ಬೇರುಗಳತ್ತ…

-ಅಂಚೆಮನೆ ರಘು

ನಾಗತಿಹಳ್ಳಿ ರಮೇಶ್ ಸಾಹಿತ್ಯ ಪ್ರೇಮಿ. ಬದುಕಿನ ಹುಡುಕಾಟದ ಹಂಬಲದ ಮನುಷ್ಯ. ಸಂಘ ಜೀವಿ ರಮೇಶ್ ಸಮಯ ಸಿಕ್ಕಾಗೆಲ್ಲಾ ಸ್ನೇಹಿತರೊಂದಿಗೆ ಅಲೆಮಾರಿಯಂತೆ  ಊರೂರು ಸುತ್ತುವ ವ್ಯಕ್ತಿ. ಹೀಗೆ ಊರೂರು ಸುತ್ತುತ್ತ ಅದೃಶ್ಯವಾಗುವ ರಮೇಶ್ ಬಳಗ, ಅಲೆದಾಟದಲ್ಲಿ ಕಣ್ಣಿಗೆ ಕಾಣುವ ವಸ್ತು ಅಥವಾ ಘಟನೆಗಳ ಬಗ್ಗೆ ವಿಶೇಷ ಕುತೂಹಲ. ಇದಕ್ಕೆಲ್ಲಾ ದೃಶ್ಯ ಸ್ವರೂಪ ನೀಡಿದರೆ ಹೇಗೆ ಎಂಬ ಅಲೋಚನೆ ಬಂದಿದ್ದೇ ತಡ ಎನ್ 2 ಲರ್ನಸ್ ಅಂಡ್ ಕ್ರಿಯೇಟರ್ಸ ಎಂಬ ಒಂದು ಟೀಂ ರೂಪಿಸಿದರು.

ಮನಸ್ಸಿನ ಭಾವನೆಗಳಿಗೆ ದೃಶ್ಯ ನೀಡಿ ಮನಸ್ಸಿಗೆ ನಾಟುವಂತೆ ಕ್ರಿಯೇಟಿವ್ ಆಗಿ ಸೃಷ್ಟಿಸಲು ಪ್ರಯತ್ನ ಮಾಡುತ್ತಲೇ, ಊರೂರು ಸುತ್ತುವಾಗ ಕಣ್ಣಿಗೆ ಕಂಡಿದ್ದೆಲ್ಲಾ ಮನಸ್ಸಿಗೆ ಇಷ್ಟವಾಯಿತು ಎಂದು ಹೇಳಿಕೊಂಡು,  ಕ್ಯಾಮರಾದಲ್ಲಿ ಸೆರೆ ಹಿಡಿದರು. ಎಲ್ಲರಿಗೂ ಇಷ್ಟವಾಗುವಂತೆ ಒಂದು ರೂಪ ನೀಡುವ ತುಡಿತದಲ್ಲಿ ಎಡಿಟ್ ಮಾಡಲು ನಾಗತಿಹಳ್ಳಿ ರಮೇಶ್ ಬಳಗ ಮುಂದಾಯಿತು.

ಹೀಗೆ ಎಡಿಟ್ ನಂತರ ಮನಸ್ಸಿನ ಭಾವನೆಗಳನ್ನು ಹೇಳುವ ತುಣುಕು ಚಿತ್ರಗಳಾಗಿ ಸಿದ್ಧಗೊಂಡದ್ದು- ಶಸ್ತ್ರಗಾರ, ಉಸಿರು, ಚಕ್ರ, ಭೂಮಿ -ಆಕಾಶ ಹೀಗೆ ವಿವಿಧ ಚಿತ್ರಗಳು ಹೀಗೆ ಅಂತಿಮ ರೂಪ ಪಡೆದವು. ಒಂದು ನಿಮಿಷದಿಂದ ಹಿಡಿದು 10 ನಿಮಿಷದವರೆಗಿನ ತುಣಕು ಚಿತ್ರಗಳು ಸಾಕ್ಷ್ಯಚಿತ್ರಗಳಿಗೆ ಹೂಸ ಭಾಷ್ಯ ಬರದಂತೆ ಮೈದಾಳಿದವು . ದೃಶ್ಯಕ್ಕೆ ತಕ್ಕಂತೆ ಮೆದುವಾದ ಸಂಗೀತದ ಹಿಮ್ಮೇಳನ ತುಣುಕು ಚತ್ರಗಳ ಗಮ್ಯತೆಯನ್ನು ಹೆಚ್ಚಿಸಿತು.

ಈ ಚಿತ್ರಗಳನ್ನು ನೋಡಿದರೆ, ಇವು ಕೇವಲ ಭಾವನೆಗಳನ್ನಷ್ಟೇ ಹೇಳುವುದಿಲ್ಲ. ಬದಲಾಗಿ ಯಾವುದೊ  ಥೀಮ್ ಗಳ ಹುಡುಕಾಟಕ್ಕಾಗಿ ಹೊರಟಂತಿದೆ . ಬಲೂನ್ ಮಾರಾಟಗಾರರ ಬಗೆಗಿನ ಉಸಿರು ಎನ್ನುವ ತುಣುಕು ಚಿತ್ರ ಇಂತಹದ್ದನ್ನೇ ಪ್ರತಿಧ್ವನಿಸುತ್ತದೆ. ಶಸ್ತ್ರಗಾರ ಎನ್ನುವ ತುಣುಕು ಚಿತ್ರ ಯುದ್ದದ ಪರಿಣಾಮಗಳು, ಅರಾಜಕತೆ ಮನಸ್ಸಿಗೆ ನಾಟುತ್ತದೆ. ಎನ್ 2 ಲರ್ನಸ್ ಅಂಡ್ ಕ್ರಿಯೇಟರ್ಸ್ ತಂಡದಲ್ಲಿ ನಾಗತಿಹಳ್ಳಿ ರಮೇಶ್ , ಕುಮಾರ್ , ದ್ರಾವಿಡ ರವಿ ಸೇರಿದಂತೆ 8 ರಿಂದ 10 ಜನರ ತಂಡ  ಕನ್ನಡದಲ್ಲೊಂದು ಇಂತಹ ಸಾಹಸಕ್ಕೆ ಕೈ ಹಾಕಿರುವುದು ಮೆಚ್ಚುಗೆಯ ಸಂಗತಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: