ಕೈಲಾಸಂ ಕಿರು ಸಿನೆಮಾ …

– ರೇವನ್ ಪಿ.ಜೇವೂರ್

kannada bloggers

ಟಿ .ಪಿ.ಕೈಲಾಸಂ..ನಿಜಕ್ಕೂ ಆಸಮ್ಮೇ ಬಿಡಿ. ನಮ್ಮ ನಡುವಿನ ಜೀವಂತ ಕ್ಯಾರೆಕ್ಟರ್ ಗಳನ್ನ ರಂಗಕ್ಕೆ ತಂದಖ್ಯಾತಿ ಇವರದ್ದು. ಈಗ ಇದೇ ವ್ಯಕ್ತಿ ಜೀವಂತವಾದ್ರೆ, ಹೇಗೆ. ಹೌದು…! ರೇಡಿಯೋ ಜಾಕಿ ಶ್ರೀನಿ ಇಂತಹವೊಂದುಪ್ರಯೋಗ ಮಾಡಿದ್ದಾರೆ. ಪತ್ರಕರ್ತ ಮತ್ತು ರಂಗಕರ್ಮಿ ಎ.ಎಸ್.ಮೂರ್ತಿಯವರು ಬರೆದ “ಟಿಪಿಕಲ್ ಆರಥಿ” ನಾಟಕಆಧಾರಿಸಿ ಎಸ್.ವಿ. ಬಾಬು ನಿರ್ಮಾಣದಲ್ಲಿ ಸ್ವತ: ಶ್ರೀನಿನೇ ಒಂದು ಕಿರು ಚಿತ್ರ ಮಾಡಿದ್ದಾರೆ. ಹಾಗೆ ಸಿದ್ಧವಾದ ಆ ಚಿತ್ರವೇ”ಸಿಂಪ್ಲಿ ಕೈಲಾಸಂ”…

ಈ ಕಿರು ಚಿತ್ರದ ಪ್ರತಿ ಪ್ರೇಮ್ ಅದ್ಭುತವಾಗಿದೆ. ಶ್ರೀಷ್ ಕುಂದರವಲ್ಲಿ ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ನಿಜಕ್ಕೂ ಒಂದುಕಲಾಕೃತಿಯೇ ಆಗಿದೆ. ಅಷ್ಟು ಚೆಂದಗೆ ಇಡೀ ಚಿತ್ರವನ್ನ ತೆಗೆಯಲಾಗಿದೆ. ದೃಶ್ಯ ಸಂಯೋಜನೆಗೆ ಪ್ಲಾನ್ ಮಾಡಿದಲೈಟಿಂಗ್ ಆಗಿರಲಿ. ಕ್ಯಾಮೆರಾ ಯ್ಯಾಂಗಲೇ ಆಗಿರಬಹುದು. ಎಲ್ಲವೂ ಮನಮೋಹಕ.

ಕಾರಣ, ಅಷ್ಟು ಶೃದ್ಧೆಯಿಂದಲೇಲೋಕಲ್ ಮೋಷನ್ ಫಿಕ್ಚ್ ಟೀಮ್ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ.ಚಿತ್ರದ ಆರಂಭ ಶ್ರೀನಗರ ಕಿಟ್ಟಿ ನಿರೂಪಣೆಯಲ್ಲಿಯೇ ಸಾಗುತ್ತದೆ. ಟಿ.ಪಿ.ಕೈಲಾಸಂ ಅವರ ೧೭ ನಾಟಕಗಳ ಸಂಕ್ಷಿಪ್ತವಿವರಣೆನೂ ಇಲ್ಲಿ ದೊರೆಯುತ್ತದೆ. ಟಿ.ಪಿ.ಕೈಲಾಸಂ ಅವರ ವಿಶಿಷ್ಟ ಕನ್ನಡದ ಬಗ್ಗೆನೂ ಇಲ್ಲಿ ಪುಟ್ಟದೊಂದು ಪರಿಚಯವೂಸಿಗುತ್ತದೆ…ಇದಾದ ಮೇಲೆ ಇಲ್ಲಿ ಟಿ.ಪಿ.ಕೈಲಾಸಂ ಖುದ್ ಮಾತನಾಡಲು ಶುರು ಮಾಡುತ್ತಾರೆ…ಟಿ.ಪಿ.ಕೈಲಾಸಂ ಇಲ್ಲ ಅನ್ನೋದು ಗೊತ್ತೆಯಿದೆ.

ಆದ್ರೆ, ಇಲ್ಲಿ ಆ ಪಾತ್ರಕ್ಕೆ ರೇಡಿಯೋ ಜಾಕಿ ಮತ್ತು ಅಭಿನಯ ತಂರಂಗದವಿದ್ಯಾರ್ಥಿ ಶ್ರೀನಿ ಜೀವ ತುಂಬಿದ್ದಾರೆ. ಟಿ.ಪಿ.ಕೈಲಾಸಂ ಥರದ ಗೆಟಪ್. ಸಿಗರೇಟ್ ಸೇದುವ ಅವರ ಸ್ಟೈಲ್. ಸರಾಬು ಕುಡಿಯೋ ಖದರ್. ಹಂಗಂಗೆ ಇಲ್ಲಿ ಕಣ್ಣುಮುಂದೆಕಟ್ಟುತ್ತವೆ…ಆ ಕ್ಷಣವೇ ಕೈ ಇಲ್ಲಿ ಇನ್ನು ಜೀವಂತ ಅನ್ನೋಥರವೇ ಭಾಸವಾಗುತ್ತದೆ…ಕೈಲಾಸಂ ಅನೇಕ ಪಾತ್ರಗಳನ್ನ ರಂಗಕ್ಕೆ ತಂದಿದ್ದಾರೆ. ಅದೇ ಪಾತ್ರಗಳೇ ಈ ಚಿತ್ರದಲ್ಲಿ ಮಾತನಾಡುತ್ತವೆ. ಕೈಲಾಸಂಗೇನೆ ಹತ್ತು ಹಲವು ಪ್ರಶ್ನೆಗಳನ್ನ ಕೇಳುತ್ತವೆ. ಆದ್ರೆ,ಎಲ್ಲ ಪ್ರಶ್ನೆಗಳಿಗೂ ಉತ್ತರಿಸದೇನೆ ಕೈಲಾಸಂ ಮುಗುಳು ನಗೆಯಲ್ಲಿಯೇ ಅವುಗಳನ್ನೆಲ್ಲ ತೇಲಿಸಿ ಮುಂದಿನ ಕ್ಯಾರೆಕ್ಟರ್ ಗಳ ಬಗ್ಗೆ ತಮ್ಮಲಿಯೇ ಪ್ರಶ್ನಿಸಿಕೊಂಡುಮುನ್ನಡೆಯುತ್ತಾರೆ…

ಈ ರೀತಿ ಚಿತ್ರದಲ್ಲಿ “ಸೂಳೆ” ನಾಟಕ ಪಾತ್ರ ಬರುತ್ತದೆ. ಟೊಳ್ಳು-ಗಟ್ಟಿ ರಚನೆಯ ಕ್ಯಾರೆಕ್ಟರ್ ಗಳು ಹಾದು ಹೋಗುತ್ತವೆ. ಈ ಎಲ್ಲ ಪ್ರಮುಖ ಪಾತ್ರಕ್ಕೆ ನಟಿ ಛಾಯಾ ಸಿಂಗ್ ಜೀವ ತುಂಬಿದ್ದಾರೆ. ಹಾಗಂತ ಛಾಯ ಇಲ್ಲಿ ಎಲ್ಲೂ ಒಂದೇ ಥರ ಕಾಣಿಸುವುದಿಲ್ಲ. ಒಂದೇ ಥರದ ಅಭಿನಯವೂ ಇಲ್ಲ ಬಿಡಿ. ಅಂತಹ ಕಲಾತ್ಮಕ ನಟನೆಯನ್ನ ಛಾಯಾ ಸಿಂಗ್”ಸಿಂಪ್ಲಿ ಕೈಲಾಸಂ” ನಲ್ಲಿ ತೋರಿದ್ದಾರೆ. ಸದ್ಯಕ್ಕೆ ಈ ಚಿತ್ರ ಬೆಂಗಳೂರಲ್ಲಿ ಇತ್ತೀಚಿಗೆ ಪೂರ್ವ ಪ್ರದರ್ಶನ ಕಂಡಿದೆ. ಮೆಚ್ಚುಗೆನೂ ಪಡೆದಿದೆ…

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: