Empty Boxcars…

WORLD PREMIERE SCREENING of EMPTY BOXCARS

A new documentary on the triumph and tragedy of Bulgaria’s response to the “Final Solution” during World War II, 1940-1943.

Genre: Historic/Documentary
Studio:Gamut Media
Release Date: October 11,
Advertisements

ಇದು ವಾಕ್ಚಿತ್ರ.ಕಾ೦…

ವಾಕ್ಚಿತ್ರ.ಕಾ೦ (www.vaakchitra.com)

ಚಲನಚಿತ್ರರ೦ಗದ ಇತ್ತೀಚಿನ ಸುದ್ದಿ , ಪೂರ್ವ ಸಮೀಕ್ಷೆ , ವಿಮರ್ಶೆ,ಲೇಖನಗಳ ಹಾಗೂ ಮಾಹಿತಿಯ ಅಂತರ್ಜಾಲ ಸಂಗಾತಿ , ಕನ್ನಡಿಗರಿಂದ ಕನ್ನಡಿಗರಿಗಾಗಿ, ಕನ್ನಡತನವನ್ನು ಉಳಿಸಿ , ಬೆಳೆಸಲು ಪ್ರಾರಂಭವಾದ ಅಂತರ್ಜಾಲ ತಾಣವೆ ವಾಕ್ಚಿತ್ರ.ಕಾ೦ .

ನಮ್ಮ ಬಗ್ಗೆ ಒಂದಿಷ್ಟು ಮಾಹಿತಿ : ಒಂದು ಸೃಜನಶೀಲ ಉದ್ದೇಶದೊಂದಿಗೆ ಪ್ರಾರಂಭವಾಗಿರುವ ಪುಟ್ಟ ಸಂಸ್ಥೆಯೇ ವಾಕ್ಚಿತ್ರ.ಕಾ೦ . ನಮ್ಮ ಸಂಸ್ಥೆಯಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಿಲ್ಲ , ಓಹೋ ಎಂದು ಉದ್ಗರಿಸಬಹುದಾದ ಅತ್ಯಾಧುನಿಕ ಉಪಕರಣಗಳಿಲ್ಲ , ರಾಜ್ಯದೆಲ್ಲೆಡೆ ನಮ್ಮ ಶಾಖಾ ಕಚೇರಿಗಳಿಲ್ಲ , ದಶಕಗಳಷ್ಟು ಇತಿಹಾಸವಿರುವ ಸಂಸ್ಥೆಯಂತೂ ಅಲ್ಲವೇ ಅಲ್ಲ!! .

ಆದರೆ ಹಲವು ಇಲ್ಲಗಳ ಮಧ್ಯೆಯೇ ಒಂದಷ್ಟು ಇದೆ ಎಂಬುದನ್ನೇನಾದರೂ ಸಾಧಿಸಿ ತೋರಿಸುವ ಛಲ ನಮ್ಮದು . ಹೀಗಾಗಿ ಸಹಜವಾಗಿಯೇ ನಾವಿನ್ನೂ ಚಿಕ್ಕವರೆಂಬ ವಿನೀತ ಭಾವವಿದೆ ಹಾಗೂ ನಿಮ್ಮೆಲ್ಲರ ಆಶೀರ್ವಾದ , ಪ್ರೋತ್ಸಾಹಗಳಿಂದ ಮುಂದೊಂದು ದಿನ ಈ ಪುಟ್ಟ ಗಿಡ ಬೆಳೆದು ಹೆಮ್ಮರವಾದರೂ ಸಹ ಇದೇ ವಿನೀತ ಭಾವವನ್ನು ಉಳಿಸಿಕೊಂಡು ಹೋಗಬೇಕೆನ್ನುವ ಬದ್ಧತೆಯಿದೆ. ಈಗ ನಿಮ್ಮ ಮುಂದಿರುವ ವೆಬ್ ಪುಟ ಅದರ ಒಂದು ಅಂಕುರವಷ್ಟೇ .

ಮುಂಬರುವ ದಿನಗಳಲ್ಲಿ ಹಲವು ಮಜಲುಗಳಲ್ಲಿ , ವಿವಿಧ ವಿಷಯ ವೈವಿಧ್ಯಗಳೊಡನೆ ಇದು ರಂಗೇರಿಸಿಕೊಳ್ಳಲಿದೆ , ಬೆಡಗು-ಬಿನ್ನಾಣವನ್ನು ತೋರಲಿದೆ . ಆ ಸಂದರ್ಭದಲ್ಲಿ, ಪ್ರಸ್ತುತ ಈ ಪುಟವನ್ನು ಅವಲೋಕಿಸುತ್ತಿರುವ ನೀವುಗಳೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಈ ವಾಕ್ಚಿತ್ರ.ಕಾ೦ ನ ಒಂದು ಭಾಗವೇ ಆಗಿಹೋಗಿರುತ್ತೀರಿ ಎಂಬ ವಿಶ್ವಾಸ ನಮ್ಮದು .

 

ನಿಮ್ಮೆಲ್ಲರ ಆಶೋತ್ತರಗಳೇನು? ನಿಮ್ಮ ಅಭಿರುಚಿ ಎಂಥಾದ್ದು? ಒಂದು ಅಪ್ಪಟ ಕನ್ನಡ ಹೃದಯದಿಂದ ನೀವೇನನ್ನು ನಿರೀಕ್ಷಿಸುತ್ತೀರಿ ಎಂಬುದರ ಬಗ್ಗೆ ನಮಗೆ ಸ್ಪಷ್ಟ ಅರಿವಿದೆ. ಇದನ್ನೆಲ್ಲಾ ರೂಪಿಸಿ ನಿಮ್ಮ ಮುಂದಿಡಲು ನಮಗೊಂದಿಷ್ಟು ಸಮಯ-ಸಲಹೆ-ಸಹಕಾರ ಬೇಕು. ದೇವರ, ಹಿರಿಯರ ಆಶೀರ್ವಾದಗಳ ಜೊತೆಗೇ, ಸಹೃದಯಿಗಳಾದ ನಿಮ್ಮ ಹಾರೈಕೆಯೂ ಬೇಕು. ಅದನ್ನು ನೀವು ಖಂಡಿತಾ ನೀಡುತ್ತೀರಿ ಎಂಬ ವಿಶ್ವಾಸ ನಮ್ಮದು….

ಮಾರ್ದನಿ:

ನಿಮ್ಮ ಪ್ರತಿಕ್ರಿಯೆ ನಮಗೆ ಮುಖ್ಯ ಓದುಗ ಮಹಾಷಯರ ಸಧಾಭಿಪ್ರಾಯ ಹಾಗೂ ಅಭಿರುಚಿಗೆ ತಕ್ಕಂತೆ ತಾಣವನ್ನು ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ, ಅದಕ್ಕೆ ನಿಮ್ಮ ಪ್ರೋತ್ಸಾಹ ಅತ್ಯಗತ್ಯ. ನಿಮ್ಮ ಅಂಗಳ, ನಿಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ನಮ್ಮೊಡನೆ ಹಂಚಿಕೊಳ್ಳಿ. ನಿಮ್ಮ ಬೇಡಿಕೆಗೆ, ಪ್ರೀತಿಪೂರ್ವಕ ಆಗ್ರಹಕ್ಕೆ ವಾಕ್ಚಿತ್ರ.ಕಾ೦ ತಂಡ ಸದಾ ಸಿದ್ಧವಾಗಿರುತ್ತದೆ.

ನಿಮ್ಮ ಅಭಿಪ್ರಾಯಗಳನ್ನು ತಿಳಿಸಲು ಈ ಮೇಲ್ ಬಳಸಿ: info@vaakchitra.com

ನಿಮ್ಮಲ್ಲಿ ಸುದ್ದಿ, ಲೇಖನ, ಚಿತ್ರ, ವಿಡಿಯೋ ಅಥವಾ ಯಾವುದೇ ಉಪಯುಕ್ತ ಮಾಹಿತಿ ಇದ್ದರೆ ತಡ ಮಾಡದೇ ನಮಗೆ ಕಳುಹಿಸಿ : info@vaakchitra.com

ಸ್ವೀಕರಿಸಿ…. ಪ್ರೋತ್ಸಾಹಿಸಿ…. ನಮ್ಮನ್ನು ಹರಸಿ…

ಹೃದಯಪೂರ್ವಕ ನಮಸ್ಕಾರಗಳೊಡನೆ,

ನಿಮ್ಮ ಪ್ರೀತಿಯ,

ವಾಕ್ಚಿತ್ರ.ಕಾ೦ ಬಳಗ

ಡಿಸೆಂಬರ್ 10ರಂದು ನಿಮ್ಮೆದುರಿಗೆ…

-ಸಾಂಗತ್ಯ

ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಹೊಸ ಚಲನಚಿತ್ರ “ಕನಸೆಂಬೋ ಕುದುರೆಯನ್ನೇರಿ” ಡಿ. 10 ರಂದು ಸಂಜೆ 7 ಕ್ಕೆ ಬೆಂಗಳೂರಿನ ಕೋರಮಂಗಲದ ಫೋರಂನ ಪಿವಿಆರ್ ಥಿಯೇಟರ್ ನಲ್ಲಿ ಬಿಡುಗಡೆಗೊಳ್ಳಲಿದೆ.

ಅಮರೇಶ ನುಗಡೋಣಿಯವರ ಕಥೆಯ ಎಳೆಯನ್ನಾಧರಿಸಿ ರೂಪಿಸಿದ ಈ ಚಿತ್ರ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ರೋಮ್ ನಲ್ಲಿ ನಡೆದ ಏಷ್ಯಾಟಿಕ್ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಎನ್ಇಟಿಪಿಎಸಿ ಪ್ರಶಸ್ತಿ, ರಜತ ಪದಕ ಪ್ರಶಸ್ತಿ ಅತ್ಯುತ್ತಮ ಚಿತ್ರಕಥೆಗೆ, 2009 ರ ರಜತ ಕಮಲ ಗೌರವ ಗಳಿಸಿದೆ.

ಏಷ್ಯಾಟಿಕ್ ಚಿತ್ರೋತ್ಸವ, ವಿಸೋಲ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಫಿಲಿಫೈನ್ಸ್ ನ ಸಿನಿಮನಿಲಾ ಅಂತಾರಾಷ್ಟ್ರೀಯ ಚಿತ್ರೋತ್ಸವ, ಸ್ವೀಡನ್ ನ ಗೊಟಬರ್ಗ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಯುಕೆ ಯ ಗ್ಲಾಸ್ಗೋ ಚಿತ್ರೋತ್ಸವ, ಮುಂಬಯಿಯ ಎಂಎಎಂಐ ಚಿತ್ರೋತ್ಸವ,ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವ, ತ್ರಿವೇಂದ್ರಂ ಚಿತ್ರೋತ್ಸವ, ಕೋಲ್ಕತ್ತಾದ ಸಿನಿ ಸೆಂಟ್ರಲ್ ಉತ್ಸವ, ಚೆನ್ನೈ ಅಂತಾರಾಷ್ಟ್ರೀಯ ಚಿತ್ರೋತ್ಸವ, ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ಪಾಲ್ಗೊಂಡಿದೆ

 

ಕ್ಯಾಮರಾ ಚಮತ್ಕಾರ …

ಚಿತ್ರಗಳು :ವೀಣಾ ನರಸಶೆಟ್ಟಿ

ಛಾಯಾಗ್ರಾಹಕ ಎಚ್ .ಎಂ.ರಾಮಚಂದ್ರ ಅವರು ಸಿನಿಮಾದ ದೃಶ್ಯಗಳನ್ನು  ಚಿತ್ರೀಕರಿಸುತ್ತಿರುವ  ದೃಶ್ಯಗಳ ಒಂದು ಜ್ಹಲಕ್ ಇಲ್ಲಿದೆ…

ಇನ್ನಷ್ಟು ಫೋಟೋಗಳು : ಅವಧಿ

ಸಿನಿಮಾ ಚಿತ್ರೀಕರಣ ಒಂದು ನೋಟ

ಬಿ.ಸುರೇಶ ಅವರ ನಿರ್ದೇಶನದ ಪುಟ್ಟಕ್ಕನ ಹೈವೇ ಸಿನಿಮಾ ಚಿತ್ರೀಕರಣ ಸಂದರ್ಭದ ಒಂದು ನೋಟ ಇಲ್ಲಿದೆ .  ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆಪ್ರಕಾಶ್ ರೈ ,  ಶೈಲಜಾನಾಗ್ , ಶ್ರುತಿ ಮುಂತಾದ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರ ಕೃಪೆ : ಪುಟ್ಟಕ್ಕನ ಹೈವೇ

ಕ್ಯಾಮರಾ ಕಣ್ಣಿನಲ್ಲಿ ಚಲನಚಿತ್ರೋತ್ಸವ …

ಬೆಂಗಳೂರಿನ ಯವನಿಕಾದಲ್ಲಿ ಕರ್ನಾಟಕ ಚಲನ ಅಕಾಡೆಮಿ ಆಯೋಜಿಸಿದ್ದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭದ ಒಂದು ನೋಟ ಇಲ್ಲಿದೆ .ಟಿ.ಎಸ್.ನಾಗಾಭರಣ ,ಶಾಜಿ ಕರುಣ್, ಜಯರಾಮ ರಾಜೇ ಅರಸ್ , ಜಾಯ್ ಯಂಗ್ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಚಿತ್ರಗಳು : ಚಂದ್ರ ಕೀರ್ತಿ

ಮತ್ತಷ್ಟು ಫೋಟೋಗಳು : ಅವಧಿ

ಅನಂತ್ ನಾಗ್ ಅವರ ‘ನನ್ನ ತಮ್ಮ ಶಂಕರ’…