ಚಲನ ಚಿತ್ರ ಪ್ರದರ್ಶನ ಮತ್ತು ಸಂವಾದ …

ಅವಿರತ ವತಿಯಿಂದ “ಪ್ರಪಾತ” ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮ..

ಪ್ರಸ್ತುತ ಜಗತ್ತಿನ ಪ್ರಮುಖ ವೈಜ್ಞಾನಿಕ ಸಾಧನೆಗಳಲ್ಲಿ ‘ವಿಮಾನ’ದ ಹಾರಾಟ ಮಹತ್ತರವೆನಿಸಿದೆ. ನಂಬಿಕೆಯ ತಳಪಾಯವುಳ್ಳ ಮಂಡನೆಯನ್ನೊಪ್ಪದ ವಿಜ್ಞಾನ ವಿಭಾಗಗಳು ಕರಾರುವಾಕ್ಕಾದ ಸಾಕ್ಷ್ಯಾಧಾರಗಳ ಮೊರೆ ಹೋಗುವುದು ಸರ್ವವಿದಿತ. ಇದೆಲ್ಲವುಗಳಾಚಿನ ನಿಲುಕದ ನಕ್ಷತ್ರಗಳು ಹಲವು.

ಅತ್ಯಂತ ಪ್ರಾಚೀನವಾದ ಭಾರತದ ನೆಲದಲ್ಲಿ ಋಷಿಶ್ರೇಷ್ಠರೆನಿಸಿದ ಭಾರದ್ವಾಜ ಮುನಿ ಕೃತ “ವಿಮಾನ ಶಾಸ್ತ್ರ”ವು ಹಲವು ಅಚ್ಚರಿಗಳ ಆಗರ. ವಾಯುಯಾನ ಸಾಧನಗಳನೇಕದರ ವಿನ್ಯಾಸ -ತಂತ್ರಜ್ಞಾನಗಳ ಆಮೂಲಾಗ್ರ ವಿಶ್ಲೇಷಣೆಯ ಭಂಡಾರ. ಇಂಥಹ ಮಹದ್ಗ್ರಂಥದ ಅಡಕಕ್ಕೆ ಭಾಷ್ಯ-ವ್ಯಾಖ್ಯಾನಗಳ ಒದಗಿಸುವುದೇ ಅಲ್ಲದೆ ‘ಮರುತ್ಶಕ್ತಿ’ ಶೀರ್ಷಿಕೆಯ ವಿಮಾನವನ್ನು ಇಸವಿ ೧೮೯೬ ರಲ್ಲೇ ಯಶಸ್ವಿಯಾಗಿ ಉಡ್ಡಯಿಸಿದ ಪ್ರಗಲ್ಭ ಪಾಂಡಿತ್ಯದ ಆನೇಕಲ್ ಸುಬ್ರಾಯ ಶಾಸ್ತ್ರಿಗಳ (ಜೀವಿತಾವಧಿ ಸರಿಸುಮಾರು ಕ್ರಿ.ಶ. ೧೮೬೬ ರಿಂದ ೧೯೪೦) ಮಹತ್ತರವಾದ ಸಾಧನೆ ಇತಿಹಾಸದ ಪುಟಗಳಿಗೆ ಹರಿದು ಬರದಿರುವುದು ವಿಪರ್ಯಾಸ.

ಮಾನ್ಯರ ಸಾಧನೆಗಳ ಕುರಿತು ಸಹಜ ಕುತೂಹಲಿಯಾದ ಶ್ರೀಸಾಮಾನ್ಯನೋರ್ವನು ಅನ್ವೇಷಿಸುತ್ತಾ ಹೋದಂತೆಲ್ಲಾ ವಿವಿಧ ಮಗ್ಗಲು ಅನಾವರಣವಾಗುವ ಸೋಜಿಗದ ಸಂಗತಿಗಳ ಅಭಿವ್ಯಕ್ತಿಯೇ ಈ ಚಲನಚಿತ್ರ. ಪರ ಹಾಗೂ ಅಪರ ಚರ್ಚೆಗಳ ಹಲವು ವಿಚಾರ ಧಾರೆಗಳುಳ್ಳ ವ್ಯಕ್ತಿಯ ಅನುಭವಗಳ ಸರಣಿಯ ಯಥಾವತ್ ದೃಶ್ಯ ದಾಖಲೀಕರಣ ಸಾಹಸವೇ ‘ಪ್ರಪಾತ’.

ಸಮಯ: 3:00pm – 6:00pm

ಸ್ಥಳ : ಶ್ರೀಗಂಧ (ರೇಣುಕಾಂಬ) ಪ್ರೀವ್ಯೂ ಥಿಯೇಟರ್

ಲಾವಣ್ಯ ಟವರ್, 4ನೇ ಮುಖ್ಯರಸ್ತೆ, 18ನೇ ಕ್ರಾಸ್ ಬಿ.ಡಬ್ಲ್ಯು.ಎಸ್.ಎಸ್.ಬಿ. ರಸ್ತೆ ಮಲ್ಲೇಶ್ವರ

ಟಿಕೆಟ್ ಬೆಲೆ = 100ರೂ ಗಳು
ಟಿಕೆಟ್ ಗಾಗಿ ಸಂಪರ್ಕಿಸಿ kts_gowda@yahoo.com

ನಿಮ್ಮ ಟಿಪ್ಪಣಿ ಬರೆಯಿರಿ