ಗೋಲ್ಡನ್ ಗ್ಲೋಬ್- ಬೇಕು, ಬೇಡ

golden-globe-awardsವೈಶಾಲಿ :

ಸ್ಲಮ್ ಡಾಗ್ ಮಿಲೇನಿಯರ ಚಿತ್ರವನ್ನು ನಿನ್ನೆಯಷ್ಟೇ ನೋಡಿದೆ. ಇಂತ ಪ್ರಶಸ್ತಿಗಳ ಗುಣಮಟ್ಟ, ವಿಶ್ವಾಸ ದ ಬಗ್ಗೆಯೇ ಸಂಶಯ ಹುಟ್ಟಿತು
ವೈಟ್ ಟೈಗರ್ ಕೃತಿಗೂ ಈ ಚಿತ್ರಕ್ಕೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಭಾರತವನ್ನು ಕೀಳಾಗಿ ತೋರಿಸಿದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯುವುದು ಕಷ್ಟವೇನಿಲ್ಲ ಅಂತ ಮತ್ತೊಮ್ಮೆ ಖಾತ್ರಿಯಾಯಿತು. ನಿಜಕ್ಕೂ ಬೇಸರವಾಗಿದೆ.

———————————————————————————–

 Pramod :

ವೆಸ್ಟರ್ನ್ ಮೀಡಿಯ ಭಾರತದ ಕೊಳಕನ್ನೇ ವಸ್ತುವಾಗಿಸಿ ಮಿ೦ಚುತ್ತಿರುವ ಈ ಎವರೇಜ್ ಸಿನೆಮಾಕ್ಕೆ ಜಾಸ್ತಿನೇ ಹೈಪ್ ಕೊಡ್ತಾ ಇದೆ. ನಮ್ಮ ಮೀಡಿಯ ಕಣ್ಣು, ಕಿವಿ ಮುಚ್ಚಿ ವೆಸ್ಟರ್ನ್ ಮೀಡಿಯ ವಾ೦ತಿ ಮಾಡಿದ್ದನ್ನು ತಿ೦ದು ವಾ೦ತಿ ಮಾಡುತ್ತಿದೆ. ಭಾರತೀಯ ಪ್ರಜೆಯಾಗಿ ಈ ಸಿನೆಮಾ ಎಳ್ಳಷ್ಟು ಖುಷಿ ಕೊಡೋದಿಲ್ಲ.

———————————————————————————————–

subramani :
 

ಸ್ಲಂಗಳು ಭಾರತದ ವಾಸ್ತವೂ ಹೌದು.ದುರಂತವೂ ಹೌದು.ಅದಕ್ಕೆ ಬೇರೆ ಅಯಾಮಗಳು ಇವೆ.ಆದರೆ ,ಸ್ಲಂ ಡಾಗ್ ಮಿಲೇನಿಯರ್ ಚಿತ್ರ ನಿಜಕ್ಕೂ ನೋಡಲೇ ಬೇಕಾದ ಸಿನೆಮಾ. ಬದುಕಿನಿಂದ ಚೆನ್ನಾಗಿ ಪಾಠ ಕಲಿತವರು ಸಿನೆಮಾದ ಬಗ್ಗೆ ತಕರಾರು ಎತ್ತುವುದಿಲ್ಲ.

ಗೊಲ್ಡನ್ ಗ್ಲೊಬ್ ಪ್ರಶಸ್ತಿ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಥ್ಯಾಂಕ್ಸ್.

Advertisements

4 responses to this post.

 1. ಪ್ರಶಸ್ತಿ ಸಿಕ್ಕಿದ್ದಕ್ಕೆ ಅಭ್ಯಂತರ ಇಲ್ಲ. ಭಾರತವನ್ನು ಕೀಳಾಗಿ ತೋರಿಸಿದ್ರೆ ಮಾತ್ರ ಪ್ರಶಸ್ತಿ ಅನ್ನೋ ಸರಣಿಗೆ ಇನ್ನೊಂದು ಸೇರ್ಪಡೆಯಾಗಿದೆಯಲ್ಲಾ ಅಂತ ವಿಷಾದ ಅಷ್ಟೆ.

  ಇಲ್ಲೂ ಬರ್ದಿದ್ದಾರೆ ನೋಡಿ. http://kannada.webdunia.com/entertainment/bollywood/newsgossips/0901/10/1090110053_1.htm

  ಉತ್ತರ

 2. ಆ ಸಿನೆಮಾವನ್ನು ನಾವು ಎಂಜಾಯ್ ಮಾಡಲು ಸಾಧ್ಯವಾಗುವುದಿಲ್ಲ ಎಂಬುದಕ್ಕೆ ನಾವು ಭಾರತ ಪ್ರಕಾಶಿಸುತ್ತಿದೆ, ಭಾರತ ಸೂಪ ಪವರ್ ಆಗುವ ಹಾದಿಯಲ್ಲಿದೆ, ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ, ಮೇರಾ ಭಾರತ್ ಮಹಾನ್ ಎಂದು ನಂಬಿಕೊಂಡಿರುವ ಭ್ರಮೆಯಿಂದ ಹೊರ ಬಂದು ವಾಸ್ತವವನ್ನು ನೋಡುವುದಕ್ಕೆ ಇಷ್ಟ ಪಡದಿರುವುದೇ ಕಾರಣ.

  ಪ್ರಶಸ್ತಿಗೆ ನಾವು ಕೊಡುವ ಪ್ರಾಮುಖ್ಯತ್ಯೆಯನ್ನು ಗಮನಿಸಿದರೆ ಪ್ರಶಸ್ತಿ ಪಡೆಯುವವರೇನು ಸುಭಗರಲ್ಲ ಎಂದು ತಿಳಿಯುತ್ತದೆ. ಪ್ರಶಸ್ತಿ ಕೊಡುವವರು ಹಾಗೂ ತೆಗೆದುಕೊಳ್ಳುವವರು ಯಾರೂ ನೆಟ್ಟಗಿಲ್ಲ ಎಂದ ಮೇಲೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇನಿದೆ?

  -ಸುಪ್ರೀತ್.ಕೆ.ಎಸ್

  ಉತ್ತರ

 3. ಪ್ರಶಸ್ತಿ ಸಂಗೀತಕ್ಕಲ್ವ ಸಿಕ್ಕಿರೋದು ಇರ್ಲಿ ಬಿಡ್ರಿ ಇಟ್ಕೊಳ್ಳಲಿ ದಿಲೀಪು!

  ಉತ್ತರ

 4. Posted by ಅಂಚಮನೆ ರಘು. on ಜನವರಿ 20, 2009 at 5:41 ಅಪರಾಹ್ನ

  ಸ್ಲಂ ಎಂದರೆ ರೌಡಿಸಂ ಎಂಬ ಕಲ್ಪನೆಯನ್ನು ಹುಟ್ಟು ಹಾಕುವ ಸಿನಿಮಾಗಳ ನಡುವೆ, ಸ್ಲಂಗಳಲ್ಲಿ ಜಮಾಲ್ ನಂತಹವರು ಇರುತ್ತಾರೆ ಎಂದು ತೋರಿಸಿಕೊಟ್ಟ ಸ್ಲಂ ಡಾಗ್ ವಿಲೇನಿಯರ್ ಒಂದು ಉತ್ತಮ ಚಿತ್ರ.ನಿರ್ದೇಶನ, ಬಾಲಕರ ನಟನೆ, ಛಾಯಾಗ್ರಹಣ ಮತ್ತು ಸಂಗೀತ ಎಲ್ಲವೂ ಅದ್ಬುತ. ಯಾವುದು ಮನಸ್ಸಿಗೆ ಕಿರಿ ಕಿರಿ ಉಂಟು ಮಾಡುವುದಿಲ್ಲ.ಅಷ್ಟಕ್ಕೂ ಈ ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ದೊರೆತಿರುವುದು, ಮನಸ್ಸಿಗೆ ಇಂಪು ನೀಡುವ ಸಂಗೀತ ನೀಡಿದ ಎ.ಆರ್.ರೆಹಮಾನ್ ಗೆ ಹೊರೆತು, ಚಿತ್ರದಲ್ಲಿ ತೋರಿಸಲಾಗಿರುವ ಸ್ಲಂ ಗೆ ಅಲ್ಲ.
  ಸ್ಲಂ ನಲ್ಲಿ ಜಮಾಲ್ ನಂತಹವ ಅಸ್ಥಿತ್ವವನ್ನು ಒಪ್ಪಲು ಸಿದ್ದವಿಲ್ಲದ ಕೆಲವು ಮನಸ್ಥಿತಿಗಳು, ರೆಹಮಾನ ಈ ಸಾಧನೆಯನ್ನು ಸಹಿಸದೆ ಇರುವುದು ಸಹಜವೇ.

  ಉತ್ತರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: