ಇದು ವಾಕ್ಚಿತ್ರ.ಕಾ೦…

ವಾಕ್ಚಿತ್ರ.ಕಾ೦ (www.vaakchitra.com)

ಚಲನಚಿತ್ರರ೦ಗದ ಇತ್ತೀಚಿನ ಸುದ್ದಿ , ಪೂರ್ವ ಸಮೀಕ್ಷೆ , ವಿಮರ್ಶೆ,ಲೇಖನಗಳ ಹಾಗೂ ಮಾಹಿತಿಯ ಅಂತರ್ಜಾಲ ಸಂಗಾತಿ , ಕನ್ನಡಿಗರಿಂದ ಕನ್ನಡಿಗರಿಗಾಗಿ, ಕನ್ನಡತನವನ್ನು ಉಳಿಸಿ , ಬೆಳೆಸಲು ಪ್ರಾರಂಭವಾದ ಅಂತರ್ಜಾಲ ತಾಣವೆ ವಾಕ್ಚಿತ್ರ.ಕಾ೦ .

ನಮ್ಮ ಬಗ್ಗೆ ಒಂದಿಷ್ಟು ಮಾಹಿತಿ : ಒಂದು ಸೃಜನಶೀಲ ಉದ್ದೇಶದೊಂದಿಗೆ ಪ್ರಾರಂಭವಾಗಿರುವ ಪುಟ್ಟ ಸಂಸ್ಥೆಯೇ ವಾಕ್ಚಿತ್ರ.ಕಾ೦ . ನಮ್ಮ ಸಂಸ್ಥೆಯಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿಲ್ಲ , ಓಹೋ ಎಂದು ಉದ್ಗರಿಸಬಹುದಾದ ಅತ್ಯಾಧುನಿಕ ಉಪಕರಣಗಳಿಲ್ಲ , ರಾಜ್ಯದೆಲ್ಲೆಡೆ ನಮ್ಮ ಶಾಖಾ ಕಚೇರಿಗಳಿಲ್ಲ , ದಶಕಗಳಷ್ಟು ಇತಿಹಾಸವಿರುವ ಸಂಸ್ಥೆಯಂತೂ ಅಲ್ಲವೇ ಅಲ್ಲ!! .

ಆದರೆ ಹಲವು ಇಲ್ಲಗಳ ಮಧ್ಯೆಯೇ ಒಂದಷ್ಟು ಇದೆ ಎಂಬುದನ್ನೇನಾದರೂ ಸಾಧಿಸಿ ತೋರಿಸುವ ಛಲ ನಮ್ಮದು . ಹೀಗಾಗಿ ಸಹಜವಾಗಿಯೇ ನಾವಿನ್ನೂ ಚಿಕ್ಕವರೆಂಬ ವಿನೀತ ಭಾವವಿದೆ ಹಾಗೂ ನಿಮ್ಮೆಲ್ಲರ ಆಶೀರ್ವಾದ , ಪ್ರೋತ್ಸಾಹಗಳಿಂದ ಮುಂದೊಂದು ದಿನ ಈ ಪುಟ್ಟ ಗಿಡ ಬೆಳೆದು ಹೆಮ್ಮರವಾದರೂ ಸಹ ಇದೇ ವಿನೀತ ಭಾವವನ್ನು ಉಳಿಸಿಕೊಂಡು ಹೋಗಬೇಕೆನ್ನುವ ಬದ್ಧತೆಯಿದೆ. ಈಗ ನಿಮ್ಮ ಮುಂದಿರುವ ವೆಬ್ ಪುಟ ಅದರ ಒಂದು ಅಂಕುರವಷ್ಟೇ .

ಮುಂಬರುವ ದಿನಗಳಲ್ಲಿ ಹಲವು ಮಜಲುಗಳಲ್ಲಿ , ವಿವಿಧ ವಿಷಯ ವೈವಿಧ್ಯಗಳೊಡನೆ ಇದು ರಂಗೇರಿಸಿಕೊಳ್ಳಲಿದೆ , ಬೆಡಗು-ಬಿನ್ನಾಣವನ್ನು ತೋರಲಿದೆ . ಆ ಸಂದರ್ಭದಲ್ಲಿ, ಪ್ರಸ್ತುತ ಈ ಪುಟವನ್ನು ಅವಲೋಕಿಸುತ್ತಿರುವ ನೀವುಗಳೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಈ ವಾಕ್ಚಿತ್ರ.ಕಾ೦ ನ ಒಂದು ಭಾಗವೇ ಆಗಿಹೋಗಿರುತ್ತೀರಿ ಎಂಬ ವಿಶ್ವಾಸ ನಮ್ಮದು .

 

ನಿಮ್ಮೆಲ್ಲರ ಆಶೋತ್ತರಗಳೇನು? ನಿಮ್ಮ ಅಭಿರುಚಿ ಎಂಥಾದ್ದು? ಒಂದು ಅಪ್ಪಟ ಕನ್ನಡ ಹೃದಯದಿಂದ ನೀವೇನನ್ನು ನಿರೀಕ್ಷಿಸುತ್ತೀರಿ ಎಂಬುದರ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ. ಇದನ್ನೆಲ್ಲಾ ರೂಪಿಸಿ ನಿಮ್ಮ ಮುಂದಿಡಲು ನಮಗೊಂದಿಷ್ಟು ಸಮಯ-ಸಲಹೆ-ಸಹಕಾರ ಬೇಕು. ದೇವರ, ಹಿರಿಯರ ಆಶೀರ್ವಾದಗಳ ಜೊತೆಗೇ, ಸಹೃದಯಿಗಳಾದ ನಿಮ್ಮ ಹಾರೈಕೆಯೂ ಬೇಕು. ಅದನ್ನು ನೀವು ಖಂಡಿತಾ ನೀಡುತ್ತೀರಿ ಎಂಬ ವಿಶ್ವಾಸ ನಮ್ಮದು….

ಮಾರ್ದನಿ:

ನಿಮ್ಮ ಪ್ರತಿಕ್ರಿಯೆ ನಮಗೆ ಮುಖ್ಯ ಓದುಗ ಮಹಾಷಯರ ಸಧಾಭಿಪ್ರಾಯ ಹಾಗೂ ಅಭಿರುಚಿಗೆ ತಕ್ಕಂತೆ ತಾಣವನ್ನು ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ, ಅದಕ್ಕೆ ನಿಮ್ಮ ಪ್ರೋತ್ಸಾಹ ಅತ್ಯಗತ್ಯ. ನಿಮ್ಮ ಅಂಗಳ, ನಿಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ನಮ್ಮೊಡನೆ ಹಂಚಿಕೊಳ್ಳಿ. ನಿಮ್ಮ ಬೇಡಿಕೆಗೆ, ಪ್ರೀತಿಪೂರ್ವಕ ಆಗ್ರಹಕ್ಕೆ ವಾಕ್ಚಿತ್ರ.ಕಾ೦ ತಂಡ ಸದಾ ಸಿದ್ಧವಾಗಿರುತ್ತದೆ.

ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಈ ಮೇಲ್ ಬಳಸಿ: info@vaakchitra.com

ನಿಮ್ಮಲ್ಲಿ ಸುದ್ದಿ, ಲೇಖನ, ಚಿತ್ರ, ವಿಡಿಯೋ ಅಥವಾ ಯಾವುದೇ ಉಪಯುಕ್ತ ಮಾಹಿತಿ ಇದ್ದರೆ ತಡ ಮಾಡದೇ ನಮಗೆ ಕಳುಹಿಸಿ : info@vaakchitra.com

ಸ್ವೀಕರಿಸಿ…. ಪ್ರೋತ್ಸಾಹಿಸಿ…. ನಮ್ಮನ್ನು ಹರಸಿ…

ಹೃದಯಪೂರ್ವಕ ನಮಸ್ಕಾರಗಳೊಡನೆ,

ನಿಮ್ಮ ಪ್ರೀತಿಯ,

ವಾಕ್ಚಿತ್ರ.ಕಾ೦ ಬಳಗ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: