ಯುದ್ಧದ ಅಲೆಗಳೊಳಗೆ ಎದ್ದ ವಿಷ

_ಫೀನಿಕ್ಸ್
 

ರಾಶೊಮಾನ್

ಇಡೀ ಜಗತ್ತಿನ ಅತೀ ಶ್ರೇಷ್ಟ ಚಿತ್ರ ನಿದರ್ೆಶಕರ ಪಟ್ಟಿ ಮಾಡಿದರೆ, ಅದರಲ್ಲಿ ಬಹುಶ್ರೇಷ್ಟರ ಸಾಲಿನಲ್ಲಿ ಅಕಿರ ಕುರಸಾವ ನಿಲ್ಲುತ್ತಾನೆ. ಇಡೀ ಜಗತ್ತಿಗೆ ಏಷ್ಯಾದ ಕಲೆ, ಸಂಸ್ಕೃತಿ, ರಾಜಕೀಯ, ಆಧ್ಯಾತ್ಮದ ರಾಯಭಾರಿಯಂತೆಯೂ ಕುರಸಾವ ಕಾಣಿಸಿಕೊಳ್ಳುತ್ತಾನೆ. ಅಷ್ಟು ಆಳವಾದ ತತ್ವಜ್ಞಾನಿಯಂತೆ ಕಾಣಿಸಿಕೊಳ್ಳುವ ಕುರಸಾವ, ಇಡೀ ಏಷ್ಯಾದ ಮೂಲಪ್ರವರ್ತಕರ ನೀರು ಕುಡಿದು ಬೆಳೆದವರು.
ನಾನು ರಾಶೋಮಾನ್ ಚಿತ್ರದ ಬಗ್ಗೆ ಬರೆಯುತ್ತಿರುವಾಗ ಕುರಸಾವನ ಬೇರೆ ಚಿತ್ರಗಳ ಬಗ್ಗೆ ಮಾತು ಅಪ್ರಸ್ತುತವೆನಿಸುತ್ತದೆ. ಚಿತ್ರದಲ್ಲಿ ಕಾಡೊಂದರೊಳಗೆ ಸೈನಿಕನೊಬ್ಬ ಕುದುರೆಯ ಮೇಲೆ ತನ್ನ ಮಡದಿಯನ್ನು ಕೂರಿಸಿಕೊಂಡು ಹೋಗುತ್ತಿರುವ ಚಿತ್ರ ಹಾಗೂ ಅದೇ ಕಾಡಲ್ಲಿ ಮಲಗಿದ್ದ ಡಕಾಯಿತನೊಬ್ಬ ಸೈನಿಕನನ್ನು ಮಣಿಸಿ, ಆತನ ಮಡದಿಯನ್ನು ಅತ್ಯಾಚಾರವೆಸಗಿರುತ್ತಾನೆ. ನಂತರ ಸೈನಿಕನ ಕೊಲೆ ಸಂಭವಿಸಿರುತ್ತದೆ.

ಆತನನ್ನು ಕೊಂದವರಾರು ಎಂದು ಆತನ ಸಾವಿನ ಸುತ್ತ ಹುಟ್ಟಿಕೊಳ್ಳುವ ಘಟನೆಗಳ ಮೂಲಕ ವಿಶ್ಲೇಷಿಸುತ್ತ ಹೋಗುವುದಾದರೆ, ಆ ಸೈನಿಕನ ರೂಪಸಿ ಹೆಂಡತಿ ನ್ಯಾಯಾಲಯದಲ್ಲಿ ತಾನು ಕೊಂದದ್ದು ಎಂದು ಹೇಳುತ್ತಾಳೆ. ಆಕೆ ಕೊಡುವ ಕಾರಣ ಒಬ್ಬ ಡಕಾಯಿತನೊಬ್ಬನಿಂದ ಅವನ ಕಣ್ಣೆದುರೇ ಅತ್ಯಾಚಾರ ನಡೆದದ್ದನ್ನು ಕಂಡು ನನ್ನನ್ನು ಕೀಳಾಗಿ ತಿರಸ್ಕರಿಸಿದ. ಹಾಗಾಗಿ ನನ್ನ ಬಾಕುವಿನಿಂದ ಅವನನ್ನು ಕೊಂದು ಹಾಕಿದೆ ಎನ್ನುತ್ತಾಳೆ. ಡಕಾಯಿತನನ್ನು ವಿಚಾರಣೆಗೊಳಪಡಿಸಲಾಗಿ, ನನ್ನ ಮತ್ತು ಅವನ ಹೋರಾಟದ ನಡುವೆ ಅವನು ಸತ್ತ ಎಂದು ಹೇಳುತ್ತಾನೆ. ಇದರ ನಡುವೆ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಸತ್ತ ಸೈನಿಕನ ದೆವ್ವವೇ ಬರುತ್ತದೆ. ಅದು ಹೇಳುವುದೇನೆಂದರೆ, ಡಕಾಯಿತನಿಂದ ಅತ್ಯಾಚಾರಕ್ಕೊಳಗಾದ ನನ್ನ ಹೆಂಡತಿ ನನ್ನ ಜೊತೆ ಬರಲು ನಿರಾಕರಿಸಿ, ಡಕಾಯಿತನ ಹಿಂದೆ ಹೊರಟು, ಕೊನೆಗೆ ಅವಳು ನನ್ನನ್ನು ಕೊಲ್ಲಲು ಡಕಾಯಿತನಿಗೆ ಹೇಳಿದಳು. ಹಾಗಾಗಿ ಅವನಿಂದ ಕೊಲೆಯಾಗಲು ನನಗಿಷ್ಟವಿಲ್ಲದ ಕಾರಣ ನಾನು ಆತ್ಮಹತ್ಯೆ ಮಾಡಿಕೊಂಡೆ ಎನ್ನುತ್ತಾನೆ. ಇದಲ್ಲದೆ ಹಾಳುಗುಡಿಯೊಂದರೊಳಗೆ ಇದೆಲ್ಲವನ್ನೂ ಕಂಡೆನೆಂದು ಹೇಳುವ ಸಾಮಾನ್ಯ ಜನರಲ್ಲಿ ಒಬ್ಬನಾದ ಮರ ಕಡಿಯುವವನೊಬ್ಬ ಹೇಳುವ ಮಾತು ಹೀಗಿದೆ: ಡಕಾಯಿತ ಹೋರಾಟದಲ್ಲಿ ಆ ಸೈನಿಕನನ್ನು ಕೊಂದನೆಂದು ಹೇಳುತ್ತಾನೆ. ಇದೇ ಸತ್ಯವೆಂದು ಹೇಳುತ್ತಾನೆ. ಆ ಮಾತಿಗೆ, ಹಾಗಾದರೆ ಅಲ್ಲಿಯೇ ಇದ್ದ ವಜ್ರಖಚಿತ ಖಡ್ಗ ಏನಾಯಿತು ಎಂಬ ದಾರಿಹೋಕನೊಬ್ಬನ ಪ್ರಶ್ನೆಗೆ ಮರ ಕಡಿಯುವವ ಬೆಚ್ಚಿ ಬೀಳುತ್ತಾನೆ. ಆ ವಿಷಯ ನನಗೆ ಗೊತ್ತಿಲ್ಲವೆಂದು ಹೇಳುತ್ತಾನೆ.
ಇವಿಷ್ಟು ಘಟನೆ ಒಂದು ಕಾಡೊಳಗೆ ನಡೆಯುತ್ತದೆ ಎನ್ನುವುದಂತೂ ಸತ್ಯವಾದರೂ ಸೈನಿಕನನ್ನು ಕೊಂದವರಾರು ಎಂಬ ಸತ್ಯ ಅಸ್ಪಷ್ಟವಾಗಿಯೇ ಉಳಿಯುತ್ತದೆ. ಒಂದು ಅತ್ಯಾಚಾರದ ಸುತ್ತ ಬೆಳೆಯಬಹುದಾದ ಈ ಕತೆ ಅದರ ಬದಲು ಸೈನಿಕನ ಸಾವಿನ ಸುತ್ತ ಸುತ್ತುತ್ತದೆ. ಇದು ಒಂದು ಮಾನವೀಯ ನೆಲೆಯ ಆತ್ಯಂತಿಕತೆ ಎಂದು ಹೇಳಿದರೂ ತಪ್ಪಾಗಲಾರದು. ವಜ್ರಖಚಿತ ಖಡ್ಗಕ್ಕಾಗಿ ಈ ಕೊಲೆ ನಡೆದಿರಬಹುದು ಎಂಬ ಅನುಮಾನ ಸುಳಿಯದಂತೆ ಸಾಕ್ಷೀದಾರರು ನಾವೇ ಕೊಂದಿದ್ದೆಂದು ಬೇರೆಬೇರೆ ಕತೆಗಳನ್ನು ಕಟ್ಟಿ ನಂಬಿಸಿಬಿಡಬಹುದಾದರೆ, ರಾಶೋಮಾನ್ ಚಿತ್ರ ಒಂದು ಇಂಡಿಯಾದ ಹಳ್ಳಿಯೊಂದರ ಸಾಮಾಜಿಕ ತೆಳು ಕತೆಯೊಂದರ ಛಾಯೆಯಂತೆ ಬದಲಾಗಿ ಪೇಲವವಾಗಿ ಕಾಣುವ ಸಾಧ್ಯತೆಯಿದೆ. ಅಕಿರ ಕುರಸಾವನ ಈ ಅಂತ್ಯವಿರದ ಶೋಧನೆಗೆ ಉತ್ತರ ಹುಡುಕಬೇಕಾದಲ್ಲಿ, ಅಂದಿನ ಇತಿಹಾಸಕ್ಕೆ ನಾವು ಮತ್ತೆ ಹಿಂತಿರುಗಿ ಅಂದಿನ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.
ಜಪಾನ್ ಒಂದು ಬೌದ್ಧ ಧರ್ಮ ಅಳವಡಿಸಿಕೊಂಡ ದೇಶ. ಆ ಕಾರಣಕ್ಕೆ ಈ ಚಿತ್ರದಲ್ಲೂ ಝéೆನ್ಗೆ ಹತ್ತಿರವಾದ ಪರಿಕಲ್ಪನೆ ಚಿತ್ರವನ್ನು ಕಟ್ಟುವಂಥ ಮತ್ತು ಗುಟ್ಟು ಉಳಿಸಿಕೊಳ್ಳುವ ಅಂತದಲ್ಲೂ ಕಂಡುಬರುತ್ತದೆ. ಆದರೆ ಆ ತಂತ್ರದ ಮೂಲಕ ಇಡೀ ಚಿತ್ರ ಹೇಳಲು ಹೊರಟಿರುವ ಆ ಚಿತ್ರದಾಚೆ ಇರುವ ಸತ್ಯ ಇಡೀ ಜಪಾನ್ನ ಅಂದಿನ ಇತಿಹಾಸದ ಭೀಕರತೆಯನ್ನು ಬಿಚ್ಚಿಡಲು ಪ್ರಯತ್ನಿಸುತ್ತದೆ. ಈ ಚಿತ್ರ ಬಂದಾಗ ಆಗಿನ್ನೂ ಎರಡನೇ ಮಹಾಯುದ್ಧ ಮುಗಿದಿತ್ತು. ಆ ಯುದ್ಧದಲ್ಲಿ ಹೀನಾಯವಾಗಿ ಸೋತ ಜಪಾನ್ನ ಇಡಿಯಾಗಿ ರಾಶೋಮಾನ್ ಕನ್ನಡಿಯಂತೆ ಹಿಡಿದಿದೆ. ಸೌಂದರ್ಯದ ಮೂರ್ಖತನ, ಅತೀ ಆಸೆಬುರುಕುತನ ಮತ್ತು ಬಲ ಹಾಗೂ ಎಲ್ಲ ಗೊತ್ತಿದೆ ಎನ್ನುವ ಪೆದ್ದುತನ ಜಪಾನ್ನ್ನು ಆಳ ಪ್ರಪಾತಕ್ಕೆ ತುಳಿದು ಹಾಕಿತ್ತು. ಒಬ್ಬ ಸವರ್ಾಧಿಕಾರಿಗೂ ಈ ಮೇಲಿನ ನಾಲ್ಕು ಗುಣಗಳೇ ಅವನನ್ನು ರೂಪಿಸಿರುತ್ತದೆ.


ಇತಿಹಾಸದ ಸತ್ಯವನ್ನು ಒಗಟಿನಂತೆ ಕಟ್ಟಿಕೊಡುವ ಅಕಿರ ಕುರಸಾವ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾನೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: