ಗೋಲ್ಡನ್ ಗ್ಲೋಬ್ ಪ್ರಶಸ್ತಿ: ಹಾಗಂದರೇನು?

ಮುಂಬೈ ಸ್ಲಂಗಳಲ್ಲಿ ಚಿತ್ರೀಕರಣಗೊಂಡ ಸ್ಲಮ್ ಡಾಗ್ ಮಿಲೇನಿಯರ್ ಸಿನಿಮಾ ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳನ್ನು ಗೆದ್ದುಕೊಂಡಿದೆ. ಎ ಆರ್ ರೆಹಮಾನ್ ಅವರ ಸಂಗೀತಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ದಕ್ಕಿದೆ. ಇದು ಭಾರತೀಯ ಚಿತ್ರರಂಗಕ್ಕೆ ಸ್ಪೂರ್ತಿ ನೀಡಿದೆ. ಈ ಹಿನ್ನೆಲೆಯಲ್ಲಿ ಗೋಲ್ಡಲ್ ಗ್ಲೋಬ್ ಎಂದರೆ  ಏನು, ಅದಕ್ಕೆ ಯಾಕಿಷ್ಟು ಮಹತ್ವ ಎಂಬ ಕುರಿತ ಮಾಹಿತಿ ಇಲ್ಲಿದೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು

golden-globe_0114051ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ ಪ್ರತಿವರ್ಷ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ನೀಡುತ್ತದೆ. ಇದಕ್ಕಾಗಿ ಮನೋಂಜನಾ ಉದ್ಯಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ದೇಶಿ ಹಾಗೂ ವಿದೇಶಿ ಚಲನಚಿತ್ರಗಳನ್ನು ಪರಿಣಗಣಿಸಲಾಗುತ್ತದೆ.

ಆರಂಭ ಹೇಗೆ, ಯಾಕೆ..

ಮನೋರಂಜನಾ ಕ್ಷೇತ್ರದಲ್ಲಿ ನಿಖರವಾಗಿ ಸಮರ್ಥವಾಗಿ ವರದಿಗಾರಿಗೆ ಮಾಡಲು ಇಚ್ಛಿಸುತ್ತಿದ್ದ ಪತ್ರಕರ್ತರ ಗುಂಪು, ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್ ನ ಹುಟ್ಟಿಗೆ ಕಾರಣ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜನ ಮನೋರಂಜನೆ ಹಾಗೂ ಥ್ರಿಲ್ ಆಧಾರಿತ ಚಿತ್ರಗಳನ್ನು ಹೆಚ್ಚು ಹೆಚ್ಚು ನೋಡಲು ಬಯಸುತ್ತಿದ್ದರು. ಜನರ ಈ ಬೇಡಿಕೆಯನ್ನು ಪೂರೈಸಲು ಆರ್ಸನ್ ವೆಲ್ಲೀಸ್, ಪ್ರೆಸ್ಟನ್ ಸ್ಟರ್ಗೇಸ್, ಮೈಕೆಲ್ ಕರ್ಟೀಜ್ ಮುಂತಾದ ನಿರ್ದೇಶಕರು ಪ್ರಯತ್ನ ನಡೆಸಿದ್ದರು. ಸಂವಹನ ಅತ್ಯಂತ ಕಠಿಣವಾಗಿದ್ದ ಸನ್ನಿವೇಶದಲ್ಲಿ ಲಾಸ್ ಏಂಜಲೀಸ್ ನಲ್ಲಿ ಕೆಲಸ ಮಾಡುತ್ತಿದ್ದ ಕೆಲ ವಿದೇಶಿ ಪತ್ರಕರ್ತರು ಮಾಹಿತಿ ಹಾಗೂ ಸಂಪರ್ಕಗಳ ವಿನಿಮಯಕ್ಕೆ ಮುಂದಾದರು.

1943 ರಲ್ಲಿ ಈ ಪತ್ರಕರ್ತರು ಹಾಗೂ ಬ್ರಿಟನ್ನಿನ ಡೇಲಿ ಮೇಲ್ ಪತ್ರಿಕೆಯ ವರದಿಗಾರರು ಒಟ್ಟಾಗಿ ಹಾಲಿವುಡ್ ಫಾರೆನ್ ಕರೆಸ್ಟಾಂಡೆಂಟ್ಸ್ ಅಸೋಯೇಷನ್ ಹುಟ್ಟುಹಾಕಿದರು. ಧರ್ಮ ಹಾಗೂ ಭೇದ ರಹಿತ ಒಗ್ಗಟ್ಟು, ಈ ಸಂಘದ ಧ್ಯೇಯವಾಗಿತ್ತು.

ಯಾವಾಗ ಆರಂಭ-

ಮೊದಲ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ 1944 ರಲ್ಲಿ 20th Century Fox ಸ್ಟೂಡಿಯೋಸ್ ದಲ್ಲಿ ನಡೆಯಿತು. ಬಳಿಕ ಇದು ಪ್ರತಿವರ್ಷ ವಿವಿಧ ಸ್ಥಳಗಳಲ್ಲಿ ನಡೆಯುತ್ತಲೇ ಬಂದಿದೆ. 1950 ರ ಸುಮಾರಿಗೆ ಹಾಲಿವುಡ್ ಫಾರೆನ್ ಪ್ರೆಸ್ ಅಸೋಸಿಯೇಷನ್, ವಿಶೇಷ ಸಾಧನೆಗಾಗಿ ಪ್ರಶಸ್ತಿಯೊಂದನ್ನು ಸ್ಥಾಪಿಸಿ ಅದನ್ನು ಮೊದಲ ಬಾರಿಗೆ ನಿರ್ಮಾಪಕ ಹಾಗೂ ನಿರ್ದೇಶಕ Cecil B. DeMille ಯವರಿಗೆ ನೀಡಲಾಯಿತು. ತದನಂತರ ಈ ಪ್ರಶಸ್ತಿ Cecil B. DeMille ಯವರ ಹೆಸರಲ್ಲೇ ನೀಡಲಾಗುತ್ತಿದೆ.

1963 ರಲ್ಲಿ ಮಿಸ್ ಗೋಲ್ಡನ್ ಗ್ಲೋಬ್ ಪ್ರಶಸ್ತಿ ನೀಡುವ ಪರಿಪಾಠ ಆರಂಭವಾಯಿತು. ಅನಿಮೇಷನ್ ಚಿತ್ರಗಳ ಪ್ರಭಾವವನ್ನು ಗಮನಿಸಿದ ಅಸೋಸಿಯೇಷನ್, 2006 ಅತ್ಯುತ್ತಮ ಅನಿಮೇಷನ್ ಚಲನಚಿತ್ರ ಪ್ರಶಸ್ತಿಯನ್ನು ಹುಟ್ಟುಹಾಕಿತು.

 ವಿಭಾಗಗಳು –

ಟೆಲಿವಿಷನ್ ಮತ್ತು ಸಿನೇಮಾ ವಿಭಾಗಗಳಲ್ಲಿ Best motion picture, ನಾಯಕ ಹಾಗೂ ಪೋಷಕ ನಟ, ನಿರ್ದೇಶನ, ಚಿತ್ರಕಥೆ, ಹಾಡು, ಹಾಗೂ ಅತ್ಯುತ್ತಮ ವಿದೇಶಿ ಚಿತ್ರಕ್ಕೆ ಪ್ರಶಸ್ತಿಗಳಿವೆ.

ಗೋಲ್ಡನ್ ಗ್ಲೋಬ್ ಗೆ ಯಾಕಿಷ್ಟು ಮಹತ್ವ?

ಈ ಪ್ರಶಸ್ತಿಗಳು ಸ್ಥಾಪಿತವಾದಾಗಿನಿಂದಲೂ ಅವುಗಳ ಗುಣಮಟ್ಟದಲ್ಲಿ ಕಿಂಚಿತ್ತೂ ವ್ಯತ್ಯಯ ಬಂದಿಲ್ಲ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದೆಯೆಂದರೆ ಆ ಚಿತ್ರ ಅತ್ಯುತ್ತಮವಾಗಿರಲೇಬೇಕು ಎಂಬಷ್ಟರ ಮಟ್ಟಿಗೆ ಪ್ರಶಸ್ತಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಜೊತೆಗೆ, ಇವುಗಳನ್ನು ಆಸ್ಕರ್ ಪ್ರಶಸ್ತಿಗಳ ಕೀಲಿ ಕೈ ಎಂದೇ ಭಾವಿಸಲಾಗುತ್ತದೆ. ಈ ಪ್ರಶಸ್ತಿ ಪಡೆದ ಬಳಿಕ ಸಾಕಷ್ಟು ಚಿತ್ರಗಳು ಆಸ್ಕರ್ ಗೆದ್ದುಕೊಂಡು ಯಶಸ್ಸಿನ ನಗೆ ಬೀರಿರುವುದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಸ್ಲಮ್ ಡಾಗ್, ಭಾರತಕ್ಕೆ ಆಸ್ಕರ್ ಆಸೆಯನ್ನೂ ಚಿಗುರಿಸಿದೆ.

the_54th_golden_globe_awards

Advertisements

3 responses to this post.

 1. ಸ್ಲಮ್ ಡಾಗ್ ಮಿಲೇನಿಯರ ಚಿತ್ರವನ್ನು ನಿನ್ನೆಯಷ್ಟೇ ನೋಡಿದೆ. ಇಂತ ಪ್ರಶಸ್ತಿಗಳ ಗುಣಮಟ್ಟ, ವಿಶ್ವಾಸ ದ ಬಗ್ಗೆಯೇ ಸಂಶಯ ಹುಟ್ಟಿತು 😦
  ವೈಟ್ ಟೈಗರ್ ಕೃತಿಗೂ ಈ ಚಿತ್ರಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಭಾರತವನ್ನು ಕೀಳಾಗಿ ತೋರಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯುವುದು ಕಷ್ಟವೇನಿಲ್ಲ ಅಂತ ಮತ್ತೊಮ್ಮೆ ಖಾತ್ರಿಯಾಯಿತು. ನಿಜಕ್ಕೂ ಬೇಸರವಾಗಿದೆ.

  – ವೈಶಾಲಿ.

  http://kenecoffee.wordpress.com/

  ಉತ್ತರ

 2. ವೆಸ್ಟರ್ನ್ ಮೀಡಿಯ ಭಾರತದ ಕೊಳಕನ್ನೇ ವಸ್ತುವಾಗಿಸಿ ಮಿ೦ಚುತ್ತಿರುವ ಈ ಎವರೇಜ್ ಸಿನೆಮಾಕ್ಕೆ ಜಾಸ್ತಿನೇ ಹೈಪ್ ಕೊಡ್ತಾ ಇದೆ. ನಮ್ಮ ಮೀಡಿಯ ಕಣ್ಣು, ಕಿವಿ ಮುಚ್ಚಿ ವೆಸ್ಟರ್ನ್ ಮೀಡಿಯ ವಾ೦ತಿ ಮಾಡಿದ್ದನ್ನು ತಿ೦ದು ವಾ೦ತಿ ಮಾಡುತ್ತಿದೆ. ಭಾರತೀಯ ಪ್ರಜೆಯಾಗಿ ಈ ಸಿನೆಮಾ ಎಳ್ಳಷ್ಟು ಖುಷಿ ಕೊಡೋದಿಲ್ಲ.

  ಉತ್ತರ

 3. ಸ್ಲಂಗಳು ಭಾರತದ ವಾಸ್ತವೂ ಹೌದು.ದುರಂತವೂ ಹೌದು.ಅದಕ್ಕೆ ಬೇರೆ ಅಯಾಮಗಳು ಇವೆ.ಆದರೆ ,ಸ್ಲಂ ಡಾಗ್ ಮಿಲೇನಿಯರ್ ಚಿತ್ರ ನಿಜಕ್ಕೂ ನೋಡಲೇ ಬೇಕಾದ ಸಿನೆಮಾ.ಬದುಕಿನಿಂದ ಚೆನ್ನಾಗಿ ಪಾಠ ಕಲಿತವರು ಸಿನೆಮಾದ ಬಗ್ಗೆ ತಕರಾರು ಎತ್ತುವುದಿಲ್ಲ.

  ಗೊಲ್ಡನ್ ಗ್ಲೊಬ್ ಪ್ರಶಸ್ತಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಥ್ಯಾಂಕ್ಸ್.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: