ಅಲ್ಲಿಂದ ಶುರುವಾದ ರೆಹೆಮಾನ್ ನಂಟು…

ಕೇಶವ ಕುಲಕರ್ಣಿ ಅವರ ‘ತೊದಲು ಮಾತು’ ಕನ್ನಡದ ಪ್ರೀತಿ ಗೆದ್ದ ಬ್ಲಾಗ್ ಗಳಲ್ಲಿ ಒಂದು. ಈ ಬ್ಲಾಗ್ ನಲ್ಲಿ ಎ ಆರ್ ರೆಹಮಾನ್ ಅವರನ್ನು ನೆನಪಿಸಿಕೊಂಡಿದ್ದಾರೆ. ಅದಲ್ಲದೆ ರೆಹಮಾನ್ ತಮ್ಮ ಅಂತರಂಗವನ್ನು ಬಿಚ್ಚಿಟ್ಟಿರುವ ಒಂದು ಅಪರೂಪದ ಸಂದರ್ಶನದತ್ತ ಗಮನ ಸೆಳೆದಿದ್ದಾರೆ.
ಮಣಿರತ್ನಂನ “ರೋಜಾ” ಬಂದಾಗ ನಾನು ಹುಬ್ಬಳ್ಳಿಯಲ್ಲಿದ್ದೆ. ತೆಲುಗು ತಮಿಳು ಅರ್ಥವಾಗದಿದ್ದರೂ ಮಣಿರತ್ನಂನ “ಗೀತಾಂಜಲಿ”, “ಅಂಜಲಿ” ಮತ್ತು “ದಳಪತಿ”ಯನ್ನು ನಾಕೈದು ಬಾರಿ ನೋಡಿ, ಹಾಡುಗಳನ್ನು ಸಾವಿರಾರು ಸಲ ಕೇಳಿ ಇಳೆಯರಾಜಾನ ಭಕ್ತರಾಗಿಬಿಟ್ಟಿದ್ದೆವು. ಅಂಥ ಸಮಯದಲ್ಲಿ “ರೋಜಾ” ದ ಪೋಸ್ಟರಿನಲ್ಲಿ “ಎ ಆರ್ ರೆಹೆಮಾನ್ ಸಂಗೀತ” ಎಂದು ನೋಡಿದಾಗ ಮಣಿರತ್ನಂ ಮೇಲೆ ಕೆಂಡಾಮಂಡಲ ಸಿಟ್ಟು ಬಂದಿತ್ತು. ಅದೇ ಸಿಟ್ಟಿನಲ್ಲಿ ಕ್ಯಾಸೆಟ್ (ಆಗ ಸಿಡಿ ಎಲ್ಲಿತ್ತು?) ಕೊಂಡುಕೊಳ್ಳಲಿಲ್ಲ. ಸಿನಿಮಾ ನೋಡಲು ಹೋದೆವು. “ಚಿನ್ನ ಚಿನ್ನ ಆಸೈ” ಹಾಡಿನ ಆರಂಭದ ಹಿನ್ನೆಲೆ, ಸೂರ್ಯ ಉದಯಿಸುವ ದೃಶ್ಯ — ಒಂದೇ ಕ್ಷಣದಲ್ಲಿ ಎ ಆರ್ ರೆಹೆಮಾನ್ ಆಪ್ತನಾದ. “ಪುದು ವಿಳ್ಳೈ…” ಹಾಡು ಬರುವಷ್ಟರಲ್ಲಿ ಪಾಗಲ್ ಆಗಿ ಹೋಗಿಬಿಟ್ಟೆ. ಸಿನಿಮಾ ಮುಗಿಸಿ ಹೊರಬಂದಿದ್ದೇ, ಮಾಡಿದ ಮೊದಲ ಕೆಲಸ “ರೋಜಾ” ಚಿತ್ರದ ತಮಿಳು, ತೆಲುಗು ಮತ್ತು ಹಿಂದಿ..ಮೂರೂ ಕ್ಯಾಸೆಟ್ ಖರೀದಿಸಿದ್ದು!
ಅಲ್ಲಿಂದ ಶುರುವಾದ ರೆಹೆಮಾನ್ ನಂಟು ಇನ್ನೂ ಮುಗಿದಿಲ್ಲ. ಮೊದಲಿನ ಹುರುಪು ನನ್ನಲ್ಲೂ ಉಳಿದಿಲ್ಲ, ರೆಹೆಮಾನ್ ಸಂಗೀತದಲ್ಲೂ ಇಲ್ಲ ಎನ್ನುವುದು ಬೇರೆ ಮಾತು. ಇದೆಲ್ಲಾ ಇವತ್ತೇಕೆ ನೆನಪಾಯಿತು ಎಂದರೆ, ಇವತ್ತು ಅವನ ಸಂದರ್ಶನ ಓದಿದೆ, ತುಂಬ ಸೊಗಸಾಗಿದೆ, ಬಿಡುವಿದ್ದರೆ ನೀವೂ ಓದಿ, ಇಲ್ಲಿ ಕೊಂಡಿ ಇದೆ:

 AR Rahman: The Rolling Stone Interview

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: