Archive for the ‘Studio charlie’ Category

Amul Punch

10X20 Taaja Maal

ಅಮುಲ್ ‘ಫಿಲಂ’ ಪಂಚ್

ಮಹಮದ್ ‘ಫಿಲಂ’ ಮ್ಯಾಜಿಕ್

ಕೃಪೆ: ಪ್ರಜಾವಾಣಿ

ಅಮುಲ್ ‘ಫಿಲಂ’ ಪಂಚ್

ಮಹಮದ್ ಮ್ಯಾಜಿಕ್

ಕೃಪೆ: ಪ್ರಜಾವಾಣಿ

ಅಮುಲ್ ‘ಫಿಲಂ’ ಪಂಚ್

ಅಮುಲ್ ‘ಫಿಲಂ’ ಪಂಚ್

ಅಮುಲ್ ‘ಫಿಲಂ’ ಪಂಚ್ ೩

‘ಅಮುಲ್’ ಸಿನೆಮಾ ಪಂಚ್

ಸದ್ದಿಲ್ಲದೆ ಇನ್ನೂ ಕಾಡುತ್ತಿದ್ದಾನೆ

ಚಾರ್ಲಿ ಚಾಪ್ಲಿನ್ ಜಗತ್ತನ್ನು ಸದ್ದಿಲ್ಲದೆ ಇನ್ನೂ ಕಾಡುತ್ತಿದ್ದಾನೆ. ಆತ ಉಕ್ಕಿಸಿದ ನಗು, ಅಳು ಎರಡೂ ಮರೆಯಲಾಗದೆ ಉಳಿದಿವೆ. ಚಾರ್ಲಿ ಚಾಪ್ಲಿನ್ ಹುಟ್ಟುಹಬ್ಬದ ದಿನ ‘ಮ್ಯಾಜಿಕ್ ಕಾರ್ಪೆಟ್”ನ ಬರಹವನ್ನು ಓದಿದ ನಮ್ಮ ಓದುಗರಾದ ಅಶೋಕ್ ಅರುಲ್ ಒಂದು ಭಿನ್ನ ನಮನವನ್ನು ಈ ಫೋಟೋ ಮೂಲಕ ಸಲ್ಲಿಸಿದ್ದಾರೆ. ಥ್ಯಾಂಕ್ಸ್ ಅಶೋಕ್. ಚಾಪ್ಲಿನ್ ನ ನೆನಪು ಇನ್ನಷ್ಟು ಹಸಿರಾಗಿಸಿದ್ದಕ್ಕೆ.

ಹಾಗೆಯೇ ಕಳ್ಳ ಕುಳ್ಳ ಬ್ಲಾಗ್ನಿಂದ ನಾವು ಅನಾಮತ್ತಾಗಿ ಎತ್ತಿಕೊಂಡಿದ್ದ ಚಾಪ್ಲಿನ್ ಕುರಿತ ಭಿನ್ನ ಬರಹ-‘ಅಂತೂ ಬಂತು ಕೊನೆಯ ದಿನ’ ಓದುಗರ ಪ್ರಶಂಸೆಗೆ ಪಾತ್ರವಾಗಿದೆ. ಥ್ಯಾಂಕ್ಸ್..

 

ಸಿನಿಮಾ ಜಗತ್ತಿನ ‘ಮಂಟೇಸ್ವಾಮಿ’

-ಜಿ ಎನ್ ಮೋಹನ್

ತಮ್ಮ ‘ಸೀ ಲಿಸನ್’ ಸ್ಟುಡಿಯೋದಲ್ಲಿ ಪರಮೇಶ್

 

ಪರಮೇಶ್ವರ ಗುರುಸ್ವಾಮಿ. ಸಿನೆಮಾ ಲೋಕದ ನಡೆದಾಡುವ ವಿಶ್ವಕೋಶ. ‘ಮೌನ ಬಂಗಾರ’ ಎಂಬುದು ಗೊತ್ತಾಗಬೇಕಾದರೆ ಪರಮೇಶ್ ಗಿಂತ  ಇನ್ನೊಂದು ಉದಾಹರಣೆ ಬೇಡ.

ಒಮ್ಮೆ ಹೀಗಾಯ್ತು… ದಶಕಗಳ ಹಿಂದೆ ಯಾವುದೋ ಜಮಾನಾದಲ್ಲಿ ಟಿ ವಿ ಯಲ್ಲಿ ಒಂದು ಸಿನೆಮಾ ನೋಡಿದ್ದೆ. ಶೇಕ್ಸ್ಪಿಯರನ ಮ್ಯಾಕ್ಬೆತ್ ನಾಟಕ ಆಧರಿಸಿದ ಸಿನೆಮಾ. ಓಹ್! ಅದಕ್ಕಿಂತ ಚೆನ್ನಾಗಿ ಒಂದು ಸಾಹಿತ್ಯ ಕೃತಿಯನ್ನು ತೆರೆಗೆ ಏರಿಸಲು ಸಾಧ್ಯವೇ ಇಲ್ಲವೇನೋ..? ಶೇಕ್ಸ್ಪಿಯರ್ ಬರೆದ ನಾಟಕ ಚೆನ್ನಾಗಿತ್ತೋ..ಅಥವಾ ಈ ಸಿನೆಮಾ ಚೆನ್ನಾಗಿತ್ತೋ ಎಂದು ಪಂಥ ಕಟ್ಟಬಹುದಿತ್ತು. ಆ ರೀತಿ ಇತ್ತು. ಟಿ ವಿ ಆನ್ ಮಾಡಿದಾಗ ಸಿನೆಮಾ ಆರಂಭವಾಗಿ ಹೋಗಿತ್ತು. ಹೆಸರು ಗೊತ್ತಾಗಲಿಲ್ಲ. ಆದರೆ ಆ ಸಿನೆಮಾ ತಲೆಯಿಂದ ಮಾಸಿ ಹೋಗಲಿಲ್ಲ. ಎಷ್ಟೋ ಸಿನೆಮಾ ಮಂದಿಯನ್ನು ಕೇಳಿದೆ. ಗೊತ್ತಾಗಲಿಲ್ಲ. ಮೊನ್ನೆ ಪರಮೇಶ್ ಅವರ ಮನೆಯಲ್ಲಿ ಕುಳಿತಿದ್ದಾಗ ಈ ನೆನಪು ಹಂಚಿಕೊಂಡೆ. ಪರಮೇಶ್ ತಕ್ಷಣ ಅದು -ಥ್ರೋನ್  ಆಫ್ ಬ್ಲಡ್ -ಕುರಸೋವನದ್ದು ಎಂದರು. ಒಂದು ಎಳೆಯ ಮೇಲೆಯೇ ಸಿನೆಮಾ ಯಾವುದು ಎಂದು ಹೇಳಲು ಖಂಡಿತಾ ಪರಮೇಶ್ ಗೆ ಮಾತ್ರ ಸಾಧ್ಯ.

ವಿಜಯ ಕರ್ನಾಟಕ ಆರಂಭವಾದಾಗ ಸಿನಿಮಾ ಪುರವಣಿಯಲ್ಲಿ ‘ಚಿತ್ರಬ್ರಹ್ಮರು’ ಮಾಲಿಕೆ ಬರೆದರು. ಸಿನೆಮಾ ಜಗತ್ತಿನ ಅಸಮಾನ್ಯರನ್ನು ಇಷ್ಟು ಸರಳವಾಗಿ, ಮನ ಮುಟ್ಟುವಂತೆ ಬರೆಯಲು ಅವರೊಬ್ಬರಿಗೆ ಮಾತ್ರ ಸಾಧ್ಯ. ನಾಲ್ಕು ಸಿಗರೇಟ್ ಕೈಯಲ್ಲಿದ್ದರೆ ಪುಂಖಾನುಪುಂಖವಾಗಿ ಸಿನೆಮಾ ಜಗತ್ತು ಮಂಟೇಸ್ವಾಮಿಯ ಕಾವ್ಯದಂತೆ ಅವರಿಂದ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಕನ್ನಡ ಕಂಡ ಹಲವು ಸಾಕ್ಷ್ಯ ಚಿತ್ರಗಳಿಗೆ ಕೈ ಜೋಡಿಸಿರುವ ಪರಮೇಶ್ ಈಗ ತಮ್ಮದೇ ‘ಸಿ ಲಿಸನ್’ ಸ್ಟುಡಿಯೋ ಹೊಂದಿದ್ದಾರೆ. ಇದರಿಂದ ಆದಾಯ ಮಾಡಿಕೊಂಡಿದ್ದಾರೆ ಎನ್ನುವುದಕ್ಕಿಂತ ಆದಾಯ ಮಾಡಿಕೊಟ್ಟಿದ್ದಾರೆ ಎನ್ನುವುದೇ ಒಳ್ಳೆಯದೇನೋ..?

ಸಿನೆಮಾ ಬಗ್ಗೆ ಕರಾರುವಾಕ್ಕಾಗಿ ಮಾತಾಡಬಲ್ಲ ಪರಮೇಶ್ ಹಲವು ಕಾಲೇಜುಗಳಲ್ಲಿ ಅತಿಥಿ ಪ್ರಾಧ್ಯಾಪಕರು. ಒಂದು ಕಾಲಕ್ಕೆ ಕನ್ನಡ ಆಡಿಯೋ ಲೋಕಕ್ಕೆ ಜನಪರ ಗೀತೆಗಳ, ಈಗಲೂ ಕಾಡುವ ಹಾಡುಗಳ ಕ್ಯಾಸೆಟ್ ನೀಡಿದವರು. 
ಸಂಪರ್ಕ: g_paramsvara@yahoo.com

ಟಿ ಎನ್ ಸೀತಾರಾಂ ಹಾಗೂ ಜೋಗಿಯೊಂದಿಗೆ..