ಪ್ರಶಸ್ತಿ ಪರಸಂಗ…

aa-dinagalu2

 

 

 

 

 

 

 

 

 

 

  ಈ ಬಾರಿಯೂ ರಾಜ್ಯ ಚಲನಚಿತ್ರ ಪ್ರಶಸ್ತಿ ವಿವಾದದಿಂದ ಹೊರತಾಗಿಲ್ಲ. ಮಾತಾಡ್ ಮಾತಾಡ್ ಮಲ್ಲಿಗೆ ಚಿತ್ರದ ನಿರ್ಮಾಪಕ ಕೆ. ಮಂಜು ಹಾಗೂ ಆ ದಿನಗಳು ಚಿತ್ರದ ಸಂಭಾಷಣೆ ಅಗ್ನಿ ಶ್ರೀಧರ್, ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿಗಳನ್ನು ಈಗಾಗಲೇ ತಿರಸ್ಕರಿಸಿದ್ದಾರೆ. ಕನ್ನಡ ಪ್ರಭದೊಂದಿಗೆ ಮಾತನಾಡುತ್ತ ಶ್ರೀಧರ್, “ಆ ದಿನಗಳು ಚಿತ್ರಕ್ಕೆ ಅತ್ಯುತ್ತ ಮ ಪೋಷಕ ನಟ, ಸಂಕಲನ ಪ್ರಶಸ್ತಿ, ಸೇರಿದಂತೆ ಇನ್ನೂ ಕೆಲವು ಪ್ರಶಸ್ತಿಗಳು ಸಿಗಬಹುದು ಎಂದು ನಿರೀಕ್ಷಿಸಿದ್ದೆ. ಮೂರು ಅತ್ಯುತ್ತಮ ಚಿತ್ರಗಳ ಪೈಕಿ ಒಂದಾಗಬಹುದು ಎಂದು ಕಾದಿದ್ದೆ. ಆದರೆ ನಿರೀಕ್ಷೆ ಸುಳ್ಳಾಗಿದೆ. ಅರ್ಹರನ್ನು ಕಡೆಗಣಿಸಿ ಯಾರಿಗೋ ಪ್ರಶಸ್ತಿ ನೀಡಲಾಗಿದೆ. ಸಮಾಧಾನಕ್ಕಾಗಿ ನನಗೆ ಅತ್ಯುತ್ತಮ ಸಂಭಾಷಣೆಕಾರ ಪ್ರಶಸ್ತಿ ನೀಡಿದ್ದಾರೆ. ನನಗೆ ಪ್ರಶಸ್ತಿ ಬೇಡ . ಅದಲ್ಲೆವನ್ನು ಮೀರಿ ನಾನು ಬೆಳೆದಿದ್ದೇನೆ. ಆದರೆ ಬೆಳೆಯುತ್ತಿರುವವರಿಗೆ, ಅರ್ಹರಾದವರಿಗೆ ಪ್ರಶ್ತಿಸಿ ಸಿಗಬೇಕಿತ್ತು.ಇಷ್ಟಕ್ಕೂ ಪ್ರಶಸ್ತಿ ನೀಡಿರುವ ಮಾನದಂಡ ಏನು. ನನ್ನ ಚಿತ್ರಕ್ಕಿಂತ ಒಳ್ಳೆಯ ಚಿತ್ರಳಿಗೆ ಅಥವ ಅರ್ಹರಾದವರಿಗೆ ಪ್ರಶಸ್ತಿ ಸಂದಿದ್ದರೆ, ನನಗೆ ಬೇಸರವಾಗುತ್ತಿರಲಿಲ್ಲ. ಆದರೆ ಅನರ್ಹರಿಗೆ ಪ್ರಶಸ್ತಿ ನೀಡಿದ್ದು, ನಿಜವಾಗಿಯೂ ಬೇಸರದ ಸಂಗತಿ” ಎಂದಿದ್ದಾರೆ.

ಅಗ್ನಿ ಶ್ರೀಧರ್ ಅನಿಸಿಕೆಯನ್ನು ಮ್ಯಾಜಿಕ್ ಕಾರ್ಪೆಟ್ ನಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಿದ್ದೇವೆ. ನಿಮ್ಮ ಅನಿಸಿಕೆಗಳನ್ನು ನಮಗೆ ಮೇಲ್ ಮಾಡಿ. ಚರ್ಚೆಯಲ್ಲಿ ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. ನಿಮ್ಮ ಅನಿಸಿಕೆ ಪ್ರಾಮಾಣಿಕ, ಸತ್ವಯುತ ಹಾಗೂ ಆರೋಗ್ಯಕರವಾಗಿರಲಿ. ಯಾವುದೇ ಕಾರಣಕ್ಕೂ ಸಭ್ಯತೆಯ ಚೌಕಟ್ಟನ್ನು ಮೀರಿ ಅಥವಾ ವೈಯುಕ್ತಿಕ ಮಟ್ಟದಲ್ಲಿ ಹೋಗುವುದು ಬೇಡ. ಇಂದಿನಿಂದ ಚರ್ಚೆ ಆರಂಭ

Advertisements

7 responses to this post.

  1. ಪ್ರಶಸ್ತಿಗಳಿಗಾಗಿ ವಿವಾದಗಳೋ ಅಥವಾ ವಿವಾದಗಳಿಗಾಗಿ ಪ್ರಶಸ್ತಿಗಳೋ ತಿಳಿಯುತ್ತಿಲ್ಲ.

    ಪ್ರತಿವರ್ಷ ಪ್ರಶಸ್ತಿ ಪಟ್ಟಿ ಬಿಡುಗಡೆಯಾದ ನಂತರ ವಿವಾದಗಳು ಹುಟ್ಟದೆ ಇದ್ದರೆ ಜನರಿಗೆ ಪ್ರಶಸ್ತಿಗಳು ಅನೌನ್ಸಾದ ಬಗ್ಗೆ ಗೊತ್ತಾಗುವುದೆಯಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಚಿತ್ರ ಅತ್ಯುತ್ತಮ ಮತ್ತು ಅದು ಎಲ್ಲ ವಿಭಾಗಗಳಲ್ಲೂ ಪ್ರಶಸ್ತಿಗೆ ಯೋಗ್ಯವಾಗಿದೆ ಅನಿಸುವುದು ಸಹಜ “ಹೆತ್ತವರಿಗೆ ಹೆಗ್ಗಣ ಮುದ್ದು”, ನೀವು ಪ್ರಶಸ್ತಿಗಳನ್ನು ವಿವಾದಕ್ಕೆ ಎಡೆಮಾಡುವುದರಿಂದ ಆ ಪ್ರಶಸ್ತಿಯನ್ನು ಯೋಗ್ಯತೆಯಿಂದ ಪಡೆದವನು ಕೂಡಾ ತನ್ನ ಯೋಗ್ಯತೆಯನ್ನು ಅವಮಾನಿಸಿಕೊಳ್ಳುತ್ತಾನೆ.

    ಇನ್ನು ಅರ್ಹ ಮತ್ತು ಅನರ್ಹತೆಯ ಮೂಲ ಪರಿಮಾಣಗಳೆನು ಎಂಬುದು ಇಂದಿಗೂ ಅಷ್ಟೆ ವಿವಾದಸ್ಪದ ಪ್ರಶ್ನೆ, ಹೀಗಾಗಿ ಇಲ್ಲಿ ವ್ಯಕ್ತಿ ನಿರ್ಧಾರಕ್ಕಿಂತ, ಹಲವು ವ್ಯಕ್ತಿಗಳ ಗುಂಪು ನಿರ್ಧರಿಸಿದ್ದು ಹೆಚ್ಚು ಮೌಲಿಕವಾಗುತ್ತದೆ.

    -ಶೆಟ್ಟರು

    ಉತ್ತರ

  2. ಖ೦ಡಿತವಾಗಿ ಆ ದಿನಗಳು ಸಿನಿಮಾಕ್ಕೆ ಹೆಚ್ಚಿನ ಪ್ರಶಸ್ತಿಗಳು ಬರಬೇಕಾಗಿತ್ತು. ಆ ವರ್ಷದ ಅತ್ಯುತ್ತಮ ಚಿತ್ರ ಇದೊ೦ದೆ.

    ಉತ್ತರ

  3. The Government should not use the public money for those awards which were in no connected to the common people.The so called award winning films were so boring that film critics could niot sit more than 30 minutes to witness the movies. When films directed by so called intellectuals could not reach the ordinary people why should peoples money be used to give them awards. Let the Government fix a minimum 50 days run for any film before considering it for any award. If any film does not fit in to such parameter, there is no need to give awards at all for the year under consideration. Government should not bow to cultural terrorism of people like Bargur, Kasarvally.

    ಉತ್ತರ

  4. Discussion is in good spirit.

    ಉತ್ತರ

  5. Posted by ಪರಮೇಶ್ವರ ಗುರುಸ್ವಾಮಿ on ಜನವರಿ 14, 2009 at 11:31 ಅಪರಾಹ್ನ

    ಸಾಮಾನ್ಯವಾಗಿ ನನ್ನ ಸಂಪರ್ಕಕಕ್ಕೆ ಬಂಧವರಿಗೆಲ್ಲ ಚಿತ್ರವೊಂದನ್ನು ಆಭ್ಯಾಸ ಮಾಡುವಾಗ (ಆ ಲೆಕ್ಕಕ್ಕೆ ಯಾವುದೇ ಕಲಾಕೃತಿಯಾಗಬಹುದು)ಅದು ಗಳಿಸಿರುವ ಪ್ರಶಸ್ತಿಗಳು ಮುಖ್ಯವೇ ಅಲ್ಲ, ಯಾಕೆಂದರೆ ಮನುಷ್ಯ ಮಾತ್ರದವರು ಕೊಡುವ ಪ್ರಶಸ್ತಿಗಳು ಅಳತೆಗೋಲಾಗರವು, ಆ ಕೃತಿ ಮುಖ್ಯ ಎಂದು ತಲೆ ತಿನ್ನುತ್ತಿರುತ್ತೇನೆ.

    ಕರ್ನಾಟಕದಲ್ಲಿ ನಿರ್ಮಾಣವಾದ ಮೊದಲ ಎರಡು ಚಿತ್ರಗಳಾದ ’ವಸಂತಸೇ’ ಮತ್ತು ’ರಾಜಹಂಸ’ ಚಿತ್ರಗಳು ಎರಡು ಮುಖ್ಯ ಧಾರೆಗಳನ್ನು ಹುಟ್ಟು ಹಾಕಿದವು. ಆಮದು ಸಲಕರಣೆ ಮತ್ತು ತಂತ್ರಜ್ಞಾನದೊಂದಿಗೆ ಸ್ಥಳೀಯ ಪ್ರತಿಭೆಗಳು ಮುಖಾಮುಖಿಯಾಗುವ ಪ್ರಕ್ರಿಯೆಗೆ ವಸಂತಸೇನ ಉದಾಹರಣೆಯಾದರೆ apingಗೆ ರಾಜಹಂಸ ಉದಾಹರಣೆಯಾಗಿದೆ. ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳು ಬರುವವರೆಗೂ ಈ ಎರಡೂ ಧಾರೆಯವರು ಚಿತ್ರ ತಯಾರಿಕೆಯ ತಾಂತ್ರಿಕ ಅಂಶಗಳನ್ನು ಕಡೆಗಣಿಸಿರಲಿಲ್ಲ.

    ಹೊಸ ಅಲೆಯವರು ಕೇವಲ ವಸ್ತುವಿನ ಮೂಲಕ, ಆಮದು ಮತ್ತು ಎರವಲು ನಿರೂಪಣಾ ಶೈಲಿಗಳನ್ನು ಬಳಸಿಕೊಂಡು began catering only to international juries. ಗೊತ್ತಿದೆಯಲ್ಲ. ಪ್ರಶಸ್ತಿಗಳು ಅವುಗಳದೇ ಆದ ಹಿತಾಸಕ್ತಿಗಳನ್ನೂ ರಾಜಕೀಯವನ್ನೂ ಲಾಬಿಗಳನ್ನೂ ಹೊಂದಿರುತ್ತವೆ. ಶಾಂತಿಗಾಗಿ ಗಾಂಧೀಜಿಯಂಥವರಿಗೆ ಸಾಹಿತ್ಯದಲ್ಲಿ ಟಾಲ್ಸ್ ಟಾಯ್ ರವರಂಥವರಿಗೆ ನೊಬಲ್ ಸಿಗದಿರುವುದಕ್ಕೆ ಇಂಥವೇ ಕಾರಣಗಳು.

    ನಾವು ನೋಡುವ ಬಹುತೇಕ ಅಂತಾರಾಷ್ಟ್ರೀಯ ಚಲನಚಿತ್ರ ದಿಗ್ಗಜಗಳ ಚಿತ್ರಗಳು ಮೊದಲು ಅವರವರ ಭಾಷೆ ದೇಶಗಳಲ್ಲಿ ಜನಪ್ರಿಯರೇ ಆದವರ ಚಿತ್ರಗಳು. ಬಹುಶಃ ನಮ್ಮ ಕನ್ನಡದಲ್ಲಿ ಮಾತ್ರ ಇಲ್ಲಿನ ಜನರು ನೋಡದಿದ್ದರೂ ಅಂತಾರಾಷ್ಟ್ರೀಯ ಮನ್ನಣೆ ಗಳಿಸುತ್ತವೆ.

    ಈ ದೃಷ್ಟಿಕೋನದಿಂದ ಎನ್.ಲಕ್ಷ್ಮೀನಾರಾಯಣರ ಚಿತ್ರಗಳ ನಂತರ ಬಂದಿರುವ ಕನ್ನಡದ ಅರ್ಥಪೂರ್ಣ ಚಿತ್ರ, ’ಆ ದಿನಗಳು’. ಈ ದಿಕ್ಕಿನಲ್ಲಿ ’ಆ ದಿನಗಳು’ ಸಂಪೂರ್ಣ ಯಶಸ್ವಿಯಾಗದಿದ್ದರೂ ದೃಢ ಹೆಜ್ಜೆಯ್ನನಂತೂ ಹಾಕಿದೆ.

    ಉತ್ತರ

  6. aa dinagalu nijkku olleya samvedhanaasheela cenema. ee cenema prashasti aaykeyalliyu cinimeeya manastitigalu kelasa maadiruvudu vishaadha. aa dinagalu cenimavannu prashastige aasyke maadadiruvudu aayke samiti tamage taave maadikonda avamaanadantide.

    ಉತ್ತರ

  7. ನಮ್ಮಲ್ಲಿ ಪ್ರಶಸ್ತಿ ಚಿತ್ರಗಳನ್ನು ಕೆಲವೇ ಸಿನಮಾ ಮಂದಿ,ಪತ್ರಕರ್ತರು ಆಸಕ್ತರು ನೋಡುವ ವಾಡಿಕೆ ತಪ್ಪಬೇಕು.ಆ ದಿನಗಳು ಚಿತ್ರ ಎಲ್ಲಾ ಕೋನಗಳಿಂತ ಭಿನ್ನ.ಸಾಮಾನ್ಯನ ಮನಸ್ಸಿನಲ್ಲೂ ಸಿಹಿ ಗಾಳಿಯ ಸಹಿ ಹಾಕಿದೆ.ಹಾಗಿ ಪ್ರಶಸ್ತಿ ನಿರೀಕ್ಷೆ ತಪ್ಪೇನು ಅಲ್ಲ.

    ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: