ಒಬ್ಬ ಪುರುಷನಿಗಾಗಿ ಅವರೆಲ್ಲ ಕಾಯುತ್ತಿದ್ದರು…….

-ವಿದ್ಯಾರಶ್ಮಿ ಪೆಲತ್ತಡ್ಕ

raise

ರೈಸ್ ದಿ ರೆಡ್ ಲ್ಯಾಂಟರ್ನ್ಸ್….

ಅದೊಂದು ಚೀನೀ ಚಲನಚಿತ್ರ.

ಹಾಂಟಿಂಗ್ ಅನ್ನೋ ಪದವನ್ನು ಮಾತಿನಲ್ಲಿ ಹಲವು ಬಾರಿ ಬಳಸುತ್ತಿದ್ದೆ, ಅದರ ತೀವ್ರ ಅನುಭವವಾದದ್ದು ಮಾತ್ರ ಈ ಚಿತ್ರವನ್ನು ನೋಡಿದ ಮೇಲೆ.

ಅದೊಂದು ಸರ್ವಾಧಿಕಾರಿಯ ಮನೆ ಅಲ್ಲ, ಕೋಟೆ. ಆತನ ನಾಲ್ಕನೇ ಪತ್ನಿಯಾಗಿ ಇನ್ನೂ ಪ್ರಥಮ ಸ್ನಾತಕೋತ್ತರ ಪದವಿಗೆ ಸೇರಿದ್ದ ಹುಡುಗಿಯೊಬ್ಬಳು ಮದುವೆಯಾಗಿ ಬರುತ್ತಾಳೆ. ಆಕೆಯ ಮಲತಾಯಿ ಆ ಶ್ರೀಮಂತನೊಂದಿಗೆ ಮಾಡಿಕೊಂಡ ಒಪ್ಪಂದದ ಫಲ ಅದು. ಒಲ್ಲದ ಮದುವೆಯಾಗಿ ಬರುವ ಹುಡುಗಿಗೆ ಯಜಮಾನನ ಇತರ ಪತ್ನಿಯರಿಂದ ಅಂತಹ ಆದರವೇನೂ ಸಿಗುವುದಿಲ್ಲ. ತಮ್ಮ ಸವತಿಯನ್ನು ಅವರು ತಾನೇ ಹೇಗೆ ಸ್ವಾಗತಿಸಿಯಾರು ಮೊದಲ ಪತ್ನಿ ಆಗಲೇ ಸುಮಾರು ಐವತ್ತು-ಐವತ್ತೈದರ ವಯಸ್ಸಿನಾಕೆ. ಆಕೆಗೆ ಈ ನಾಲ್ಕನೆಯ ಪತ್ನಿಯ ವಯಸ್ಸಿನ ಮಗನೇ ಇದ್ದಾನೆ, ಈತ ಯಜಮಾನನ ಸಮಸ್ತ ಆಸ್ತಿಗೆ ಉತ್ತರಾಧಿಕಾರಿ. ಎರಡನೆಯ ಪತ್ನಿಗೆ ಮಗಳು. ಮೂರನೆಯಾಕೆ ಒಪೆರಾ ಒಂದರಲ್ಲಿ ಕೆಲಸಮಾಡುತ್ತಿದ್ದಳು, ಚೆನ್ನಾಗಿ ಹಾಡುತ್ತಾಳೆ. ಆಕೆಗೂ ಒಬ್ಬ ಮಗ.

ಮೊದಲನೆಯ ಪತ್ನಿ ಸರ್ವಾಧಿಕಾರಿಯ ಲೈಂಗಿಕ ಆಸಕ್ತಿಗೆ ಸಲ್ಲುವವಳಲ್ಲವಾದ್ದರಿಂದ ಆಕೆ ರಾಜನ ಅಂತಪುರದ ನಾಲ್ಕನೆಯ ಸದಸ್ಯೆಯ ಬಗೆಗೆ ನಿರ್ಲಿಪ್ತೆ. ಎರಡನೆಯವಳು ಸುಮಾರು ಮೂವತ್ತೈದರ ಪ್ರಾಯದವಳು. ತನ್ನ ಮೇಲಿಂದ ರಾಜನ ಆಸಕ್ತಿ ಕಳೆದುಹೋಗುತ್ತಿದೆ ಎಂಬ ಧಾವಂತದಲ್ಲಿರುವಾಕೆ. ಅದಕ್ಕೇ ಇಬ್ಬರೂ ವಾರಗಿತ್ತಿಯರ ಮೇಲೆ ಜ್ವಲಿಸುವ ಅಸೂಯೆಯ ಅಗ್ನಿಕುಂಡ ಆಕೆ. ಮೂರನಯವಳು ಇನ್ನೂ ರಾಜನ ಆಸಕ್ತಿ ಉಳಿಸಿಕೊಂಡವಳು. ಆದರೆ ಆಕೆಗೆ ಮಾತ್ರ ಆ ಅರಮನೆಗೆ ಬರುವ ವೈದ್ಯನ ಮೇಲೆ ವಿಶೇಷಾಸಕ್ತಿ. ಆತನ ಜೊತೆ ಆಕೆ ಇಸ್ಪೀಟ್ ಆಡುತ್ತಾಳೆ, ಹಾಡುತ್ತಾಳೆ… ಯಾರಿಗೂ ಗೊತ್ತಿಲ್ಲದ ಸತ್ಯವಿದು. ಇಂತಿಪ್ಪ ಅರಮನೆಗೆ ಪ್ರವೇಶ ಮಾಡಿದವಳು ನಾಲ್ಕನೆಯವಳು. ಪ್ರತಿಯೊಬ್ಬ ರಾಣಿಗೂ ಪ್ರತ್ಯೇಕ ಬಂಗಲೆ. ಒಬ್ಬಿಬ್ಬರು ಸೇವಕಿಯರು. ಉತ್ತಮ ಆಹಾರ. ಸಕಲ ಸೌಲಭ್ಯಗಳು. ಅಂತೂ ಇವರೆಲ್ಲ ಚಿನ್ನದ ಪಂಜರದ ಗಿಣಿಗಳು.

ಅಲ್ಲೊಂದು ಪದ್ಧತಿ. ಪ್ರತಿದಿನ ಮಧ್ಯಾಹ್ನ ರಾಜನ ಕೋಣೆಗೆ ಹೋಗುವ ಸೇವಕ ಆ ದಿನ ರಾತ್ರಿ ರಾಜ ಯಾವ ರಾಣಿಯ ಜೊತೆ ಮಲಗುತ್ತಾನೆ ಎಂದು ಜೋರಾಗಿ ಕೂಗಿ ಹೋಳುತ್ತಾನೆ. ಈ ಘೋಷಣೆ ಕೇಳಲೆಂದೇ ರಾಣೆಯರೆಲ್ಲ ತಮ್ಮ ತಮ್ಮ ಬಂಗಲೆಯ ಆವರಣದಲ್ಲಿ ನಿಂತು ನಿರೀಕ್ಷೆಯಿಂದ ಕಾಯುತ್ತಾರೆ. ಯಾವ ರಾಣಿ ರಾತ್ರಿಯ ಸಂಗಕ್ಕೆ ಆಯ್ಕೆಯಾಗುತ್ತಾಳೋ ಆಕೆಯ ಬಂಗಲೆಯಲ್ಲಿ ಕೆಂಪು ಲಾಟೀನುಗಳನ್ನು ಉರಿಸಲಾಗುತ್ತದೆ.ಮೂರ್ನಲ್ಕು ಕೆಲಸಗಾರರು ಅದನ್ನು ಒಂದು ಮೆರವಣೆಗೆಯಂತೆ ಹೊತ್ತೂಯ್ಯುತ್ತಾರೆ.

ಆಯ್ಕೆಯಾದ ರಾಣಿ ಹೆಮ್ಮೆಯಿಂದ ಬೀಗುತ್ತಾಳೆ. ಆಕೆಗೆ ಆ ದಿನ ಕಾಲಿಗೆ ಮಸಾಜ್ ಇತ್ಯಾದಿ ಸೇವೆಗಳ ಸೌಲಭ್ಯವೂ ಇದೆ. (ಮಸಾಜ್ ಮಾಡುವ ಟಿಕ್ ಟಿಕ್ ಶಬ್ದವನ್ನೇ ಹಲವಾರು ಬಾರಿ ಕೇಳಿಸುತ್ತಾನೆ ನಿರ್ದೇಶಕ). ಮರುದಿನದ ಊಟದ ಮೆನುವನ್ನು ಆಯ್ಕೆ ಮಾಡುವ ಹಕ್ಕೂ ಆಕೆಗೇ. ಉಳಿದವರು ಹೊಟ್ಟೆಕಿಚ್ಚಿನಿಂದ ಉರಿಯುತ್ತಾರೆ. ಇತರೆಲ್ಲರನ್ನು ಹಿಂದೆ ಹಾಕಿ ರಾಜನನ್ನು ಆಕರ್ಷಿಸುವುದು ಹೇಗೆಂಬುದೇ ಅವರೆಲ್ಲರ ಚಿಂತೆ. ಅವರ ಮಧ್ಯೆ ಇರುವ ಸ್ಪರ್ಧೆ ಅದುವೇ. ನಾಲ್ಕನೆಯ ಪತ್ನಿ ಈ ಮೇಲಾಟದಲ್ಲಿ ಅಷ್ಟೇನೂ ತೊಡಗಿಸಿಕೊಂಡವಳಲ್ಲ. ಅವಳ ವಯಸ್ಸು, ಸೌಂದರ್ಯ ತಾನಾಗಿ ರಾಜನನ್ನು ಆಕೆಯ ಬಳಿ ಎಳೆತರುತ್ತಿದ್ದವು. ಹಾಗೆಯೇ ವೈದ್ಯನತ್ತ ಆಕರ್ಷಿತಳಾಗಿರುವ ಮೂರನೆಯಾಕೆಯೂ ಈ ರೇಸ್ ನಲ್ಲಿ ಹಿಂದುಳಿದವಳೇ.. ಹೀಗಾಗಿ ಅವರಿಬ್ಬರಿಗೂ ಕೊಂಚ ಸ್ನೇಹ ಬೆಳೆಯುತ್ತದೆ.

ಒಂದು ದಿನ ಮೂರನೆಯ ಪತ್ನಿಯ ಮನೆಯಲ್ಲಿ ವೈದ್ಯನೊಂದಿಗೆ ಸೇರಿ ಅವರಿಬ್ಬರೂ ಇಸ್ಪೀಟ್ ಆಡುತ್ತಿದ್ದಾಗ ನಾಲ್ಕನೆಯಾಕೆಗೆ ಅವರಿಬ್ಬರ ನಡುವಿನ ಸಖ್ಯದ ಅರಿವಾಗುತ್ತದೆ. ಆದರೂ ಆಕೆ ಯಾರ ಬಳಿಯೂ ಹೇಳಹೋಗುವುದಿಲ್ಲ.

ಹೊರಗಿನಿಂದ ಸೌಜನ್ಯಯುತ ನಡವಳಿಕೆಯಿಂದಿರುವ ಎರಡನೆ ಪತ್ನಿ ಗೋಮುಖವ್ಯಾಘ್ರದಂತಿರುವವಳು. ಆಕೆ ಸುದ್ದಿ ತಿಳಿದವಳೇ ಯಜಮಾನನಿಗೆ ಹೇಳುತ್ತಾಳೆ. ಪರಿಣಾಮ ಆಕೆಯನ್ನು ಎಳಕೊಂಡು ಹೋಗಿ ಆ ಅರಮನೆಯ ಮೇಲ್ಮಹಡಿಯಲ್ಲಿ ಪ್ರತ್ಯೇಕವಾಗಿರುವ ಒಂದು ಕೋಣೆಗೆ ಕೊಂಡೊಯ್ದು ಕೊಂದುಬಿಡುತ್ತಾರೆ, ಎಲ್ಲರೂ ನೋಡನೋಡುತ್ತಿದ್ದಂತೆ ಇದನ್ನು ನೋಡಿ ನಾಲ್ಕನೆಯಾಕೆಗೆ ಆಘಾತವಾಗುತ್ತದೆ. ಆಕೆಯನ್ನೂ ಹುಚ್ಚಿಯೆಂದು ಕರೆಯುತ್ತಾರೆ. ಮೂರನೆಯಾಕೆಯ ಮನೆಯಿಂದ ಒಪೆರಾ ಸಂಗೀತ ಕೇಳಿಸುತ್ತದೆ….

ಈ ಚಿತ್ರದ ವಿಶೇಷ ಏನು ಗೊತ್ತಾ ರಾಣಿಯರ ಬಗ್ಗೆ ಇಷ್ಟೆಲ್ಲಾ ಕಥೆ ಹೇಳಿದರೂ ಆ ರಾಜನ ಮುಖವನ್ನು ಒಂದು ಬಾರಿಯೂ ತೋರಿಸುವುದಿಲ್ಲ. ಹಿರಿಯ ಪತ್ನಿಯ ವಯಸ್ಸಿನ ಅಂದಾಜಿನಿಂದ ಆತ ಎಷ್ಟು ಮುದುಕನಾಗಿದ್ದಾನೆಂದು ಅಳೆಯಬೇಕು. ತಾನು ಕಾಣೆಸಿಕೊಳ್ಳದೆಯೇ ಆ ನಾಲ್ಕು ಹೆಂಗಳೆಯರ ಬಾಳಿನಲ್ಲಿ ಎಷ್ಟೆಲ್ಲಾ ಆಟವಾಡುತ್ತಾನೆಂಬುದನ್ನು ತೋರಿಸಿದ್ದಾನಲ್ಲ, ಆ ನಿರ್ದೇಶಕ ಗ್ರೇಟ್ ಅನ್ನಿಸಿಬಿಟ್ಟಿತು ನನಗೆ. ಅದಕ್ಕಿಂತ ಹೆಚ್ಚಾಗಿ ಆ ಒಬ್ಬ ಪುರುಷನ ಲೈಂಗಿಕ ತೈಷೆ ಪೂರೈಸುವುದೇ ಅವರೆಲ್ಲರ ಬಾಳಿನ ಧ್ಯೇಯವಾಗಿಬಿಟ್ಟಿತಲ್ಲಾ, ಛೆ ಎಂಥಾ ಬದುಕಾಯ್ತು ಅವರದು ಎಂಬ ಖೇದವೂ…

ಇಲ್ಲಿ ಕೆಂಪು ಲಾಟೀನಿನ ಬಳಕೆಯ ಸಾಂಕೇತಿಕತೆಯನ್ನೂ ಗಮನಿಸಬೇಕು. ನಮ್ಮಲ್ಲಿ ರೆಡ್ ಲೈಟ್ ಏರಿಯಾದ ಅರ್ಥ ಗೊತ್ತಿದೆ ನಮಗೆ. ಆ ಮನೆಗೆಯ ಹೆಂಗಳೆಯರಿಗೆ ಕೆಂಪು ಲಾಟೀನು ತಮ್ಮ ಮನೆಯಂಗಳದಲ್ಲಿ ಹೊತ್ತಿಕೊಂಡರೇ ಹೆಮ್ಮೆ ಈ ಚಿತ್ರವನ್ನು ನನ್ನ ಪಿಜಿ ಓದಿನ ವೇಳೆ ನಮ್ಮ ಉಪನ್ಯಾಸಕ (ಮಂಗಳೂರು ವಿವಿ, ಪತ್ರಿಕೋದ್ಯಮ ವಿಭಾಗ) ಡಾ ಡಿ.ಎಸ್.ಪೂರ್ಣಾನಂದರು ತರಗತಿಯಲ್ಲಿ ತೋರಿಸಿದ್ದರು. ಬೆಳಗ್ಗೆ ಇಂಟರ್ನಲ್ ಪರೀಕ್ಷೆ ಬರೆದು ಮಧ್ಯಾಹ್ನ ಚಿತ್ರ ನೋಡೋದು, ಮರುದಿನ ಮತ್ತೆ ಪರೀಕ್ಷೆ ಬರೆಯೋದು. ಚಿತ್ರ ಎಷ್ಟು ಹಾಂಟಿಂಗ್ ಆಗಿತ್ತೆಂದರೆ ಮರುದಿನದ ಇಂಟರ್ನಲ್ಸ್ ಗೆ ಓದೋಕೇ ಕಷ್ಟ ಆಗುವಷ್ಟು….

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: