ಪ್ರಶಸ್ತಿ: ಚರ್ಚೆ ಆರಂಭ..

speaker-interview

 

 

 

 

 

 

 

 

 

ಶೆಟ್ಟರು (Shettaru) :

ಪ್ರಶಸ್ತಿಗಳಿಗಾಗಿ ವಿವಾದಗಳೋ ಅಥವಾ ವಿವಾದಗಳಿಗಾಗಿ ಪ್ರಶಸ್ತಿಗಳೋ ತಿಳಿಯುತ್ತಿಲ್ಲ.

ಪ್ರತಿವರ್ಷ ಪ್ರಶಸ್ತಿ ಪಟ್ಟಿ ಬಿಡುಗಡೆಯಾದ ನಂತರ ವಿವಾದಗಳು ಹುಟ್ಟದೆ ಇದ್ದರೆ ಜನರಿಗೆ ಪ್ರಶಸ್ತಿಗಳು ಅನೌನ್ಸಾದ ಬಗ್ಗೆ ಗೊತ್ತಾಗುವುದೆಯಿಲ್ಲ. ಪ್ರತಿಯೊಬ್ಬರಿಗೂ ತಮ್ಮ ಚಿತ್ರ ಅತ್ಯುತ್ತಮ ಮತ್ತು ಅದು ಎಲ್ಲ ವಿಭಾಗಗಳಲ್ಲೂ ಪ್ರಶಸ್ತಿಗೆ ಯೋಗ್ಯವಾಗಿದೆ ಅನಿಸುವುದು ಸಹಜ “ಹೆತ್ತವರಿಗೆ ಹೆಗ್ಗಣ ಮುದ್ದು”, ನೀವು ಪ್ರಶಸ್ತಿಗಳನ್ನು ವಿವಾದಕ್ಕೆ ಎಡೆಮಾಡುವುದರಿಂದ ಆ ಪ್ರಶಸ್ತಿಯನ್ನು ಯೋಗ್ಯತೆಯಿಂದ ಪಡೆದವನು ಕೂಡಾ ತನ್ನ ಯೋಗ್ಯತೆಯನ್ನು ಅವಮಾನಿಸಿಕೊಳ್ಳುತ್ತಾನೆ.

ಇನ್ನು ಅರ್ಹ ಮತ್ತು ಅನರ್ಹತೆಯ ಮೂಲ ಪರಿಮಾಣಗಳೆನು ಎಂಬುದು ಇಂದಿಗೂ ಅಷ್ಟೆ ವಿವಾದಸ್ಪದ ಪ್ರಶ್ನೆ, ಹೀಗಾಗಿ ಇಲ್ಲಿ ವ್ಯಕ್ತಿ ನಿರ್ಧಾರಕ್ಕಿಂತ, ಹಲವು ವ್ಯಕ್ತಿಗಳ ಗುಂಪು ನಿರ್ಧರಿಸಿದ್ದು ಹೆಚ್ಚು ಮೌಲಿಕವಾಗುತ್ತದೆ.

————————————————————————————-

 niranjana kottur :

ಖ೦ಡಿತವಾಗಿ ಆ ದಿನಗಳು ಸಿನಿಮಾಕ್ಕೆ ಹೆಚ್ಚಿನ ಪ್ರಶಸ್ತಿಗಳು ಬರಬೇಕಾಗಿತ್ತು. ಆ ವರ್ಷದ ಅತ್ಯುತ್ತಮ ಚಿತ್ರ ಇದೊ೦ದೆ.                                                                

————————————————————————————–

 Hanumantha:

The Government should not use the public money for those awards which were in no connected to the common people.The so called award winning films were so boring that film critics could niot sit more than 30 minutes to witness the movies. When films directed by so called intellectuals could not reach the ordinary people why should peoples money be used to give them awards. Let the Government fix a minimum 50 days run for any film before considering it for any award. If any film does not fit in to such parameter, there is no need to give awards at all for the year under consideration. Government should not bow to cultural terrorism of people like Bargur, Kasarvally.

Discussion is in good spirit.

—————————————————————————————

 ಪರಮೇಶ್ವರ ಗುರುಸ್ವಾಮಿ :

 • ಸಾಮಾನ್ಯವಾಗಿ ನನ್ನ ಸಂಪರ್ಕಕಕ್ಕೆ ಬಂಧವರಿಗೆಲ್ಲ ಚಿತ್ರವೊಂದನ್ನು ಆಭ್ಯಾಸ ಮಾಡುವಾಗ (ಆ ಲೆಕ್ಕಕ್ಕೆ ಯಾವುದೇ ಕಲಾಕೃತಿಯಾಗಬಹುದು)ಅದು ಗಳಿಸಿರುವ 927720745_b1eb171b352ಪ್ರಶಸ್ತಿಗಳು ಮುಖ್ಯವೇ ಅಲ್ಲ, ಯಾಕೆಂದರೆ ಮನುಷ್ಯ ಮಾತ್ರದವರು ಕೊಡುವ ಪ್ರಶಸ್ತಿಗಳು ಅಳತೆಗೋಲಾಗರವು, ಆ ಕೃತಿ ಮುಖ್ಯ ಎಂದು ತಲೆ ತಿನ್ನುತ್ತಿರುತ್ತೇನೆ.ಕರ್ನಾಟಕದಲ್ಲಿ ನಿರ್ಮಾಣವಾದ ಮೊದಲ ಎರಡು ಚಿತ್ರಗಳಾದ ’ವಸಂತಸೇ’ ಮತ್ತು ’ರಾಜಹಂಸ’ ಚಿತ್ರಗಳು ಎರಡು ಮುಖ್ಯ ಧಾರೆಗಳನ್ನು ಹುಟ್ಟು ಹಾಕಿದವು. ಆಮದು ಸಲಕರಣೆ ಮತ್ತು ತಂತ್ರಜ್ಞಾನದೊಂದಿಗೆ ಸ್ಥಳೀಯ ಪ್ರತಿಭೆಗಳು ಮುಖಾಮುಖಿಯಾಗುವ ಪ್ರಕ್ರಿಯೆಗೆ ವಸಂತಸೇನ ಉದಾಹರಣೆಯಾದರೆ apingಗೆ ರಾಜಹಂಸ ಉದಾಹರಣೆಯಾಗಿದೆ. ಕನ್ನಡದಲ್ಲಿ ಹೊಸ ಅಲೆಯ ಚಿತ್ರಗಳು ಬರುವವರೆಗೂ ಈ ಎರಡೂ ಧಾರೆಯವರು ಚಿತ್ರ ತಯಾರಿಕೆಯ ತಾಂತ್ರಿಕ ಅಂಶಗಳನ್ನು ಕಡೆಗಣಿಸಿರಲಿಲ್ಲ.ಹೊಸ ಅಲೆಯವರು ಕೇವಲ ವಸ್ತುವಿನ ಮೂಲಕ, ಆಮದು ಮತ್ತು ಎರವಲು ನಿರೂಪಣಾ ಶೈಲಿಗಳನ್ನು ಬಳಸಿಕೊಂಡು began catering only to international juries. ಗೊತ್ತಿದೆಯಲ್ಲ. ಪ್ರಶಸ್ತಿಗಳು ಅವುಗಳದೇ ಆದ ಹಿತಾಸಕ್ತಿಗಳನ್ನೂ ರಾಜಕೀಯವನ್ನೂ ಲಾಬಿಗಳನ್ನೂ ಹೊಂದಿರುತ್ತವೆ. ಶಾಂತಿಗಾಗಿ ಗಾಂಧೀಜಿಯಂಥವರಿಗೆ ಸಾಹಿತ್ಯದಲ್ಲಿ ಟಾಲ್ಸ್ ಟಾಯ್ ರವರಂಥವರಿಗೆ ನೊಬಲ್ ಸಿಗದಿರುವುದಕ್ಕೆ ಇಂಥವೇ ಕಾರಣಗಳು.

  ನಾವು ನೋಡುವ ಬಹುತೇಕ ಅಂತಾರಾಷ್ಟ್ರೀಯ ಚಲನಚಿತ್ರ ದಿಗ್ಗಜಗಳ ಚಿತ್ರಗಳು ಮೊದಲು ಅವರವರ ಭಾಷೆ ದೇಶಗಳಲ್ಲಿ ಜನಪ್ರಿಯರೇ ಆದವರ ಚಿತ್ರಗಳು. ಬಹುಶಃ ನಮ್ಮ ಕನ್ನಡದಲ್ಲಿ ಮಾತ್ರ ಇಲ್ಲಿನ ಜನರು ನೋಡದಿದ್ದರೂ ಅಂತಾರಾಷ್ಟ್ರೀಯ ಮನ್ನಣೆ ಗಳಿಸುತ್ತವೆ.

  ಈ ದೃಷ್ಟಿಕೋನದಿಂದ ಎನ್.ಲಕ್ಷ್ಮೀನಾರಾಯಣರ ಚಿತ್ರಗಳ ನಂತರ ಬಂದಿರುವ ಕನ್ನಡದ ಅರ್ಥಪೂರ್ಣ ಚಿತ್ರ, ’ಆ ದಿನಗಳು’. ಈ ದಿಕ್ಕಿನಲ್ಲಿ ’ಆ ದಿನಗಳು’ ಸಂಪೂರ್ಣ ಯಶಸ್ವಿಯಾಗದಿದ್ದರೂ ದೃಢ ಹೆಜ್ಜೆಯ್ನನಂತೂ ಹಾಕಿದೆ.

 • ————————————————————————————–

  arun joladakudligi:

  ಆ ದಿನಗಳು ನಿಜಕ್ಕೂ ಒಳ್ಳೆಯ ಸಂವೇಧನಾಶೀಲ ಸಿನೇಮಾ. ಈ  ಸಿನೇಮಾ ಪ್ರಶಸ್ತಿ ಆಯ್ಕೆಯಲ್ಲಿಯೂ  ಸಿನಿಮೀಯ ಮನಸ್ತಿತಿಗಳು ಕೆಲಸ ಮಾಡಿರುವುದು ವಿಷಾಧ. ಆ ದಿನಗಳು ಸಿನೇಮಾವನ್ನು  ಪ್ರಶಸ್ತಿಗೆ  ಆಯ್ಕೆ ಮಾಡದಿರುವುದು ಆಯ್ಕೆ ಸಮಿತಿ ತಮಗೆ ತಾವೇ ಮಾಡಿಕೊಂಡ ಅವಮಾನದಂತಿದೆ.

  Advertisements

  2 responses to this post.

  1. Posted by ಅಂಚೆಮನೆ ರಘು. on ಜನವರಿ 16, 2009 at 5:43 ಅಪರಾಹ್ನ

   ಸಿನಿಮಾ ತೆಗೆಯುವ ಮುನ್ನವೇ, ಅದಕ್ಕೆ ದೊರೆಯ ಬಹುದಾದ ಪ್ರಶಸ್ತಿಗಳನ್ನು ಮತ್ತು ನಗದು ಹಣವನ್ನು ಲೆಕ್ಕ ಹಾಕಿ,ಅದಕ್ಕೆ ತಕ್ಕಂತೆ ಬಜೆಟ್ ಮಾಡಿಕೊಂಡು ಸಿನಿಮಾ ತೆಗೆಯುವವರಿಗೆ ಪ್ರಶಸ್ತಿ ನೀಡುವುದರಲ್ಲಿ ಯಾವುದೆ ಅರ್ಥವಿಲ್ಲ. ಚಿತ್ರ ಪ್ರೇಮಿಗಳ ಮುಂದೆ ಗೆಲ್ಲಲಾಗದ ಸೋ-ಕಾಲ್ಡ್ ಕಲಾತ್ಮಕ ಸಿನಿಮಾಗಳಿಗೆ ಪ್ರಶಸ್ತಿ ನೀಡುವುದು ಸರಿಯಲ್ಲ. ಇತಂಹ ಸಂಪ್ರದಾಯಕ್ಕೆ ಕೊನೆ ಹಾಡಿ, ಹೊಸ ಪ್ರಯೋಗಗಳೊಂದಿಗೆ ವೀಕ್ಷಕರು ಎಂಬ ಸಮಿತಿ ಮುಂದೆ ಗೆಲ್ಲುವ ಸಿನಿಮಾಗಳಿಗೆ ಪ್ರಶಸ್ತಿ ನೀಡುವ ಪದ್ದತಿ ಜಾರಿಗೆ ಬರಲಿ. ಹಾಗಲಾದರು, ಪ್ರಶಸ್ತಿಗಾಗಿ ಸಿನಿಮಾ ಮಾಡುವವರ ಹಾವಳಿ ಕಡಿಮೆಯಾಗಿ, ಚಿತ್ರ ರಸಿಕರಿಗಾಗಿ ಉತ್ತಮ ಚಿತ್ರ ನಿರ್ಮಿಸುವ ಮನಸ್ಸಿನ ಚಿತ್ರ ತಯಾರಕರು ಬರ ಬಹುದು.
   ಅಲ್ಲದೆ ಈ ಬಾರಿ ಮೂಡಿ ಅತ್ಯತ್ತಮ ಸೃಜನಶೀಲ ಮತ್ತು ರೌಡಿಸಂ ಎಂದರೆ ಲಾಂಗ್ -ಮಚ್ಚು ಎಂದು ತಿಳಿದಿರುವ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸಿದ ಚಿತ್ರ. ಈ ಎಲ್ಲಾ ಕಾರಣಗಳಿಗೆ ಆ ದಿನಗಳು ಚಿತ್ರಕ್ಕೆ ಪ್ರಶಸ್ತಿ ಬರಬೇಕಿತು.
   ಸಮಿತಿ ರಚನೆಯಾಗುವ ಮುನ್ನವೇ ಗುಲಾಬಿ ಟಾಕೀಸ್ ಪ್ರಶಸ್ತಿಗಾಗಿ ಮಾಡಿರುವ ಚಿತ್ರ ಎಂದು ಎಲ್ಲಿರಿಗೂ ತಿಳಿದಿತ್ತು. ಅಂತಹದರಲ್ಲಿ ಸಮಿತಿ ನಿರ್ಧಾರದಲ್ಲಿ ಹೊಸತನ ಇಲ್ಲ.

   ಉತ್ತರ

  2. Posted by ಪರಮೇಶ್ವರ ಗುರುಸ್ವಾಮಿ on ಜನವರಿ 16, 2009 at 6:52 ಅಪರಾಹ್ನ

   ಇಂದು ‘Let them first win awards’ ಎಂಬ ಶಿರೋನಾಮೆಯಡಿಯಲ್ಲಿ ಗಿರೀಶ್ ಕಾಸರವಳ್ಳಿಯವರ ಸಂದರ್ಶನ Bangalore Times ನಲ್ಲಿ ಪ್ರಕಟವಾಗಿದೆ. ಇತ್ತೀಚಿನ ಪ್ರಶಸ್ತಿ ಪರಸಂಗವನ್ನು ಕುರಿತೇ ಮಧು ದೈತೋಟರವರು ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಶಸ್ತಿ ಯಾರಿಗೆ ಸಿಕ್ಕಿದೆ ಯಾರಿಗೆ ಸಿಕ್ಕಿಲ್ಲ ಎನ್ನುವುದು ನನ್ನ ಮಟ್ಟಿಗೆ irrelevent. ಆದರೆ ೩ ದಶಕಗಳಿಗಿಂತ ಹೆಚ್ಚು ಕಾಲ ಸಿನೆಮಾ ರಂಗದಲ್ಲಿ ಕ್ರಿಯಾಶೀಲರಾಗಿದ್ದು FTII product ಆದವರು ಕೊಡಬಹುದಾದ ಉತ್ತರಗಳನ್ನು ಅವರು ಕೊಟ್ಟಿಲ್ಲ. ಮೊದಲ ಪ್ರಶ್ನೆಗೆ(ಪ್ರಶ್ನೆಗಳನ್ನು BTಯಲ್ಲೇ ಓದಿಕೊಳ್ಳಿ please) ಪ್ರತಿ ವರ್ಷ ಶತಕ ಬಾರಿಸುವ ಆಟಗಾರನನ್ನು ಕೈ ಬಿಡಿ ಎಂದಂದಾಯ್ತು ಎಂದು ಗಿ.ಕಾ. ರವರು ಉತ್ತರಿಸಿದ್ದಾರೆ. ಒಬ್ಬ ಆಟಗಾರ ಶತಕ ಬಾರಿಸುವುದನ್ನ ಕೋಟ್ಯಾಂತರ ಜನ ನೋಡಿರುತ್ತಾರೆ. ತಾಂತ್ರಿಕ ಕಲಾ ಮಾಧ್ಯಮವಾದ ಚಲನ ಚಿತ್ರದಲ್ಲಿನ ಸಾಧನೆಗೂ ದೈಹಿಕ ಚಟುವಟಿಕೆಯ ಶತಕ ಭಾರಿಸುವ ಸಾಧನೆಗೂ ಹೋಲಿಸ ಬಾರದಷ್ಟು ವ್ಯತ್ಯಾಸವಿದೆ. ಜೊತೆಗೆ ಶತಕ ಬಾರಿಸುವಲ್ಲಿ ಇರಬಹುದಾದ ಲಾಬಿ, ರಾಜಕೀಯ ಮತ್ತು ಹಿತಾಸಕ್ತಿಗಳು ನಮ್ಮ ಚಲನಚಿತ್ರ ಪ್ರಶಸ್ತಿಗಳಿಗೆ ಹೋಲಿಸಿದರೆ ಇಲ್ಲವೇ ಇಲ್ಲ ಎನ್ನಬಹುದು. Aping ಮೂಲಕ ಆಟಗಳಲ್ಲಿ ಬಹಳ ಎತ್ತರಕ್ಕರ ಏರಲು ಸಾಧ್ಯವಿಲ್ಲ. Originality ಮತ್ತು individuality ಇರಲೇಬೇಕು. ಅಲ್ಲವೆ?

   ನಿಮ್ಮ ಚಿತ್ರಗಳನ್ನು ಜನ ನೋಡುವುದೇ ಇಲ್ಲ ಎಂಬ ಭಾವನೆ ಇದೆಯಲ್ಲ ಎಂಬ ಪ್ರಶ್ನೆಗೆ ಮ್ಯಾಗ್ಸೆಸೆ, ಜ್ಞಾನಪೀಠ ಪ್ರಶಸ್ತಿಗಳ ಬಗ್ಗೆಯೂ ಅದೇ ಮಾತನ್ನೇ ಹೇಳ ಬಹುದು ಅಂತ ಹೇಳಿ, “ನನಗೆ ಹೆಸರು ಮರೆತು ಹೋಗಿದೆ- ಆತ ಇತ್ತೀಚೆಗೆ ಮ್ಯಾಗ್ಸೆಸೆ ಗೆದ್ದಿದ್ದಾನೆ ಮತ್ತೆ ಅವನ ಪುಸ್ತಕವನ್ನು ಯಾರೊಬ್ಬರೂ ಓದಿಲ್ಲ” ಎಂದುತ್ತರಿಸಿದ್ದಾರೆ. ಇಂಥ ಮಾತುಗಳು ಬೇಜವಾಬ್ದಾರಿ ರಾಜಕಾರಣಿಗಳ ಬಾಯಲ್ಲಿ ಮಾತ್ರ ಬರುವಂಥದು. ಅಥವಾ ನಾವು ಸಾಂಸ್ಕೃತಿಕ ರಾಜಕಾರಣದ ಸುಳಿಯೊಳಗೆ ಆಳವಾಗಿ ಸಿಲುಕಿದ್ದೇವೆಯೆ? ಮ್ಯಾಗ್ಸೆಸೆ ಪ್ರಶಸ್ತಿ ಪಡೆದವರೆಲ್ಲ ಪ್ರಸ್ತಿ ಪಡೆಯುವ ಮೊದಲು ತಮ್ಮ ತಮ್ಮ ಕ್ಷೇತ್ರಗಳಲ್ಲಿ ನಿಜವಾದ ಸಾಧಕರೇ ಆಗಿದ್ದು ತಮ್ಮ ಜನರನ್ನು ಮೊದಲು ತಲುಪಿರುವವರೆ. ಒಂದು ರೀತಿ ಜನ ಸಾಮಾನ್ಯರ ಕಣ್ಮಣಿಗಳೇ ಆಗಿದ್ದವರು. ಯಾರಿಗೂ ಕಾಣದಂಥ ಕೆಲಸ ಮಾಡಿ ಧುತ್ತನೆ ಹೇರಲ್ಪಟ್ಟವರಲ್ಲ. ಮುಂದುವರೆದು “ರಾಮಾಯಣ ದರ್ಶನವನು ಎಷ್ಟು ಜನ ಓದಿದ್ದಾರೆ?” ಎಂದು ಪ್ರಶ್ನೆ ಕೇಳಿ ಇದರಿಂದ ಅದೊಂದು ಮಹಾನ್ ಸಾಹಿತ್ಯ ಕೃತಿ ಅಲ್ಲ ಎಂದಾಗುತ್ತದಯೆ ಎಂದೂ ಉತ್ತರಿಸಿ ವಸ್ತು ಲೆಕ್ಕಕ್ಕೆ ಬರುವುದು ಎಂದಿದ್ದಾರೆ. ಸಾಹಿತ್ಯ ಮತ್ತು ಚಲನಚಿತ್ರದ ಜನಪ್ರಿಯತೆ ಅಥವಾ ಅವುಗಳ reach ಅನ್ನು ಶತಮಾನಗಳಿಂದ ಸಾಕ್ಷರತೆ ಹೆಚ್ಚಿರುವ ದೇಶ ಭಾಷೆಗಳಲ್ಲಿ ಹೋಲಿಸಿದರೆ ಸರಿ. ಕನಿಷ್ಟ ಸಾಕ್ಷರತೆಯನ್ನೂ ಸಾಧಿಸುವೆಡೆ ಕುಂಟುತ್ತಾ ಎಡವುತ್ತಾ ತೆವಳುತ್ತಿರುವ ನಮ್ಮಲ್ಲಿ ಈ ರೀತಿಯ ಹೋಲಿಕೆಯಲ್ಲಿ ತಾಳಮೇಳ ಇರುವುದಿಲ್ಲ.

   ಅವರ ಚಿತ್ರಗಳನ್ನು ಬೇಕಾದಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶಿಸುತ್ತಾರೆ, ಸಂಶೋಧಕರು ತಮ್ಮ ಥೀಸಿಸ್ ಗಳಿಗೆ ಅವರ ಚಿತ್ರಗಳನ್ನು ಉಪಯೋಗಿಸುತ್ತಿದ್ದಾರೆ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತ ಹೇಳಿದ್ದಾರೆ. ನನಗೆ ತಿಳಿದ ಮಟ್ಟಿಗೆ ನಮ್ಮಲ್ಲಿನ ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿರುವ ಚಿತ್ರಗಳನ್ನು ವಿದೇಶಿ ವಿವಿ ಗಳಲ್ಲಿ ಅವು ಅತ್ಯುತ್ತಮವಾದ ಚಲನಚಿತ್ರಗಳು ಎಂಬ ಕಾರಣಕ್ಕೆ ಅಧ್ಯಯನ ಮಾಡುವುದಿಲ್ಲ. ಹೆಚ್ಚಾಗಿ ನಮ್ಮ ಸಮಾಜ, ರೀತಿನೀತಿ, ಬಡತನ, ಮುಂತಾಧ ಮಾನವಿಕ ಆದ್ಯಯನಗಳಿಗಾಗಿ ಬಳಸುತ್ತಾರೆ. ಅಟರ ಮಟ್ಟಿಗೆ ಈ ಚಿತ್ರಗಳು ನಮ್ಮ ಮುಖ್ಯಧಾರೆಯ ಸಿನೆಮಾಗಳಿಗಿಂತ ವಾಸ್ತವಕ್ಕೆ ಕನ್ನಡಿ ಹಿಡಿದಿರುತ್ತವೆ. ನನ್ನ ಪ್ರಶ್ನೆಯೇನೆಂದರೆ, ಜಗತ್ತಿನ ಯಾವುದೇ ಭಾಗದ, ಯಾವುದೇ ಭಾಷೆಯ ಸಿನೇಮಾಸಕ್ತರು ಕುರೋಸಾವ, ಆಂದ್ರೆ ವಾಯ್ದ, ಬರ್ಗ್‌ಮನ್, ಚಾಪ್ಲಿನ್ ಮುಂತಾದ ಚಲನಚಿತ್ರ ದಿಗ್ಗಜಗಳ ಚಿತ್ರಗಳನ್ನು ನೋಡುವಂತೆ ನಮ್ಮ ಈ ಚಿತ್ರಗಳನ್ನು ಯಾಕೆ ನೋಡುವುದಿಲ್ಲ?

   ಗಿರೀಶ್ ಕಾಸರವಳ್ಳಿಯವರು ಅವರ ’ಗೃಹಭಂಗ’ಧಾರಾವಹಿಯ ರೀತಿ ಚಿತ್ರ ಮಾಡುವುದರ ಬದಲು ಯಾಕೆ ಅಂತರಾಷ್ಟ್ರೀಯ ಪ್ರೇಕ್ಷಕರಿಗೂ ಅಲ್ಲ ಜ್ಯೂರಿಗಳಿಗೆ ಮಾತ್ರ ಕೇಟರ್‍ ಮಾಡುತ್ತಾರೆ?

   ಉತ್ತರ

  ನಿಮ್ಮದೊಂದು ಉತ್ತರ

  Fill in your details below or click an icon to log in:

  WordPress.com Logo

  You are commenting using your WordPress.com account. Log Out /  Change )

  Google+ photo

  You are commenting using your Google+ account. Log Out /  Change )

  Twitter picture

  You are commenting using your Twitter account. Log Out /  Change )

  Facebook photo

  You are commenting using your Facebook account. Log Out /  Change )

  w

  Connecting to %s

  %d bloggers like this: