಟಲೈಟ್ ಮಾರುವುದು ನಡೆದಿರುತ್ತದೆ. ಹಾಗಾಗಿ ಸೆಟಲೈಟ್ ಹೇಳಿದಂತೆ ಹುಡುಗರು ಕೇಳುತ್ತಿರುತ್ತಾರೆ. ಶೀಬಿರ ಆಸುಪಾಸಿನಲ್ಲಿ ಗಓ ರವರು ಮೈನ್ಸ್ ಕೀಳಲು ಓಡಾಡುತ್ತಿ ರುತ್ತಾರೆ. ಬೆಟ್ಟದ ಇನ್ನೊಂದು ತುದಿಯ ಬಳಿ ಇದ್ದ ಮೈನ್ಸ್ ವ್ಯಾಪಾರಿ ಬಳಿ ಇಂಗ್ಲಿಷ್ನಲ್ಲಿ ಸೆಟಲೈಟ್ ಮಾತನಾಡಿಸುತ್ತಾ ಬರುತ್ತಾನೆ. ಅಲ್ಲಿದ್ದವನು ಅದೇನು ಸರಿಯಾಗಿ ಮಾತನಾಡಿಸ ಬೇಡವಾ ಅಂದಾಗ `ನೀನೂ ಸಹ ಕುದರ್್ ಅಂತ ಗೊತ್ತಾದರೆ ಅಷ್ಟೆ. ರೇಟು ಬೇರೆ ಕಡಿಮೆ.. ನೀನು ನೋಡಿದರೆ ಗಓ ನವರಿಗೆ ಲಾಭಕ್ಕೆ ಮಾರಿಕೊಳ್ಳುತ್ತೀಯಾ.. ಇವೆಲ್ಲಾ ಗಖಂ ಯಲ್ಲಿ ತಯಾರಾದ 1 ಕ್ಲಾಸ್ ನೆಲಬಾಂಬ್ಗಳು..’ ಎನ್ನುವ ಮಾತುಕತೆಯಲ್ಲಿ ಅಲ್ಲಿ ನಡೆಯುವ ಭ್ರಷ್ಟಾ ಚಾರ ಮತ್ತು ವ್ಯಂಗ್ಯ ಕಾಣುತ್ತದೆ.

 

ಒಂದೊಂದು ದಿನ ಒಂದೊಂದು ಕಡೆ ಮಕ್ಕಳು ಅದೂ ಕೈಗಳಿಲ್ಲದ, ಕಾಲುಗಳಿಲ್ಲದ ಕೇವಲ ಬಾಯಿಯಿಂದ ಬಾಂಬ್ಗಳನ್ನು ನಿಷ್ಕ್ರಿಯಗೊಳಿಸಿ ಅವುಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ತರುವ ದೃಶ್ಯಗಳು.. ಇರಲಿ. ಸೆಟಲೈಟ್ಗೆ ಹೊಸದಾಗಿ ಬಂದ ಆ ಹುಡುಗಿ ಅಗ್ರೀನ್ಳ ಮೇಲೆ ಆಕರ್ಷಣೆ ಉಂಟಾಗುತ್ತದೆ. ಎರಡೂ ಕೈಗಳಿಲ್ಲದ ಅವಳ ಅಣ್ಣ ಹೆಂಕೊವ್ ಮತ್ತು ಕುರುಡ ಮಗುವಿಗೆ ಸಹಾಯ ಮಾಡಲು ಬಯಸುತ್ತಾನೆ. ಅಣ್ಣ-ತಂಗಿಯರ ಮಧ್ಯ ಕುರುಡ ಮಗುವನ್ನು ಕಾಲಿಗೆ ಹಗ್ಗ ಕಟ್ಟಿ ಮಲಗಿಸಿಕೊಳ್ಳುತ್ತಿರುತ್ತಾರೆ. ಆ ಶಿಬಿರದಲ್ಲಿರುವ ಎಲ್ಲಾ ನಿರಾಶ್ರಿತ ಮಕ್ಕಳಂತೆ ಇವರೂ ಸಹ ತಮ್ಮ ಪೋಷಕರನ್ನು ಕಳೆದುಕೊಂಡು ಬಂದವರೆಂದು ನೋಡುಗರೂ ತಿಳಿದಿರುತ್ತಾರೆ. ಅಗ್ರೀನ್ ಸೆಟಲೈಟ್ನನ್ನು ತಿರಸ್ಕರಿಸುತ್ತಾ ಮತ್ತು ರಾತ್ರಿ ಅಣ್ಣ ಹೇಳಿದ ನಿನ್ನ ಮಗು ಅಂದಾಗ ಮಗುವನ್ನು ಈ ವಯಸ್ಸಿನಲ್ಲಿ ಸಾಕುವ ಕಷ್ಟಗಳ ಕುರಿತು ಅವಳು ಯೋಚಿಸುತ್ತಿದ್ದಾಳೆ ಅನ್ನಿಸುತ್ತದೆ. ಅಂದೇ ರಾತ್ರಿ ಕೆರೆಯ ಬಳಿ ಹೋಗಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಳ್ಳಬೇನ್ನುವಾಗ ಮಗು ನಿಂತು ಕರೆದಂತೆ ಅನ್ನಿಸಿ ವಾಪಸ್ಸು ಗುಡಾರಕ್ಕೆ ಬರುತ್ತಾಳೆ. ಬೆಳಿಗ್ಗೆ ಮಗುವಿಗೆ ರಕ್ತ ಬರುವಂತೆ ಅವಳು ಹೊಡೆದಿದ್ದಾಗ ಗೊತ್ತಾಗುತ್ತದೆ. ಆ ಕುರುಡ ಹುಡುಗ ಅವಳ ತಮ್ಮ ಅಲ್ಲ ಸ್ವಂತ ಮಗ ಎಂದು. ಫ್ಲಾಷ್ಬ್ಯಾಕ್ನಲ್ಲಿ  ಸದ್ದಾಂ ಹುಸೇನ್ನ ಸೈನ್ಯ ಇವರ ತಂದೆ ತಾಯಿ ಕೊಂದು ಇವಳನ್ನು ಕೈಗಳಿಲ್ಲದ ಅಣ್ಣನೇದುರೇ ಐದಾರು ಸೈನಿಕರು ಬಲತ್ಕಾರ ಮಾಡುವುದು ತೋರುತ್ತದೆ.

ರಕ್ತಬರುತ್ತಿರುವ ಮಗುವನ್ನು ಕಾಲಿನಿಂದ ಎತ್ತಿಕೊಂಡು ಅವಚಿ ನಡೆಯುತ್ತಿದ್ದ ಹೆಂಕೋವ್ನನ್ನು ಕಂಡ ಸೆಟಲೈಟ್ ಸೈಕಲ್ನಲ್ಲಿ ಕೂರಿಸಿಕೊಂಡು ಹೊರಡುತ್ತಾನೆ. ಈ ಕಡೆ ಅಗ್ರೀನ್ ಆ ಬೆಟ್ಟದ ತುದಿಗೆ ಬಂದು ಕೆಳಗೆ ಕಾಣುವ ಹಿಮದ ಕಡೆ ನೋಡುತ್ತಾ ಕೂರುತ್ತಾಳೆ. ಹೆಂಕೋವ್ಗೆ ಕನಸಿನಲ್ಲಿ ಬಹುಷ್ಯದಲ್ಲಿ ನಡೆಯವುದು ತಿಳಿಯುತ್ತಿರುತ್ತೆ. ಯುದ್ದ ಆರಂಭವಾಗಿರುವುದನ್ನು ಸೆಟಲೈಟ್ಗೆ ಹೇಳುತ್ತಾನೆ. ಸೆಟಲೈಟ್ ಎಲ್ಲರೂ ಡೇರೆಗಳನ್ನು ಬಿಟ್ಟು ಬೆಟ್ಟದ ತುದಿಯಲ್ಲಿ ಮರಗಳಂತೆ ನಿಲ್ಲಲು ಹೇಳುತ್ತಾನೆ. ಅದೇ ಸಮಯಕ್ಕೆ ಅಮೇರಿಕಾದ ಹೆಲಿಕ್ಯಾಪ್ಟರ್ಗಳು ಕರಪತ್ರಗಳನ್ನು ಎಸೆದು ಹೋಗುತ್ತಾರೆ.

`ಒಳ್ಳೆಯವರಾದ ನಾವು ಬಂದಿ ದ್ದೇವೆ..ನಿಮ್ಮ ನೋವು ತೆಗೆದುಕೊಂಡು ನಿಮ್ಮನ್ನು ಸ್ವರ್ಗದಲ್ಲಿ ಕೂರಿಸಿಲು..’ ಮುಂತಾಗಿ ಕರಪತ್ರ ದಲ್ಲಿ ಇರುತ್ತದೆ. ರಾತ್ರಿ ಅಗ್ರೀನ್ ಮಗುವನ್ನು ಇಲ್ಲಿಯೇ ಬಿಟ್ಟು ಹೋಗುವುದು ಯಾರಾದರೂ ಸಾಕಿಕೊಳ್ಳಬಹುದು ಅನ್ನುತ್ತಾಳೆ. ಅವನು ಒಪ್ಪುವುದಿಲ್ಲ. ರಾತ್ರಿ ಮಗುವನ್ನು ಅವಳು ಎತ್ತಿ ಕೊಂಡು ಒಂದು ಕಲ್ಲಿಗೆ ಕಟ್ಟಿ ಬರುತ್ತಾಳೆ. ಬೆಳಿಗ್ಗೆ ಸೆಟಲೈಟ್ಗೆ ಮಗು ಮೈನ್ಸ್ ನಡುವೆ ಇರುವುದು ಗೊತ್ತಾಗಿ ರಕ್ಷಿಸಲು ಹೋಗಿ ತಾನೇ ಬಲಿಯಾಗಿ ಕಾಲು ಕಳೆದುಕೊಳ್ಳುತ್ತಾನೆ. ಮಗುವಿಗೆ ಏನೂ ಆಗದಿರುವುದಿಲ್ಲ. ಅಮೇರಿಕದವರು ಉರಳಿಸಿದ ಸದ್ದಾಂನ ಕೈ ಮತ್ತು ಕೆಂಪು ಮೀನನ್ನು ಹಿಡಿದು ಬರುವ ಹುಡುಗರು ` ಇನ್ನು ಮೇಲೆ ಮೈನ್ಸ್ ಆರಿಸಬೇಕಾಗಿಲ್ಲವಂತೆ ಈ ತರಹದ ಕೈಗಳನ್ನು ಆರಿಸಿತನ್ನಿ ಡಾಲರ್ನಲ್ಲಿ ಕೊಡುತ್ತೇವೆ’ ಅನ್ನುತ್ತಾರೆ.

ಈ ಕಡೆ ಶಿಬಿರದ ಜನರೆಲ್ಲಾ ಖಾಲಿಯಾಗಿದ್ದಾರೆ ರಾತ್ರಿ ಅಣ್ಣ ಮಲಗಿರುವಾಗ ಎದ್ದ ಅಗ್ರೀನ್ ಮಗುವನ್ನು ಕರೆದುಕೊಂಡು ಕೆರೆಯ ಬಳಿ ಬಂದು ಹಗ್ಗಕ್ಕೆ ಕಲ್ಲನ್ನು ಕಟ್ಟಿ ಮಗು ವನ್ನು ಎಸೆಯುತ್ತಾಳೆ. ನಿಧಾನಕ್ಕೆ ಬೆಟ್ಟದ ತುದಿಗೆ ಹೋಗಿ ಶೂಗಳನ್ನು ಬಿಟ್ಟು ಕೆಳಗೆ ಹಾರುತ್ತಾಳೆ. ಅಣ್ಣ ಎದ್ದು ಕೆರೆ ಬಳಿ ಬರುತ್ತಾನೆ ಅಲ್ಲಿ ಆಗಲೇ ಸೆಟಲೈಟ್ ಒದ್ದೆಯಲ್ಲಿ ಕೂತಿರುತ್ತಾನೆ. ಮಗು ತಳದಲ್ಲಿ ಸಿಕ್ಕಿಕೊಂಡಿರುತ್ತೆ. ನಿರಾಶ್ರಿತ ಶಿಬಿರದ ಕಡೆ ಬರುವ ಅಮೇರಿಕಾ ಟ್ಯಾಂಕ್ಗಳು ಮತ್ತು ಅವರನ್ನು ನೋಡಲು ಸೆಟಲೈಟ್ ಬಯಸದೆ ಬೇರೆಡೆ ತಿರುಗಿಕೊಳ್ಳುತ್ತಾನೆ.

ಇದು `ಟರ್ಟಲ್ಸ್ ಕ್ಯನ್ ಫ್ಲೈ’ ಎಂಬ ಕುದರ್ಿಷ್-ಪಷರ್ಿಯನ್ ಭಾಷೆಯ ಚಿತ್ರದ ಕತೆ. ಇದನ್ನು ಮಾಡಿದವನು ಸ್ವತಹ ಕುದರ್ಿಷ್ರಿಗೆ ಸೇರಿದ ಬಹಮನ್ ಗೊಬಾಡಿ. ಇದು ಅವನ ಮೂರನೇ ಚಿತ್ರ. `ಂ ಣಟಜ ಜಿಠಡಿ ಜಡಿಣಟಿಞಜಟಿ ಠಡಿಜ’,  ಮತ್ತು   `ಒಚಿಡಿಠಠಟಿಜಜ ಟಿ ಡಿಚಿಡ’  ಮೊದಲೆರಡ ಚಿತ್ರಗಳು. ಇರಾನ್ನ ಅಬ್ಬಾಸ್ ಕ್ಯರೋಸ್ಟಮಿಗೆ ಸಹಾಯಕನಾಗಿ ಮತ್ತು ನಟನಾಗಿ ಕೆಲಸ ಆರಂಭಿಸಿದ ಇವನು ತನ್ನದೇ ಆದ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವನು. ಈ ಚಿತ್ರ ಪ್ರಥಮವಾಗಿ ಇರಾನ್-ಇರಾಕ್ನ ಸಹ ನಿಮರ್ಾಣದಲ್ಲಿ ತಯಾರಾಗಿದ್ದು 2005ರಲ್ಲಿ ರಿಲೀಸ್ ಆಯ್ತು. ನಲವತ್ತು ವರ್ಷದ ಹತ್ತಿರದ ಇವನು ಈಗೊಂದು ಸಿನಿಮಾ ಮಾಡಿದ್ದಾನೆ. ಕುದರ್ಿಷ್ ಜನರ ದು:ಖ ನೋವುಗಳಿಗೆ ಹೊಸದೊಂದು ವ್ಯಾಖ್ಯಾನ ಬರೆದವನು ಮತ್ತು ಸಿನಿಮಾ ಜಗತ್ತಿಗೆ ಹೊಸದೊಂದು ಲೋಕವನ್ನು ಬೆಟ್ಟ-ಗುಡ್ಡಗಳ ನಡುವೆ ಹುದುಗಿರುವ ಕ್ರೌರ್ಯವನ್ನು ತೋರಿಸಿದವನು. `ಫ್ಯಾಸಿಷ್ಟ್-ಸವರ್ಾಧಿಕಾರಿಗಳ ನಿರ್ಣಯಗಳಿಗೆ ಬಲಿಯಾದ ಪ್ರಪಂಚದ ಎಲ್ಲಾ ಮಕ್ಕಳಿಗೆ..’ ಎಂದು ಗೊಬಾಡಿ ಹೇಳಿಕೊಂಡಿದ್ದಾನೆ.

ಸಿನಿಮಾದ ನಂತರ ಕಾಡುವ ಅಗ್ರೀನ್… ಸೆಟಲೈಟ್.. ಹೆಂಕೊವ್.. ಪಾಷಾ.. ಕುರುಡ ಮಗು.. ಅದರಲ್ಲೂ ಅದನ್ನು ಬಿಟ್ಟು ಹೋಗುವ ಬಗ್ಗೆ ಅವರಿಬ್ಬರು ಮಾತನಾಡುತ್ತಿರುವಾಗ ಅದರ ನಟನೆ.. ಸೈಕಲ್ ಮೇಲೆ ಹೋಗುವಾಗ ಹೆಂಕೋವ್ನ ಭಾವನೆಗಳು, ಪೋಷಕರನ್ನು ಕೊಂದವರ ಬಲತ್ಕಾರಕ್ಕೆ ಹುಟ್ಟಿದ ಮಗುವನ್ನು ಸಾಕುತ್ತಾ ತನ್ನ ಸ್ಥಿತಿಯನ್ನು ಕ್ಷಣಕ್ಷಣಕ್ಕೂ ನೆನೆಯುವ ಆ ಹುಡುಗಿ.. ಟ್ಯಾಂಕರ್ಗಳ ಸೆಲ್ಗಳ ರಾಶಿಗಳ ಬಳಿ ಮಗು ಅಪ್ಪ..ಅಪ್ಪ ಎಂದು ಓಡಾಡುವ ದೃಶ್ಯ… ಹೀಗೆ ಒಂದೇ ಎರಡೇ.. ಗೊಬಾಡಿಯ ಅಂತರಾಳದಿಂದ ಬಂದ ಈ ಸಿನಿಮಾ ಬಹಳ ಕಾಲ ನನ್ನನ್ನು ಕಾಡುತ್ತಿರುವ ಚಿತ್ರ.

                             
       

Advertisements

One response to this post.

  1. ಈ ಚಿತ್ರದಲ್ಲಿ ಗದ್ದೆಗಳಲ್ಲಿ ಲ್ಯಾಂಡ್ ಮೈನ್ ಹುಡುಕುವ ದೃಶ್ಯ ನನಗಿನ್ನೂ ಚೆನ್ನಾಗಿ ನೆನಪಿದೆ. ಯಾವ ಗದ್ದೆಯಲ್ಲಿ ಯಾರಿಗೆ ಕೆಲಸ ಸಿಗುತ್ತದೆ ಎನ್ನುವುದಕ್ಕೆ ಮಕ್ಕಳ ನಡುವೆ ಹೋರಾಟ ಇತ್ಯಾದಿಗಳನ್ನು ನೋಡುತ್ತಿರಬೇಕಾದರೆ ಇದು ಸಧ್ಯ ಸಿನೆಮಾ ಅಲ್ವಾ ಎಂದು ಅನಿಸುತ್ತದಾದರೂ ಆ ಪ್ರದೇಶದಲ್ಲಿ ಇದೇ ಸತ್ಯ ಎಂಬ ಯೋಚನೆ ಬಂದಾಗ ಎದೆ ಝಿಲ್ ಎನಿಸುತ್ತದೆ.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: