13 ಝಮೇಟಿ

800px-tzameti_scene-11

ಅಲೆಮಾರಿಯವರ ಒಳಗೂ… ಹೊರಗೂ…. ಬ್ಲಾಗಿನಿಂದ  

ಚಿತ್ರ: 13 ಝಮೇಟಿ(13 Tzameti)

ಭಾಷೆ: ಫ್ರೆಂಚ್

ನಿರ್ದೇಶಕ: ಗೆಲಾ ಬಬ್ಲೂನಿ

ಅವಧಿ: 86 ನಿಮಿಷ

ಥ್ರಿಲ್ಲರ್ಗಳು ಅಂದ್ರೆ ಹಿಚ್ಕಾಕ್ ನೆನಪಾಗುತ್ತಾನೆ. ಆದರೆ ಇವತ್ತಿನ ಥ್ರಿಲ್ಲರಗಳೇ ಬೇರೆ. ಸಿನಿಮಾದಲ್ಲಿ ದೃಶ್ಯಕ್ಕಿಂತ ಹೆಚ್ಚಾಗಿ ಸಂಗೀತ, ಗ್ರಾಫಿಕ್ಗಳು ಬೆಚ್ಚಿ ಬೀಳಿಸುವ ಪ್ರಯತ್ನ ಮಾಡುತ್ತೇವೆ. ಥಿಯೇಟರ್ನಲ್ಲಿ ಆದ ರೋಮಾಂಚನ ಹೊರಗೆ ಬರುವ ಹೊತ್ತಿಗೆ ಕರಿಗ ಹೋಗಿರುತ್ತದೆ. ನಮ್ಮ ರಾಮ್ಗೋಪಾಲ ವರ್ಮ ನಿರ್ದೇಶನದ ಇತ್ತೀಚಿನ ಚಿತ್ರ `ಫೂಂಕ್’ ಇದಕ್ಕೆ ಉತ್ತಮ ಉದಾಹರಣೆ. ಅದರಲ್ಲಿ ಏನಿತ್ತು? ಕಿರುಚಾಟ, ಅಪ್ಪಳಿಸುವ ಸಂಗೀತವೇ ನಿಮ್ಮ ಎದೆ ಬಡಿತ ಜಾಸ್ತಿ ಮಾಡಿತ್ತು. ನಿಮಗೆ ನಿಜಕ್ಕೂ ಆತಂಕ ಉಂಟು ಮಾಡುವ, ಏನಾಗಬಹುದೆಂಬ ಭಯಮಿಶ್ರಿತ ಕುತೂಹಲ ಹುಟ್ಟಿಸುವ ಚಿತ್ರವಾಗಿರಲೇ ಇಲ್ಲ.ಹೀಗೆ ಪ್ರತಿ ಸಾರಿ ಥ್ರಿಲ್ಲರ್ ಚಿತ್ರಗಳನ್ನು ನೋಡಿದಾಗ ನೆನಪಾಗುವ ಒಂದು ಚಿತ್ರವಿದೆ; `13 ಝಮೇಟಿ’. ಅಂದರೆ `13 ಸ್ಪರ್ಧಿಗಳು’ ಅಂತಾ. ಜಾರ್ಜಿಯಾದಿಂದ ಫ್ರಾನ್ಸಿಗೆ ಭವಿಷ್ಯ ಅರಸಿ ಬಂದ ಯುವಕನೊಬ್ಬ ಲಕ್ಷಗಟ್ಟಲೆ ದುಡ್ಡು ಗೆದ್ದು, ಬದುಕು ಕಳೆದುಕೊಳ್ಳುವ ಕಥೆ ಇದು. ಮೂರು ವರ್ಷಗಳ ಹಿಂದೆ ಬಂದ ಚಿತ್ರವಾದರೂ ಇದು ಕಪ್ಪು ಬಿಳುಪಿನ ಚಿತ್ರ. ನಿರ್ದೇಶಕ ಗೆಲಾ ಬಬ್ಲೂವಾನಿ ಕಥಾ ವಸ್ತುವಿಗೆ ಸೂಕ್ತವಾಗುತ್ತದೆ ಎಂಬ ಕಾರಣಕ್ಕೋ ಏನೋ ಇದನ್ನು ಕಪ್ಪು ಬಿಳುಪಿನಲ್ಲಿ ಚಿತ್ರಿಸಿದ್ದಾರೆ.

ಸೆಬಾಸ್ಟಿಯನ್ ಈ ಚಿತ್ರದ ನಾಯಕ. ಫ್ರಾನ್ಸ್ಗೆ ಬಂದ ಈತ ಅಲ್ಲಿ ಇಲ್ಲಿ ಮನೆ ಕಟ್ಟುವ, ರಿಪೇರಿ ಮಾಡುವ ಕೆಲಸಗಳಲ್ಲಿ ತೊಡಗಿರುತ್ತಾನೆ. ಮಾದಕ ವ್ಯಸನಿ ಗೊಡನ್ ಮನೆಯ ರಿಪೇರಿ ಮಾಡುವಾಗ ಅತಿಯಾದ ಮಾದಕ ಸೇವನೆಯಿಂದ ಗೊಡನ್ ಸತ್ತು ಹೋಗುತ್ತಾನೆ. ಇಲ್ಲಿಂದ ನಾಯಕ ಓಡುತ್ತಾ ಹೋಗುತ್ತಾನೆ, ಹಿಂದೆ ನಾವೂ ಕುತೂಹಲದ ಜತೆ ಓಡಲಾರಂಭಿಸುತ್ತೇವೆ.ಸತ್ತ ವ್ಯಕ್ತಿಯ ಪತ್ನಿ ವ್ಯಕ್ತಿಯೊಬ್ಬನ ಜತೆಗೆ `ರಹಸ್ಯ ಕೆಲಸ’ದ ಬಗ್ಗೆ ಮಾತನಾಡುತ್ತಾರೆ. ಇದನ್ನು ಕದ್ದಾಲಿಸಿದ ಸೆಬಾಸ್ಟಿಯನ್ ಈ ಬಗ್ಗೆ ವಿವರವಿರುವ ಪತ್ರವನ್ನು ಕದಿಯುತ್ತಾನೆ.ಈ ಪತ್ರ ಸಾವಿನ ಬಾಯಿಗೆ ಕರೆದೊಯ್ಯುತ್ತದೆ!ಸೆಬಾಸ್ಟಿಯನ್ ಪತ್ರದಲ್ಲಿರುವ ಸೂಚನೆಗಳನ್ನು ಅನುಸರಿಸುತ್ತಾ ಹೋಗುತ್ತಾನೆ. ಈ ಹೊತ್ತಿಗೆ ಸೆಬಾಸ್ಟಿಯನ್ ಹಿಂದೆ ಪೊಲೀಸರು ಬೀಳುತ್ತಾರೆ. ಪತ್ರದ ಸೂಚನೆಗಳು ಸೆಬಾಸ್ಟಿಯನ್ಅನ್ನು ಗುರಿ ತಲುಪಿಸುತ್ತವೆ ಪೊಲೀಸರನ್ನು ದಾರಿ ತಪ್ಪಿಸುತ್ತವೆ. ಹಾಗಾದರೆ ಸೆಬಾಸ್ಟಿಯನ್ ಬಂದಿದ್ದು ಎಲ್ಲಿಗೆ?ಭೂಗತ ದೊರೆಗಳ ಅಡ್ಡಾಕ್ಕೆ! ಗೌಪ್ಯ ಜಾಗದಲ್ಲಿ ಸೇರಿದ್ದ ಭೂಗತ ದೊರೆಗಳು, ಗ್ಯಾಂಗ್ ಸ್ಟಾರ್ಗಳು ಒಬ್ಬೊಬ್ಬ ವ್ಯಕ್ತಿಯನ್ನು ಕರೆತರುತ್ತಾರೆ. ಅವರ ಹಾಗೇ ಸ್ಪರ್ಧಿಯಾಗಿ ಬರಬೇಕಿದ್ದ ಗೊಡನ್ ಜಾಗದಲ್ಲಿ ಸೆಬಾಸ್ಟಿಯನ್ ಬಂದು ನಿಲ್ಲುತ್ತಾನೆ.ಏನಾಗುತ್ತದೆ ಎಂದು ಗೊತ್ತಾಗುವ ಹೊತ್ತಿಗೆ 13 ಮಂದಿ ಸ್ಪರ್ಧಿಗಳಲ್ಲಿ ಒಬ್ಬನಾಗಿ ನಿಲ್ಲುತ್ತಾನೆ. ಮುಂದೆ?

ಸುಮಾರು 86 ನಿಮಿಷದ ಚಿತ್ರದಲ್ಲಿ ಅರ್ಧ ತಾಸಿಗೂ ಹೆಚ್ಚು ಈ ಕಾಲ ನಡೆಯುವ ಮುಂದಿನ ದೃಶ್ಯಗಳನ್ನು ನಿಮ್ಮನ್ನು ಕುತೂಹಲವನ್ನು ಗೂಳಿಕಾಳಗದಲ್ಲಿ ಗೂಳಿಯನ್ನು ಕೆಣಕಿದ ಹಾಗೆ ಕೆಣಕುತ್ತವೆ ಎಂದರೆ ತಪ್ಪಿಲ್ಲ.ಸೆಬಾಸ್ಟಿಯನ್ ಸ್ಪರ್ಧಿಸಲು ಸಿದ್ಧವಾಗುವುದು ಸಾವನ್ನು ಗೆಲ್ಲುವುದಕ್ಕೆ! ಪಿಸ್ತೂಲು ಹಿಡಿದು ಕೊಟ್ಟ ಗುಂಡನ್ನು ಅದಕ್ಕೆ ತೂರಿಸಿ, ಸೂಚನೆ ಕೊಟ್ಟ ತಕ್ಷಣ ತನ್ನ ಎದುರಿನವನನ್ನು ಶೂಟ್ ಮಾಡಬೇಕು.ಅದೃಷ್ಟವಿದ್ದವರು ಬದುಕುತ್ತಾರೆ. ಒಂದರ ಜತೆಗೆ ಮತ್ತೊಂದು ಗುಂಡು ಬೋನಸ್ ಸಿಗುತ್ತದೆ; ಎದುರುಗಿರುವವನ್ನು ಕೊಲ್ಲುವುದಕ್ಕೆ!!ನಿರೀಕ್ಷಿಸಿದಂತೆ ನಾಯಕ ಸೆಬಾಸ್ಟಿಯನ್ ಸಾಯುವುದಿಲ್ಲ. ನಾಯಕನಾದ್ದರಿಂದ ಈತನ ಮೇಲೆ ಪಣ್ಣಕ್ಕಿಟ್ಟ 8.50 ಲಕ್ಷ ಯುರೊಗಳನ್ನು ಗೆಲ್ಲುತ್ತಾನೆ!!ಆದರೆ ಸಾವನ್ನು ಗೆಲ್ಲುವುದಕ್ಕೆ ಆಗುವುದೇ ಇಲ್ಲ ಎನ್ನುವುದೇ ವಿಪರ್ಯಾಸದ ಸಂಗತಿ!!

ಸೆಬಾಸ್ಟಿಯನ್ ಸಾವಿನ ವರ್ತಲದಿಂದ ಹೊರಬರುವುದಿಲ್ಲ.ಗೆದ್ದ ಹಣವನ್ನು ಮನೆಗೆ ಕಳುಹಿಸಿ, ಅನಿರೀಕ್ಷಿತವಾಗಿ ಬಂದೆರಗಿದ ಸಾವಿಗೆ ತಲೆಬಾಗುತ್ತಾನೆ. ಹೇಗೆ ಎನ್ನುವುದನ್ನು ನೀವೇ ನೋಡರ್ಬೇಕು.ಗೆಲಾ ಬಬ್ಲೂನಿ ತಾವೇ ಬರೆದ ಚಿತ್ರಕಥೆಯನ್ನು ಎಲ್ಲೂ ನಿರಾಸೆ ಹುಟ್ಟಿಸದೆ, ಆಸಕ್ತಿ ಕಡಮೆಯಾಗದಂತೆ ಪ್ರೇಕ್ಷಕರನ್ನು ಸೆಳೆಯುತ್ತಾ ಕಥೆ ಬಿಚ್ಚಿಡುತ್ತಾ, ಬೆಚ್ಚಿ ಬೀಳಿಸುತ್ತಾ ಹೋಗುತ್ತಾರೆ. ಅಚ್ಚರಿ ಎಂದರೆ ಗೆಲಾ ನಿದರ್ೇಶನದ ಮೊದಲ ಚಿತ್ರವಿದು. ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾಜರ್ಿಯಾ ಬಬ್ಲೂನಿ ಇವರ ಸೋದರ.ಕೊಲ್ಲುವ ದೃಶ್ಯಗಳಿವೆಯಾದರೂ ರಕ್ತ ನಿಮ್ಮನ್ನು ಕಾಡುವುದಿಲ್ಲ ಎನ್ನುವುದು ಚಿತ್ರದ ಹೆಚ್ಚುಗಾರಿಕೆ. ಜತೆಗೆ ಅಂತ್ಯದಲ್ಲಿ ಪ್ರೇಕ್ಷಕನನ್ನು ಹೃದಯ ತಟ್ಟುವಂತೆ ಮಾಡುವ ದೃಶ್ಯವೂ ಇದೆ ಎನ್ನುವುದು ಈ ಚಿತ್ರದ ಮತ್ತೊಂದು ವೈಶಿಷ್ಟ್ಯ.ತಾಂತ್ರಿಕವಾಗಿ, ಕಥೆಯ ನಿರೂಪಣೆಯಲ್ಲಿ ಈ ಚಿತ್ರ ಥ್ರಿಲ್ಲರ್ಗಳಲ್ಲೇ ವಿಶೇಷವಾದದ್ದು ಎಂಬ ಪ್ರಶಂಸೆಗೆ ಪಾತ್ರವಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: